ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ : ರಾಜ್ಯ ಮಟ್ಟದ ಮಹಿಳಾ ಸಮಾವೇಶ

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ  :  ರಾಜ್ಯ ಮಟ್ಟದ ಮಹಿಳಾ ಸಮಾವೇಶ Crime against women and children: State level women's conference

             ಕೊಪ್ಪಳ  07:  ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ಖಂಡಿಸಿ ಂಋಖಖ ನಿಂದ ರಾಜ್ಯ ಮಟ್ಟದ ಮಹಿಳಾ ಸಮಾವೇಶ.ಮಹಿಳೆಯರು ಮತ್ತು ಮಕ್ಕಳ ಮೇಲೆ ನಾನಾ ರೀತಿಯ ದೌರ್ಜನ್ಯಗಳು ಹೆಚ್ಚುತ್ತಿವೆ. ಆಘಾತದ ಸಂಗತಿಯೆಂದರೇ ಅತ್ಯಾಚಾರ-ಗುಂಪು ಅತ್ಯಾಚಾರ ಮತ್ತು ಕೊಲೆ, ಬಾಲ ಗರ್ಭಧಾರಣೆ, ಆಸಿಡ್ ದಾಳಿ, ಸ್ತ್ರೀಬ್ರೂಣ ಹತ್ಯೆ, ಹೆಣ್ಣು ಮಕ್ಕಳ ಕಳ್ಳಸಾಗಣೆ, ಮರ್ಯಾದೆಗೇಡು ಹತ್ಯೆಗಳು ದಿನನಿತ್ಯದ ಘಟನೆಗಳಾಗಿವೆ. ಎನ್ ಸಿ ಆರ್ ಬಿ ವರದಿ ಪ್ರಕಾರ 7 ನಿಮಿಷಕ್ಕೊಂದು ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ದಾಖಲಾಗದ ಪ್ರಕರಣಗಳು ಅದೆಷ್ಟೋ! ಇಂತಹ ಅಪರಾಧಗಳ ವಿರುದ್ಧ ಸಮರ ಹೂಡುವ ಆಶಯ ದೊಂದಿಗೆ ರಾಜ್ಯವ್ಯಾಪಿ ನಾಲ್ಕು ತಿಂಗಳ ಕಾಲ ಸಭೆ, ಸಮಾವೇಶ,

            ಸಹಿ-ಸಂಗ್ರಹಣೆಯನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಇಂದು ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಭವನದಲ್ಲಿ ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಳಾಗಿತ್ತು .ಸಮಾವೇಶದ ಉದ್ಘಾಟಕರಾಗಿ ಹಿರಿಯ ರಂಗಕರ್ಮಿಗಳಾದ ಪ್ರೊ.ರಾಮೇಶ್ವರಿ ವರ್ಮಾರವರು ಮಾತನಾಡುತ್ತಾ- ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದಿವೆ. ಆದರೆ ನೋವಿನ ವಿಷಯವೆಂದರೆ ಮಹಿಳೆಯರ ಮೇಲೆ ದಿನಂಪ್ರತಿ ಹಿಂಸೆ -ಅಗೌರವಗಳು ಹೆಚ್ಚುತ್ತಲೇ ಇವೇ. ಕಾರಣ ಮಹಿಳಾ ಕಾಳಜಿಯಿರುವ ವ್ಯವಸ್ಥೆಯಿಲ್ಲ, ರಾಜಕೀಯ ಆಳ್ವಿಕೆಯಿಲ್ಲ.  

            ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ಮರ್ಯಾದಾಗೇಡು ಹತ್ಯೆ, ಹಾಸನದ ಪೆನ್ ಡ್ರೈವ್ ಪ್ರಕರಣ, ಉನ್ನವೋ ಮತ್ತು ಬಿಲ್ಕಿಸ್ ಬಾನು ಅಪರಾಧಿಗಳಿಗೆ ಮಾಲೆ ಹಾಕಿ, ಲಡ್ಡು ಹಂಚಿ ಸಂಭ್ರಮಿಸಿದ ನಡೆ ವಿಕೃತತೆಯ ಪರಾಕಾಷ್ಠೆಯ, ಮಾನವೀಯ ಮೌಲ್ಯಗಳ ಸಾವಿನ ಪ್ರತೀಕವಾಗಿವೆ. ಬಂಡವಾಳಶಾಹಿಗಳ ಲಾಭದಾಹ, ಯುದ್ಧೊಪಕರಣಗಳ ಮಾರಾಟದ ಹುನ್ನಾರ ಯುದ್ಧಗಳನ್ನು ಹುಟ್ಟುಹಾಕುತ್ತಿವೆ. ಯುದ್ಧಗಳಲ್ಲೂ ಮೊದಲ ಬಲಿಪಶುಗಳು ಮಹಿಳೆಯರು ಮತ್ತು ಮಕ್ಕಳು. ಇನ್ನೊಂದೆಡೆ ಮಾಧ್ಯಮಗಳು ಕ್ರೌರ್ಯ-ಹಿಂಸೆ ಅನಾಚಾರಗಳನ್ನು ವೈಭವಿಕರಿಸುತ್ತಿವೆ. ಅದರ ಪರಿಣಾಮ ಹಾಡಹಗಲೇ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ.

          ಇವೆಲ್ಲವನ್ನು ತಡೆಗಟ್ಟಲು ಪ್ರಜ್ಞಾವಂತ ಜನಗಳು ಪ್ರತಿಭಟಿಸಬೇಕಿದೆ ಎಂದು ಕರೆ ನೀಡಿದರು.ಮುಖ್ಯ ಅಥಿತಿಗಳಾಗಿ ಮಾತನಾಡಿದ ಎಸ್ ಯು ಸಿ ಐ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ಉಮಾ - ನವೋದಯ ಚಳುವಳಿಯಲ್ಲಿ ಮಹಿಳಾ ವಿಮೋಚನೆಯ ಘೋಷಣೆ ಕೇಳಿಬಂದವು. ವಿದ್ಯಾಸಾಗರ, ಸಾವಿತ್ರಿ ಬಾಯಿ ಫುಲೆ, ನೇತಾಜಿ, ಶರತ್ ಚಂದ್ರ, ಕುದ್ಮಲ್ ರಂಗರಾವ್ ಮೊದಲಾದವರು ಮಹಿಳೆಯರ ಪರವಾಗಿ, ತುಳಿತಕ್ಕೊಳಗಾದವರಪರ ಧ್ವನಿಯೆತ್ತಿದರು. ಆದರೆ ಆ ಘೋಷಣೆಗಳು ಇಂದು ಸಂಪೂರ್ಣ ಕಣ್ಮರೆಯಾಗಿವೆ. ಕಾರಣ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜಿ ಪಂಥ ಮೇಲುಗೈ ಸಾಧಿಸಿತು.  

         ಪರಿಣಾಮ ನೈಜ ಪ್ರಜಾತಾಂತ್ರಿಕ ಮೌಲ್ಯಗಳು, ಮಹಿಳಾ ವಿಮುಕ್ತಿ ಆಶಯಗಳು ಗಾಳಿಗೆ ತೂರಲ್ಪಟ್ಟವು. ಬಂಡವಾಳಶಾಹಿಗಳ ಆರ್ಥಿಕ ಲಾಭದ ಮನಸ್ಥಿತಿ ಹೆಣ್ಣುಮಕ್ಕಳನ್ನು ಒಂದು ಸರಕನ್ನಾಗಿ ಮಾಡಿದೆ. ಉನ್ನತ ನೀತಿ -ಸಂಸ್ಕೃತಿ, ಮೌಲ್ಯಗಳು ನಾಶವಾಗುತ್ತಿವೆ. ಮೂಲತಃ ನಮ್ಮದು ಮಾತೃಪ್ರಧಾನ ಸಮಾಜವಾಗಿತ್ತು, ಖಾಸಗಿ ಆಸ್ತಿಯ ಉಗಮ ಅವಳ ಶೋಷಣೆಗೆ ಅಡಿಪಾಯ ಹಾಕಿತು. ಸಮ ಸಮಾಜವನ್ನು ಕಟ್ಟಲು ಮಹಿಳೆಯರು ಸೈದ್ಧಾಂತಿಕವಾಗಿ, ಸಂಘಟನಾತ್ಮಕವಾಗಿ ಗಟ್ಟಿಯಾಗಬೇಕು, ಬಲಿಷ್ಠ ಮಹಿಳಾ ಚಳುವಳಿಗಳನ್ನು ಕಟ್ಟಬೇಕು. ಶೋಷಿತ ದುಡಿಯುವ ವರ್ಗದ ಜೊತೆಗೆ ಕೈಜೋಡಿಸಿ ಮಹಿಳೆಯರು ತಮ್ಮ ನೈಜ ವಿಮುಕ್ತಿಯನ್ನು ಸಾಧಿಸಬೇಕು ಎಂದು ಕರೆನೀಡಿದರು.   

       ಸಮಾವೇಶದ ಮೊದಲ ಘೋಷ್ಠಿಯಲ್ಲಿ ನಿಮ್ಹಾನ್ಸ್‌ ನ ಮನಶಾಸ್ತ್ರ ವಿಭಾಗದ ವೈದ್ಯರಾದ ಡಾ: ಶ್ರೀದೇವಿ ಕುಮಾರ್ ಹಾಗೂ ಎ ಐ ಎಂ ಎಸ್ ಎಸ್ ನ ರಾಷ್ಟ್ರ ಉಪಾಧ್ಯಕ್ಷರಾದ ಡಾ: ಸುಧಾ ಕಾಮತ್ , ’ಮಹಿಳೆಯರು ಮತ್ತು ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳ ದುಷ್ಪರಿಣಾಮಗಳ ಕಾರಣ ಮತ್ತು ಪರಿಹಾರಗಳ’ ಕುರಿತು ಮಾತನಾಡಿದರು, ಎರಡನೇ ಘೋಷ್ಠಿಯಲ್ಲಿ ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಸಬಿಹಾ ಭೂಮಿಗೌಡರ್ ಹಾಗೂ ಚಲನಚಿತ್ರ ಗೀತಕಾರರಾದ ಶ್ರೀ ಕವಿರಾಜ್ ರವರು ’ಸಮಾಜದ ಮೇಲೆ ಸಿನೆಮಾದ ಪ್ರಭಾವ’ ಎಂಬ ವಿಷಯದ ಮೇಲೆ ಮಾತನಾಡಿದರು.

          ಪ್ರತಿ ಘೋಷ್ಠಿ ಗಳಲ್ಲಿ ಮುಕ್ತ ಸಂವಾದ ನಡೆಯಿತು. ಎ ಐ ಎಂ ಎಸ್ ಎಸ್ ನ ರಾಜ್ಯ ಅಧ್ಯಕ್ಷರಾದ ಎಂ ಎನ್ ಮಂಜುಳಾ ಪ್ರಾಸ್ತವಿಕ ಮಾತುಗಳ ನ್ನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಎ ಐ ಎಂ ಎಸ್ ಎಸ್ ನ ರಾಜ್ಯ ಕಾರ್ಯದರ್ಶಿಗಳಾದ ಶೋಭಾ ಎಸ್ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷರಾದ ಹರಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ನೂರಾರು ಮಹಿಳೆಯರು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.ಧನ್ಯವಾದಗಳೊಂದಿಗೆ ಸುದ್ದಿ ಇವರಿಂದ ಶಾರದಾ ಗಡ್ಡಿಜಿಲ್ಲಾ ಸಂಘಟನಾ ಸಮಿತಿಯ ಕಾರ್ಯದರ್ಶಿ