ದಾನಮ್ಮನವರ ಚರಿತ್ರೆ ಮತ್ತು ಅವರು ಸಮಾಜಿಕ ಮತ್ತು ಧಾರ್ಮಿಕ ಸಾಧನೆಗಳು ಮಾದರಿ
Danamma's history and her social and religious achievements are exemplary
ಹಾವೇರಿ 21 :ಜಗತ್ತಿನಲ್ಲಿಯೇ ಧಾರ್ಮಿಕ ಕ್ಷೇತ್ರಕ್ಕೆ ಭಾರತದಲ್ಲಿ ವಿಶಿಷ್ಠವಾದ ಮತ್ತು ಗೌರವಯುತವಾದ ಸ್ಥಾನವಿದೆ ಎಂದು ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರು ಹೇಳಿದರು.
ನಗರದ ದಾನಮ್ಮದೇವಿ ದೇವಸ್ಥಾನದ 19 ನೇ ವರ್ಷದ ಜಾತ್ರಾ ಮಹೋತ್ಸದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಕಾಲ ಕಾಲಕ್ಕೆ ಸಂತ ಮಹಂತರು, ಶರಣ ಶರಣೆಯರು, ದಾಸರು, ಮಹಾತ್ಮರು ಜನಿಸಿ ಆದರ್ಶವಾದ ಬದುಕನ್ನು ಬಾಳುವುದರ ಜೊತೆಗೆ ಅಮೂಲ್ಯವಾದ ತತ್ವಾದರ್ಶಗಳನ್ನು ಜಗತ್ತಿಗೆ ನೀಡಿ, ಸಾಮಾನ್ಯರಿಗೂ ಭಕ್ತಿ ಮತ್ತು ಜ್ಞಾನವನ್ನು ನೀಡಿ ಉದ್ದರಿಸಿರುತ್ತಾರೆಂದರು. ದಾನಮ್ಮನವರ ಚರಿತ್ರೆ ಮತ್ತು ಅವರು ಸಮಾಜಿಕ ಮತ್ತು ಧಾರ್ಮಿಕ ಸಾಧನೆಗಳು ಮಾದರಿಯಾಗಿವೆ ಎಂದರು.
ಸಾನಿಧ್ಯವಹಿಸಿದ್ದ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿ ಮಾತನಾಡಿ ಕಲ್ಯಾಣದ ಶರಣರು ಸ್ತ್ರೀ ಸಮಾನತೆಯ ಹರಿಕಾರರು.ಈ ಸಮಾನತೆಯ ಕಾರಣದಿಂದಾಗಿಯೇ ಅನೇಕ ಶರಣೆಯರು ಅನುಭವ ಮಂಟಪದಲ್ಲಿ ಸೇರುವಂತಾಯಿತು. ಲಿಂಗಪೂಜೆ ದಾಸೊಹ ಸೇವೆ, ಸಾಮಾಜಿಕ ಸೇವೆಯಿಂದಲೇ ಲಿಂಗಮ್ಮ ದಾನಮ್ಮನಾದಳು.12ನೇ ಶತಮಾನದ ಕಾಲಘಟ್ಟದಲ್ಲಿಯೇ ಸಾಮೂಹಿಕ ವಿಹಾಹಗಳಿಗೆ ನಾಂದಿ ಹಾಡಿದ ಮಾಹಾಶರಣೆ ದಾನಮ್ಮ. ನಿತ್ಯ ನಿತ್ಯ ಲಿಂಗಾರ್ಚನೆ ಶಿವಯೋಗ ಸಾಧನೆ ಮಾಡುವುದರಿಂದ ಅಪಮೃತ್ಯುಗಳು ತಪ್ಪುವುದಾಗಿ ಶರಣರು ಹೇಳಿ ನಡೆ ನುಡಿ ಒಂದಾದ ಸಾರ್ಥಕ ಜೀವನ ನಡೆಸಿದರು ಎಂದರು.
ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ ಮಾತನಾಡಿ ಬಸವಣ್ಣನವರೇ ಶರಣ ಸಂಕುಲದ ಕೇಂದ್ರ ಬಿಂದು, ಆದರ್ಶ ಕೇವಲ ಮಾತಿನಲ್ಲಿನಲ್ಲಿರಬಾರದು ಆಚರಣೆಯಲ್ಲಿರಬೇಕು. ಸಮಸಮಾಜದ ನಿರ್ಮಾಣ ಮತ್ತು ಸ್ತ್ರೀ ಸಮಾನತೆಯ ಕಾರಣದಿಂದಲೇ 12 ನೇ ಶತಮಾನದ ಕ್ರಾಂತಿಯಾದದ್ದು ಇತಿಹಾಸವಾಗಿದೆ. ದಾನಮ್ಮ ಸೇವೆ ಮತ್ತು ದಾಸೋಹದ ಪ್ರತೀಕವಾಗಿದ್ದಾರೆ.ರಾಮದುರ್ಗದ ಶರಣ ಶಾಹಿತಿ ಪ್ರೋ ಸಿದ್ದಣ್ಣ ಲಂಗೋಟಿ ಮಾತನಾಡಿದರು.
ದೇವಸ್ಥಾನ ಟ್ಟಸ್ಟ ಕಮೀಟಿ ಅಧ್ಯಕೆ ಶೊಭಾತಾಯಿ ಮಾಗಾವಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದೇವಸ್ಥಾನವು ಭಕ್ತರ ಸಹಾಕಾರದಿಂದ ಕಾಲ ಕಾಲಕ್ಕೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ದಿ ರಾಜಶೇಖರ ಮಾಗಾವಿ ಅವರ ಸ್ಮರಣಾರ್ಥ ಕೊಡಲ್ಪಡುವ ಆದರ್ಶ ದಂಪತಿಗಳ ಸನ್ಮಾನವನ್ನು ರಾಮದುರ್ಗದ ಶರಣ ಸಾಹಿತಿ ಸಿದ್ದಣ್ಣ ಲಂಗೋಟಿ ಕಲ್ಯಾಣಮ್ಮ ಲಂಗೋಟಿ ದಂಪತಿಯವರಿಗೆ ಹಾಗೂ ಲೀಲಾವತಿ ಸಿದ್ದೇಶ್ವರ ಮಾಗಾವಿ ಅವರಿಂದ ಕೊಡಲ್ಪಡುವ ವರ್ಷದ ವ್ಯಕ್ತಿ ಶ್ರೀ ದಾನೇಶ್ವರಿ ಪ್ರಶಸ್ತಿಯನ್ನು ಹಾವೇರಿಯ ಹಿರಿಯ ಸಾಹಿತಿ ಸಿದ್ದುಮತಿ ನೆಲವಿಗಿ ಅವರಿಗೆ ಪ್ರಧಾನ ಮಾಡಲಾಯಿತು.ಬೆಳಿಗ್ಗೆ ನಡೆದ ಕಾರ್ಯಕ್ರದಲ್ಲಿ ಶಿವಯೊಗಿ ಶಿವಾಚಾರ್ಯ ಸ್ವಾಮಿಜಿ ಗುರುಪಾದದೇವರಮಠ ಹಾವೇರಿ ಅವರು ಷಟಸ್ಥಲ್ ದ್ವಾಜಾರೊಹಣ ಮಾಡಿ ಆಶಿರ್ವಚನ ನೀಡಿದರು.ಗುರುವಾರ ಬೆಳಿಗ್ಗೆ ನಡೆದ ದಾನಮ್ಮದೇವಿ ಪಾಲಕಿ ಉತ್ಸವ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಹರಸೂರು ಬಣ್ಣದಮಠ ಅವರ ಸಾನಿಧ್ಯದಲ್ಲಿ ಜರುಗಿತು. ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಶಿವಯೋಗಿ ಅಂಗಡಿ ವಂದಿಸಿದರು ಲಕ್ಕಣ್ಣ ಸಹೋದರಿಯರು ಪ್ರಾರ್ಥಿಸಿದರು.
ಕಾರ್ಯಕ್ರದಲ್ಲಿ ನಗರಸಭಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಗೀರೀಶ ತುಪ್ಪದ, ಶಿವಪ್ಪ ಕೋರಿಶೆಟ್ಟರ ಬೆಳಗಾವೆಪ್ಪ ಬೆಳಗಾವಿ, ಅಜಿತ ಮಾಗಾವಿ, ಸಂದಿಪ ಮಾಗಾವಿ, ಶಂಭುಲಿಂಗಪ್ಪ ಹಂದ್ರಾಳ, ಸಂಜಯ ಮಾಗಾವಿ, ಮಹಾಂತಪ್ಪ ಹಲಗಣ್ಣನವರ, ಪ್ರಕಾಶ ಹಂದ್ರಾಳ, ವಿ.ಜಿ ಯಳಗೇರಿ, ಶಿವಬಸಪ್ಪ ಮುದ್ದಿ, ನಿಜಲಿಂಗಪ್ಪ ಕಾಳೆ, ಶಿವಯೋಗಿ ಮುದ್ದಿ, ಶಿವಬಸಪ್ಪ ಚೌಶೆಟ್ಟಿ, ಅಂದಾನೆಪ್ಪ ಗಡಾದ, ಮುರಿಗೆಪ್ಪ ಕಡೇಕೊಪ್ಪ, ಗಂಗಣ್ಣ ಮಾಸೂರ ಉಳಿವೆಪ್ಪ ಪಂಪಣ್ಣನವರ, ಶಿವಯೋಗಿ ಬೆನ್ನೂರ, ಸಿ.ಜಿ ತೊಟಣ್ಣನವರ, ಶಿವಯೋಗಿ ಅಂಗಡಿ, ನಿರಂಜನ ತಾಂಡೂರ, ಶಿವಬಸಪ್ಪ ಹಲಗಣ್ಣನವರ, ಶಿವಲಿಂಗಪ್ಪ ಕಲ್ಯಾಣಿ, ಗುರಣ್ಣ ಸಿಮೀಕೇರಿ, ವಿರುಪಾಕ್ಷಪ್ಪ ಹತ್ತಿಮತ್ತೂರ ಜಗದೀಶ ಹತ್ತಿಕೋಟಿ, ಸಂತೋಷ ಮಾಸೂರ, ಶಿವಯೋಗಿ ವಾಲಿಶೆಟ್ಟರ, ಶಿವಯೋಗಿ ಮನ್ನಂಗಿ, ಶಿವರಾಜ ಕಾಯಕದ ನಾಗಪ್ಪ ಹಾವೇರಿ ಸುರೇಶಬಾಬು ಯಳಮಲ್ಲಿ ಸುರೇಶ ರೊಡ್ಡಪ್ಪನವರ, ಹಲಗಲಿ ಅರ್ಚಕರಾದ ಕುಮಾರಸ್ವಾಮಿ ನರೇಂದ್ರಮಠ, ಚಂದ್ರಶೇಖರಯ್ಯ, ಬಸವರಾಜ ಲೀಲಾವತಿ ಮಾಗಾವಿ, ಗಿರಿಜಮ್ಮ ತಾಂಡೂರ, ಸುಂದರಕ್ಕ ತುಪ್ಪದ, ನೀಲವ್ವ ಯರೇಸಿಮಿ, ಗಂಗವ್ವ ನಂದಿವಾಡ, ವಿಜಯಲಕ್ಷ್ಮಿ ಮಾಸೂರ, ರಾಜೇಶ್ವರಿ ಯಳಮಲ್ಲಿ, ಜಯಶ್ರೀ ಮರ್ತೂರ, ಉಮಾದೇವಿ ವಾಲಿಶೆಟ್ಟರ ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.ಮಹಾದಾಸೋಹದ ವ್ಯವಸ್ಥೆ ಮಾಡಲಾಗಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 