ಏಡ್ಸ್‌ ಸೋಂಕಿತರ ಬಗ್ಗೆ ಕೀಳು ಭಾವನೆ ಬೇಡ :ದಿವಾಣಿ ನ್ಯಾಯಾಧೀಶೆ

ಏಡ್ಸ್‌ ಸೋಂಕಿತರ ಬಗ್ಗೆ ಕೀಳು ಭಾವನೆ ಬೇಡ :ದಿವಾಣಿ ನ್ಯಾಯಾಧೀಶೆ  Don't feel inferior towards AIDS patients: Civil Judge

                ಬ್ಯಾಡಗಿ 13 :  ಏಡ್ಸ್‌ ನಿಯಂತ್ರಿಸುವಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸಬೇಕು, ಮುಖ್ಯವಾಗಿ ಹೆಚ್ ಐ ವಿ ಸೋಂಕಿತಕ್ಕೆ ಒಳಗಾದ ವ್ಯಕ್ತಿಗಳನ್ನು ತಿರಸ್ಕಾರ ಅಥವಾ ಅಸಹ್ಯ ಪಡದೆ ಏರ್ಡ್ಸ ಹತ್ತೋಟಿಯಲ್ಲಿ ಇಡಲು ಕಾಲ ಕಾಲಕ್ಕೆ ವೈದ್ಯರ ಸಲಹೆ ಸೂಚನೆ ಪಡೆಯುವಂತೆ ಮಾಡಬೇಕು, ಅಂತಹ ರೋಗಿಗಳನ್ನು ಈ ಸಮಾಜದಲ್ಲಿ ಎಂದಿಗೂ ಕೀಳು ಭಾವನೆಯಿಂದ ನೋಡದೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ರಾಜೇಶ್ವರಿ ಪೌರಾಣಿಕ ತಿಳಿಸಿದರು.ಪಟ್ಟಣದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು  ಪೋಲಿಸ್ ಇಲಾಖೆ ತಾಲ್ಲೂಕು ಆರೋಗ್ಯ ಕೇಂದ್ರ, ಐ ಸಿ ಟಿ ಸಿ ಕೇಂದ್ರ, ಪಿಎಸ್‌ಎಂ ಕಲಾ ಮತ್ತು ವಾಣಿಜ್ಯ ವಿದ್ಯಾಲಯದವರ, ಸಹಯೋಗದೊಂದಿಗೆ ವಿಶ್ವ ಏಟ್ ದಿನಾಚರಣೆ ಹಾಗೂ ವಿಶ್ವಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು  ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದವರು.ಹಿಂದಿನ ಯುವ ಜನತೆ ಹೆಚ್ ಐ ವಿ ಸೋಂಕಿತರಲ್ಲಿ ಜಾಗೃತಿ ಮೂಡಿಸುವುದು, ತಪ್ಪು ತಿಳಿವಳಿಕೆಗಳನ್ನು ನಿವಾರಿಸುವುದು,

                ಶಾಲೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ಹಾಗೂ ಸಮುದಾಯ ಕಾರ್ಯಕ್ರಮಗಳ ಮೂಲಕ ಸೋಂಕು ಹರಡುವಿಕೆಯ ಬಗ್ಗೆ ಮಾಹಿತಿಯನ್ನು ಹರಡುವ ಕೆಲಸ ಮಾಡಿ ಸುರಕ್ಷಿತೆಯ ಅರಿವು ಮೂಡಿಸುವುದರಲ್ಲಿ ಯುವಜನರು ಏಡ್ಸ್‌ ನಿರ್ಮೂಲನೆಗೆ ಸಕ್ರಿಯ ಪಾತ್ರಧಾರಿಗಳಾಗಬೇಕು ಎಂದರು.ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ್ ವಗ್ಗನವರ್ ಮಾತನಾಡಿ ಕಾನೂನಿನ ಸಾಮಾನ್ಯ ಜ್ಞಾನದ ಕೊರತೆಯಿದ್ದು, ಮಾನವ ಹಕ್ಕುಗಳ ಕುರಿತು ಪ್ರತಿಯೊಬ್ಬರೂ ಅರಿಯಬೇಕು. ಈ ಹಕ್ಕುಗಳ ಜತೆಗೆ ಜವಾಬ್ದಾರಿಗಳಿವೆ. ಅವುಗಳನ್ನು ಸಮರ​‍್ಕವಾಗಿ ನಿರ್ವಹಿಏಸಿದರೆ ಅಪರಾಧ ಮುಕ್ತ ಸಮಾಜ ನಿರ್ಮಿಸಬಹುದು ಎಂದು  ತಿಳಿಸಿದರುಆರಕ್ಷಕ ವೃತ್ತ ನೀರೀಕ್ಷಕ ಸಿಪಿಐ ಮಾರ್ತಾಂಡಪ್ಪ ಚಿಕ್ಕಣ್ಣನವರ ಮಾತನಾಡಿ, ಈಗಿನ ಯುವಕರು ಮೋಜು ಮಸ್ತಿಗಾಗಿ ಡ್ರಗ್ಸ್‌ ಮತ್ತು ಮಾದಕ ವಸ್ತುಗಳನ್ನು ಸೇವನೆ ಮಾಡಿ. ಆ ಸಮಯದಲ್ಲಿ ಅವರಿಗೆ ಗೊತ್ತಾಗದೆ ಹಾಗೆ ದೈಹಿಕ ಸಂಪರ್ಕಿಕವಾಗಿ ಈ ರೀತಿ ರೋಗಗಳಿಗೆ ತುತ್ತಾಗುತ್ತಾರೆ. ಆದ್ದರಿಂದ, ಮೋಜು ಮಸ್ತಿಯನ್ನು ಮಾಡಬಾರದು.  

               ಎಲ್ಲಾ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನವನ್ನು ಹರಿಸಿ ಜೀವನದಲ್ಲಿ ಒಳ್ಳೆ ಉದ್ಯೋಗಕ್ಕೆ ಸೇರಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಹಾಲುಂಡಿ ಸಂಕ್ರಾಮಿಕರ ರೋಗ ಶಾಸ್ತ್ರಜ್ಞರು ಬ್ಯಾಡಗಿ ಇವರು ಕಾರ್ಯಕ್ರಮದ ಕುರಿತು ಉಪನ್ಯಾಸವನ್ನು ಮಾಡಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ  ಡಾ: ಪ್ರಶಾಂತ ಎನ್ ಎಸ್ ಪ್ರಾಚಾರ್ಯರು, ರಾಜಣ್ಣ ನ್ಯಾಮತಿ ಸಹಾಯಕ ಸರ್ಕಾರಿ ಅಭಿಯೋಜಕರು ಬ್ಯಾಡಗಿ, ಟಿ ಎಸ್ ಐ ಭಾರತಿ ಕುರಿ, ಡಾ: ಕಾಂತೇಶ್ ಭಜಂತ್ರಿ ತಾಲೂಕು ವೈದ್ಯಾಧಿಕಾರಿಗಳು, ಡಾ : ಸಂತೋಷ್ ಹಾಲುಂಡಿ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು  ಟಿ ಹೆಚ್ ಒ,  ಮಮತಾ ವಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಟಿ ಹೆಚ್ ಒ ಬ್ಯಾಡಗಿ,  ಪ್ರಶಾಂತ ನವಲೆ ಹಿರಿಯ ಮೇಲ್ವಿಚಾರಕರು, ಹಾಗೂ  ಚಂದ್ರಶೇಖರ್ ಡಿ ಎನ್ ಆಪ್ತ ಸಮಾಲೋಚಕರು,ಋಖಿಅ ವಿಭಾಗ ಹಾಗೂ ಃಇಖಒ ಕಾಲೇಜಿನ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.