ರೈತರ ಜಮಿನುಗಳ ದಾಖಲೆ ಡಿಜಿಟಲಕರಣ ಮಾಡುವದರಿಂದ ರೈತರಿಗೆ ಆಗುವ ಮೋಸ ತೊಂದರೆ ತಡೆಗಟ್ಟಲಿದೆ : ಜಿಲ್ಲಾಧಿಕಾರಿ ಡಾ. ಆನಂದ ಕೆ
Digitization of farmers' land records will prevent fraud and trouble for farmers: District Collecto
ಆಲಮೇಲ: 25 : ತಹಶಿಲ್ದಾರ ಕಛೇರಿಗೆ ಜಿಲ್ಲಾಧಿಕಾರಿ ಬೇಟಿ ನೀಡಿ ಕಂಧಾಯ ಇಲಾಖೆಯ ಭೂ ಸುರಕ್ಷಾ ಯೋಜನೆಯಡಿ ಮೂಲ ದಾಖಲೆಗಳು ಡಿಜಿಟಲಕರಣಗೊಳಿಸು ಕಾರ್ಯ ಪ್ರಗತಿತಲ್ಲಿದ್ದು ಆದಸ್ಟು ಬೇಗ ಪೂರ್ಣಗೊಳಿಸಿ ಆನಲೈನ ವ್ಯವಸ್ಥೆ ವದಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೆಳಿದರು. ಬುಧವಾರ ಆಲಮೇಲ ತಹಶಿಲ್ದಾರ ಕಛೇರಿಗೆ ಬೇಟಿ ನೀಡಿ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರೀಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೆಳಿದ ಅವರು. ರೈತರ ಜಮಿನುಗಳ ಎಲ್ಲ ದಾಖಲೆಗಳನ್ನು ಡಿಜಿಟಲಕರಣ ಮಾಡುವದರಿಂದ ರೈತರಿಗೆ ಯಾವುದೆ ಮೋಸ ತೊಂದರೆ ತಡೆಗಟ್ಟಲಿದೆ ಎಂದರು. ಬೂ ಯೋಜನೆ ಮೂಲಜ ರೈತರ ಜಮಿನಿನ ಮೂಲ ಧಾಖಲೆಗಳು ಡಿಜಿಟಲಕರಣ ಮಾಡಿ ಆನಲೈನ ವ್ಯವಸ್ಥೆ ಮಾಡಲಾಗುತ್ತಿದೆ.
ಎಲ್ಲವೂ ಆನೈನ ಬಳಿಕ ಯಾವುದೆ ಅ ವ್ಯವಹಾರ ನಡೆಯದಂತೆ ತಡೆಗಟ್ಟಲು ಸರ್ಕಾರ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಬೇಸಿಗೆ ಪ್ರಾರಂಭಗೊಂಡಿದ್ದು ಕುಡಿವ ನೀರಿನ ವ್ಯವಸ್ಥೆ ತೊಂದರೆಯಾಗದಂತೆ ಮುಂಜಾಗ್ರತೆಯ ಆಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಹಾಗೆ ಕುಡಿಯುವ ನೀರಿ ಯೋಜನೆ ಕುಂಟಿತಗೊಂಡಿದ್ದು ಅದನ್ನು ವ್ಯಗ ನೀಡಿ ಆದಸ್ಟು ಬೇಗ ಕಾಮಗಾರಿ ಪೂರ್ಣಗೊಳಿಸ ಸಂಬಂದ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಅತಿಕ್ರಮಣ ರಸ್ತೆ ತೆರವಿಗೆ ಮನವಿ. ದಲಿತ ಸಂಘಟನೆಯ ಮುಖಂಡ ಹರಿಶ ಎಂಟಮಟನ ರುಕುಂಪೂರ ರಸ್ತೆ ಅತಿಕ್ರಮಣಗೊಂಡಿದ್ದು ಅದನ್ನು ತೆರವು ಮಾಡಿ ಸಾರ್ವಜನಿಕ ಅನಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು.
ಅದಕ್ಕೆ ಜಿಲ್ಲಾಧಿಕಾರಿಗಳು ತಹಶಿಲ್ದಾರ ಮತ್ತು ಪಟ್ಟಣ ಪಂಚಾಯಿತಿ ಸಿಓ ಅವರಿಗೆ ರಸ್ತೆಯ ಮೂಲ ದಾಖಲೆಗಳನ್ನು ಪಡೆದುಕೊಂಡು ಅತಿಕ್ರಮಣ ಗೊಂಡಿದ್ದರೆ ಕಾನೂನು ರೀತಿ ಕ್ರಮಕೈಗೊಂಡು ತೆರವುಗೊಳಿಸಿ ಅತಿಕ್ರಮಣ ಆಗಿರದಿದ್ದರೆ ಯಾರಿಗೆ ಸಂಬಂದಿಸಿರುತ್ತದೆಯೋ ಅವರಿಗೆ ಪರಿಹಾರ ನಡಿ ತಮ್ಮ ವ್ಯಾಪ್ತಿಗೆ ಓಳಪಡಿಸುಕೊಳಬೇಕು ಈ ಕೆಲಸ ವಿಳಂಬ ಮಾಡದೆ ತುರ್ತಾಗಿ ಮಾಡಬೇಕು ಎಂದು ಸೂಚುಸಿದರು. ಹಾಗೆ ಪಟ್ಟಣದ ವಿವಿದ ಇಲಾಖೆಯ ಸರಕಾರಿ ಜಾಗವು ಉಳ್ಳವರ ಪಾಲಗಿದ್ದು ಈ ಬಗ್ಗೆನು ಪರೀಶೀಲಿಸಿ ಸರ್ಕಾರಿ ಜಾಗವನ್ನು ವಶಪಡಿಸಿಕೊಂಡು ಪಂಚಾಯಿಗೆ ಆದಯ ಮಾಡಿಕೊಳಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದರು.ಹಾಗೆ ಸಾರ್ವಜನಿಕ ಕುಂದುಕೊರತೆನು ಆಲಿಸಿದರು.ತಹಶಿಲ್ದಾರರ ಮಲ್ಲಿಕಾರ್ಜುನ ಅರಕೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ನಿರಿಕ್ಷಕ ಎಂ.ಎ. ಅತ್ತಾರ, ಶಿರಸದ್ತಾರ ಪುಲಕೇಶಿ ಮೂಕಿಹಾಳ ಹಾಗೂ ವಿವಿದ ಇಲಾಖೆ ಅಧಿಕಾರಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 