ಆಯೋಗದ ಪಟ್ಟಿಯಿಂದ ಮೇದಾರ ಜಾತಿಯನ್ನು ಕೈ ಬಿಡಲು ಆಗ್ರಹ

ಆಯೋಗದ ಪಟ್ಟಿಯಿಂದ ಮೇದಾರ ಜಾತಿಯನ್ನು ಕೈ ಬಿಡಲು ಆಗ್ರಹ Demand to remove Medara caste from the Commission's list

ಆಯೋಗದ ಪಟ್ಟಿಯಿಂದ ಮೇದಾರ ಜಾತಿಯನ್ನು ಕೈ ಬಿಡಲು ಆಗ್ರಹ 

ಯಮಕನಮರಡಿ 11: ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವಗ್ಗಳ ಅಯೋಗವು ಸೆಪ್ಟೆಂಬರ 22 ರಿಂದ ಕೈಗೊಳ್ಳುವ ಸಾಮಾಜಿಕ ಮತ್ತು ಶೈಕಣಿಕ ಸಮೀಕ್ಷೆ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿರುವ ಹೊತ್ತಲ್ಲಿ ಕೆಲವೊಂದು ಗೊಂದಲಮಯಕ್ಕೆ ನಾಂದಿಹಾಡಿದೆ ಇದಕ್ಕೆ ಕಾರಣ ಸು:ಕರಾಹಿಂವಾ/ಸಕೋ/ಸಿಆರ್‌-23/2025-26 ಸರಕಾರದ ಆದೇಶ ಸಂಖ್ಯೇ ಹಿಂವಕ 289 ಬಿಸಿಎ 2025 ದಿ: 13/08/2025 ರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು (ಪರಿಶಿಷ್ಟ ಜಾತಿ ಮತ್ತು ಪರಶಿಷ್ಟ ಪಂಗಡ ಹೊರತುಪಡಿಸಿ) ಸುಮಾರು 1400 ಜಾತಿ ಮತ್ತು ಉಪ ಜಾತಿಗಳನ್ನು ಒಳಗೊಂಡ ಒಂದು ಪ್ರಕಟಿತ ಪಟ್ಟಿ ಬಿಡುಗಡೆಗೊಳಿಸಿದೆ.  

ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಮಂತ್ರಾಲಯ ಎಥಿಚಿಚಿ 10-1934(ಖಚಿಞಚಿ)  ದಿ.31 ಮೇ 2012ಕ್ಕೇ ಸಂಬಂಧಿಸಿದಂತೆ ಕೇಂದ್ರ ಸರಕಾರದ ರಾಜ್ಯ ಪತ್ರದನ್ವಯ ಭಾರತ ಸರಕಾರದ ಅಧಿಸೂಚನೆ ಸಂಖ್ಯೇ ಃಅ-120156/34/76-ಖಅಖಿ-ಗಿ, ದಿನಾಂಕ : 27-07-1977 ರಲ್ಲಿ ಹೊರಡಿಸಿರುವ ಪರಶಿಷ್ಟ ಪಂಗಡದ ಪಟ್ಟಿಯಲ್ಲಿನ ಕ್ರ ಸಂ 37 ರಲ್ಲಿ ನಮೂದಿಸಿದ ಮೇದ, ಮೇದಾರಿ, ಗೌರಿಗ ಮತ್ತು ಬುರುಡ ಜಾತಿಗಳ ಜೊತೆಗೆ ಮೇದಾರ ಜಾತಿಯನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಲಾಗಿದೆ. ಇವತ್ತಿಗೆ ಸುಮಾರು 13 ವರ್ಷಗಳು ಕಳೆದಿವೆ. 2012ರ ಕ್ಕಿಂತ ಮೊದಲು ಮೇದಾರ ಜಾತಿಯು ಕೂಡ ಹಿಂದುಳಿದ ಪ್ರವರ್ಗ -1 ರಲ್ಲಿ ಇದ್ದಿದ್ದು ಸತ್ಯ. ಆದರೆ ಅದನ್ನೆ ಈಗಲೂ ಕೂಡ ಕರ್ನಾಟಕ ರಾಜ್ಯ ಹಿಂದೂಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಹಾಗೆ ಪ್ರಕಟಿತ ಅ.ಸಂ. 851 ಮೇದಾರ/ಮೆದರ ಲಿಂಗಾಯತ ಮತ್ತು ಅ.ಸಂ.852-ಮೇದಾರ/ಮೇದಾರಿ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿಕೊಂಡು ಮೇದಾರ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. ಮೇದಾರ ಜಾತಿಯು 2012 ರ ನಂತರ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾಗಿದೆ.  

ಇದರ ಕುರಿತು ಎಲ್ಲ ಮೇದಾರ ಸಮಾಜದ ಬಾಂಧವರು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ಆರ್ ನಾಯ್ಕ ಅವರ ಹತ್ತಿರ ವಿನಂತಿ ಎಂದರೆ ಮೇದಾರ ಜಾತಿಯು ಹಿಂದುಳಿದ ವರ್ಗಗಳಿಗೆ ಒಳಪಟ್ಟಿರುವುದಿಲ್ಲ. ಹಾಗಿರುವಾಗ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ ಅವರನ್ನು ಗುರ್ತಿಸಲು ಹೇಗೆ ಅವಕಾಶ ಮಾಡಿಕೊಡಲು ಸಾಧ್ಯ ಎಂಬ ಪ್ರಶ್ನೆ ಮೇದಾರ ಜಾತಿಯ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಿರುವ ಗೊಂದಲವಾಗಿದೆ. ಅದಕ್ಕೆ ತಾವುಗಳು ಆದಷ್ಟು ಬೇಗ ತಮ್ಮ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಗುರ್ತಿಸಿರುವ ಪಟ್ಟಿಯಿಂದ ಮೇದಾರ ಜಾತಿಯನ್ನು ಕೈ ಬಿಡಬೇಕು. ಒಂದು ವೇಳೆ ಮೇದಾರ ಜಾತಿಯು ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುತ್ತದೆಯೆಂದು ಉಪನ್ಯಾಸಕ ವಿಜಯಕುಮಾರ ಗಂ ಮೇದಾರ  ಎಚ್ಚರಿಸಿದ್ದಾರೆ.