ಕಬ್ಬು ಬೆಳೆಗಾರ ರೈತರೊಂದಿಗೆ ಜಿಲ್ಲಾಧಿಕಾರಿಗಳ ಸಭೆ
District Collector's meeting with sugarcane farmers
ಕಬ್ಬು ಬೆಳೆಗಾರ ರೈತರೊಂದಿಗೆ ಜಿಲ್ಲಾಧಿಕಾರಿಗಳ ಸಭೆ
ಧಾರವಾಡ 17: ಕಲಘಟಗಿ ಭಾಗದ ರೈತರೊಂದಿಗೆ ಕಬ್ಬು ಸಾಗಾಣಿಕೆ ದರ ನಿಗದಿ ಬಗ್ಗೆ ಇಂದು (ಅ. 17) ಸಂಜೆ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಭೆ ಜರುಗಿಸಿದರು. ಸಭೆಯಲ್ಲಿ ಮಾತನಾಡಿ, ಕಲಘಟಗಿ ತಹಶೀಲ್ದಾರ ಮತ್ತು ಪೊಲೀಸ ಅಧಿಕಾರಿಗಳಿಗೆ ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಜಿಲ್ಲಾಡಳಿತ ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲೆಯ ಎಲ್ಲ ಕಾರ್ಖಾನೆಗಳು ಕಬ್ಬು ಕಟಾವಣೆಯ ದರವನ್ನು ಸರ್ಕಾರದ ನಿಯಮಾನುಸಾರ ತೆಗೆದುಕೊಳ್ಳಬೇಕು. ನಿಯಮಾನುಸಾರ ತೆಗೆದುಕೊಳ್ಳದೇ ಇರುವದರಿಂದ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅದೇ ರೀತಿ ಪ್ಯಾರಿ ಶುಗರ್ ಕಾರ್ಖಾನೆಯವರು ಸಹ ನಿಯಮಾನುಸಾರ ಹಣ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. ಬೇರೆ ಪ್ಯಾಕ್ಟರಿ ಸಿಬ್ಬಂದಿಗಳು ರೈತರಿಗೆ ತಪ್ಪು ಮಾಹಿತಿ ನೀಡದಂತೆ ಕ್ರಮವಹಿಸಬೇಕು. ಕಬ್ಬಿಗೆ ಮತ್ತು ಕಬ್ಬು ಸಾಗಾಣಿಕೆಯಲ್ಲಿ ನ್ಯಾಯಯುತ ದರ ನೀಡುವಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ.ವಿನೋದ ಹೆಗ್ಗಳಗಿ, ಕಲಘಟಗಿ ತಹಶಿಲ್ದಾರ ಬಸವರಾಜ ಹೊಂಕಣದವರ, ರೈತ ಮುಖಂಡರಾದ ಮಹೇಶ ಬೆಳಗಾಂವಕರ್, ಉಳವಪ್ಪಾ ಬಡಿಗೇರ, ವಸಂತ ಲಕ್ಕಪ್ಪನವರ, ಪರುಶುರಾಮ ಎತ್ತಿನಗುಡ್ಡ, ಶಿವು ತಡಸ, ಬಸನಗೌಡ ಸಿದ್ದನಗೌಡರ ಸೇರಿದಂತೆ ಇತರ ರೈತ ಪ್ರಮುಖರು, ಅಧಿಕಾರಿಗಳು ಭಾಗವಹಸಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 