ಕೇಂದ್ರ ಸಚಿವ ಅನುಧಾನದಲ್ಲಿ ಸಾಂಸ್ಕೃತಿಕ ಸಮುದಾಯ ಭವನಕ್ಕೆ ಚಾಲನೆ

ಕೇಂದ್ರ ಸಚಿವ ಅನುಧಾನದಲ್ಲಿ ಸಾಂಸ್ಕೃತಿಕ ಸಮುದಾಯ ಭವನಕ್ಕೆ ಚಾಲನೆ Cultural community hall inaugurated using Union Minister's grant

ಶಿಗ್ಗಾವಿ 03 : ತಾಲೂಕಿನ ಕುನ್ನೂರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸಾಂಸ್ಕೃತಿಕ ಸಮುದಾಯ ಭವನ ನಿರ್ಮಾಣಕ್ಕೆ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಈ 10 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ ಹೇಳಿದರು. ಗ್ರಾಮದ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕೇಂದ್ರ ಸಚಿವ ಜೋಶಿಯವರು ಸಮುದಾಯ ಭವನಕ್ಕೆ ಅನುದಾನ ಮಂಜೂರು ಮಾಡಿರುವುದು ಗ್ರಾಮಸ್ಥರ ಪಾಲಿಗೆ ಸಂತಸದ ವಿಷಯವಾಗಿದ್ದು, ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೆನೆ ಎಂದರು. ಈ ಸಂದರ್ಭದಲ್ಲಿ ಸೋಮಯ್ಯ ಹಿರೇಮಠ, ಜಿ.ಪಂ. ಮಾಜಿ ಸದಸ್ಯ ಡಾ. ಶೋಭಾ ನಿಸ್ಸಿಮಗೌಡ್ರ, ಜಿಲ್ಲಾಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಕಾರ್ಯದರ್ಶಿ ನರಹರಿ ಕಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ್ ಚಿಕ್ಕವೀರಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಭರಮಗೌಡ ಪಾಟೀಲ, ನವೀನ ಸವಣೂರ, ಎಲ್‌.ಆರ್‌. ಪಾಟೀಲ ಟಾಕನಗೌಡ ಪಾಟೀಲ್, ಸುರೇಶಗೌಡ ಪಾಟೀಲ, ಗಂಗಪ್ಪ ಹುಲ್ಲೂರ, ಮಲ್ಲೇಶ ದೊಡ್ಡಮನಿ, ಬಸನಗೌಡ ಬ್ಯಾಹಟ್ಟಿ, ಕುನ್ನೂರ್ ಗ್ರಾಮಸ್ಥರು ಉಪಸ್ಥಿತರಿದ್ದರು.