ಸಹಕಾರಿ ಸಂಘಗಳು ದೇಶದ ಆರ್ಥಿಕತೆಗೆ ಶಕ್ತಿ ತುಂಬಿವೆ : ಅನುರಾಧಾ ಕಾಪಸಿ,

ಸಹಕಾರಿ ಸಂಘಗಳು ದೇಶದ ಆರ್ಥಿಕತೆಗೆ ಶಕ್ತಿ ತುಂಬಿವೆ : ಅನುರಾಧಾ ಕಾಪಸಿ, Cooperatives have strengthened the country's economy: Anuradha Kapasi,

ಸಹಕಾರಿ ಸಂಘಗಳು ದೇಶದ ಆರ್ಥಿಕತೆಗೆ ಶಕ್ತಿ ತುಂಬಿವೆ : ಅನುರಾಧಾ ಕಾಪಸಿ, 

ಉಳ್ಳಾಗಡ್ಡಿ-ಖಾನಾಪೂರ, 15 : ಕೃಷಿ ಪ್ರಧಾನವಾದ ನಮ್ಮ ಭಾರತದಲ್ಲಿ ಕೃಷಿಕರು ಸಾಲ ಪಡೆಯಬೇಕಾದರೆ ಲೇವಾದೇವಿಯರ ಕಡೆಗೆ ಹೋಗಿ ಸಾಲ ಪಡೆದು ಅತಿ ಹೆಚ್ಚು ಬಡ್ಡಿಯನ್ನು ಕೊಡಬೇಕಾಗುತ್ತದೆ ಸಹಕಾರ ಸಂಘಗಳ ಆರಂಭವಾದ ನಂತರ ಕೃಷಿಕರು, ಮಧ್ಯಮ ವರ್ಗದವರು, ವ್ಯಾಪಾರಸ್ಥರು, ಸರಳವಾಗಿ ಸಹಕಾರ ಸಂಘಗಳ ಮೂಲಕ ಸಾಲ ಪಡೆದುಕೊಂಡು ತಮ್ಮ ಆರ್ಥಿಕ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷ ಅನುರಾಧಾ ಕಾಪಸಿ ಹೇಳಿದರು. 

  ಅವರು ರವಿವಾರ ದಿ 14 ರಂದು ಹತ್ತರಗಿಯ ಶ್ರೀ ಗಾಯತ್ರಿ ಕೋ ಅಪ್ ಕ್ರೆಡಿಟ್ ಸೊಸೈಟಿಯ 28 ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು ಕರ್ನಾಟಕದಲ್ಲಿ ಸಹಕಾರ ಚಳುವಳಿಯು ಆರಂಭಗೊಂಡಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷಯ ಸಾಮಾನ್ಯ ಜನರು ಸರ್ಕಾರಿ ಬ್ಯಾಂಕುಗಳು ಮೂಲಕ ಸಾಲ ಪಡೆಯಲು ಹರಸಾಹಸ ಪಡಬೇಕಾಗುತ್ತದೆ ಆದರೆ ಸಹಕಾರ ಸಂಘಗಳ ಮೂಲಕ ಸುಲಭವಾಗಿ ಸಾಲ ಪಡೆಯಬಹುದು ಎಂದು ಹೇಳಿದರು. 

  ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಮಹಾದೇವ ದಡ್ಡಿಮನಿ ಮಾತನಾಡಿ ಶ್ರೀ ಗಾಯತ್ರಿ ಕೋ ಆಫ್ ಕ್ರೆಡಿಟ್ ಸೊಸೈಟಿಯು ಹೆಮ್ಮರವಾಗಿ ಬೆಳೆಯಲು ಸದಸ್ಯರ ಸಹಕಾರವೇ ಕಾರಣವಾಗಿದೆ ಎಂದು ಹೇಳಿದರು. 

  ಮುಖ್ಯ ಕಾರ್ಯನಿರ್ವಾಹಕ ಎ.ಪಿ ಗಂಭೀರ ಮಾತನಾಡಿ ಸಂಘವು 3898 ಜನ ಸದಸ್ಯರು ಹೊಂದಿದ್ದು 53.88 ಲಕ್ಷ ರೂ ಶೇರು ಬಂಡವಾಳ ಹೊಂದಿದೆ. 29.98 ಕೋಟಿ ಠೇವು ಹೊಂದಿದ್ದು.ನಮ್ಮ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 39,90368.14  ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ 15 ಅ ರಷ್ಟು ಲಾಭಾಂಶ ವಿತರಿಸಲಾಗುತ್ತಿದೆ ತಾ.ಪಂ ಮಾಜಿ ಸದಸ್ಯ ಸುರೇಶ ಬೆಣ್ಣಿ ನಿವೃತ್ತ ಶಿಕ್ಷಕ ಗಿರಿಮಲ್ಲಯ್ಯ ಮಠಪತಿ ಮಾತನಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸುರೇಶ ಹಂಚಿನಾಳ ನಿರ್ದೇಶಕರಾದ ಅಶೋಕ ಬೋರಣ್ಣವರ, ಜಯಂತ ಹಟ್ಟಿ, ದೊಂಡೀಬಾ ಸರನೋಬತ್, ರಾಜೇಂದ್ರ ಕೋಟಮನಿ, ಶಶಿಕಾಂತ ಹಟ್ಟಿ, ನಿರ್ಮಲ ಶಿರಗಾವಿ,  ಗೀತಾ ನಾಶಿಪುಡಿ, ಜಗದೀಶ ಹಟ್ಟಿ, ಶ್ರೀಮತಿ ಮಾ. ಅ. ಭೋರನ್ನವರ, ಹನುಮಂತ ಗಾಡಿವಡ್ಡರ, ಕುಮಾರ ನಾಯಿಕ, ಲಗಮಾ ಡೊಳ್ಳಿ ಹಾಗೂ ಸದಸ್ಯರು ಇದ್ದರು. 

  ಪುಷ್ಪಾ ಮಂಗಾವತಿ ಸ್ವಾಗತಿಸಿದರು. ಬಾಳೇಶ ಉರಬಿನಟ್ಟಿ ಅತಿಥಿಗಳ ಪರಿಚಯ ಮಾಡಿದರು. ಸಂಗೀತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪಿಗ್ಮಿ ಸಂಗ್ರಹಕಾರ  ಸುಚಿತಾ ಜೋಶಿ ಇವರನ್ನು ಸತ್ಕರಿಸಲಾಯಿತು.