ಒಳಮೀಸಲಾತಿ ಅನ್ಯಾಯ ಖಂಡಿಸಿ: ಅಗಸ್ಟ್‌-01 ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ

ಒಳಮೀಸಲಾತಿ ಅನ್ಯಾಯ ಖಂಡಿಸಿ: ಅಗಸ್ಟ್‌-01 ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ Condemning the injustice of internal reservation: Massive protest in front of the District Collecto

ಒಳಮೀಸಲಾತಿ ಅನ್ಯಾಯ ಖಂಡಿಸಿ: ಅಗಸ್ಟ್‌-01 ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ 

ಹಾವೇರಿ    30: ನಗರದ ಸಜ್ಜನರ ಪಂಕ್ಷನ್ ಹಾಲ್‌ನಲ್ಲಿದಲಿತ ಸಂಘಟನಾ ಸಮಿತಿ ಭೀಮಘರ್ಜನೆ ಸಂಘಟನೆಯ ವತಿಯಿಂದ 1463 ನೇ ಗೌತಮ ಬುದ್ಧರ ಜಯಂತಿ,191 ನೇ ವಿಶ್ವಗುರು ಬಸವೇಶ್ವರರ ಜಯಂತಿ,134 ನೇ ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿ,118 ನೇ ಡಾ. ಬಾಬು ಜಗಜೀವನರಾಮ್‌ಜಯಂತಿ ಹಾಹೂ 87ನೇ ಪ್ರೋ. ಬಿ.ಕೃಷ್ಣಪ್ಪ ನವರ ಜಯಂತಿಗಳ ಅಂಗವಾಗಿ ರಾಜ್ಯ ಮಟ್ಟದ ಸಂವಿಧಾನಜಾಗೃತಿ ಹಾಗೂ ಸಂಘಟನೆಯಕಾರ್ಯಕರ್ತರ ಸಮಾವೇಶಜರುಗಿತು.ಗಣ್ಯರಿಂದ ಬುದ್ಧ,ಬಸವ,ಅಂಬೇಡ್ಕರ್,ಜಗಜೀವನರಾಮ್ ಪ್ರೋಕೃಷ್ಣಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಂವಿಧಾನ ಪೀಠಿಕೆಓದುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಸಂಘಟನೆಯ ಸಂಸ್ಥಾಪಕ, ರಾಜ್ಯಾಧ್ಯಕ್ಷರಾದ ತಿರಕಪ್ಪ ಕೆ ಚಿಕ್ಕೇರಿಅವರುಅಧ್ಯಕ್ಷತೆವಹಿಸಿ ಮಾತನಾಡಿ ಮಹಾನ್ ನಾಯಕರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡುವ ಕೆಲಸ ಮಾಡಬೇಕಿದೆ. 

ಸಂವಿಧಾನ ನಮ್ಮೆಲ್ಲರ ಬದುಕಿಗೂಆಶಾಕಿರಣವಾಗಿದೆ.ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಸಂವಿಧಾನದ ಬಗ್ಗೆ ತಿಳಿಯಬೇಕು ಹಾಗೂ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವಕಾರ್ಯ ಮಾಡಬೇಕಿದೆ.ಮಹಾನ್ ನಾಯಕರಜಯಂತಿ ನಿಮಿತ್ತವಾಗಿ ಈ ಸಮಾವೇಶ ಜರುಗುತ್ತಿದ್ದು,ಆಗಮಿಸಿದ ಎಲ್ಲಾ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾಗಳನ್ನು ಸಲ್ಲಿಸುತ್ತೇನೆ.ಭೀಮಘರ್ಜನೆ ಹೆಸರಿನಲ್ಲಿ ಸುದ್ಧಿ ವಾಹಿನಿ ಚಾನಲ್ ಈ ದಿನ ಉದ್ಘಾಟನೆಗೊಂಡಿದೆ.ಇದಕ್ಕೆಎಲ್ಲರ ಸಹಕಾರ ನೀಡಿರಿಎಂದುಕೋರಿದರು.  

ಡಿಎಸ್‌ಎಸ್‌ರಾಜ್ಯ ಸಮಿತಿ ಸದಸ್ಯರಾದಉಡಚಪ್ಪ ಮಾಳಗಿ ಮಾತನಾಡಿಎಲ್ಲ ಸರ್ಕಾರಗಳು ನಮ್ಮ ಮೂಲ ಬೇಡಿಕೆಯಾದ ಒಳಮೀಸಲಾತಿಯನ್ನು ಮಾಡವಲ್ಲಿ ನಮಗೆ ಅನ್ಯಾಯ ಮಾಡಿವೆ.ಅಗಸ್ಟ್‌-01 ರಂದು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದ್ದು,ಎಲ್ಲರೂ ಸೇರಿ ಪಕ್ಷಾತೀತವಾಗಿ ಈ ಪ್ರತಿಭಟನೆಯನ್ನು ಯಶ್ವಸಿಗೊಳಿಸಬೇಕೆಂದು ಉಡಚಪ್ಪ ಮಾಳಗಿ ಕೋರಿದರು. ದಲಿತ ಸಂಘಟನಾ ಸಮಿತಿ ಭೀಮಘರ್ಜನೆ ಸಂಘಟನೆಯ ವತಿಯಿಂದಎಲ್ಲ ಮುಖ್ಯ ಅಥಿತಿಗಳಿಗೆ,ಗಣ್ಯರಿಗೆ ಹಾಗೂ ಮುಖಂಡರಿಗೆ ಗೌರವಿಸಿ ಸನ್ಮಾನಿಸಲಾಯಿತು. 

 ಈ ಸಂದರ್ಭದಲ್ಲಿ ಮುಖಂಡರಾದಡಿ.ಎಸ್ ಮಾಳಗಿ,ಬಸವರಾಜ ಹೆಡಿಗೊಂಡ,ಹೊನ್ನಪ್ಪತಗಡಿನಮನಿ,ಮಾಲತೇಶಯಲ್ಲಾಪುರ,ಅಶೋಕ ಮರೆಣ್ಣನವರ, ಸಂಘಟನೆಯರಾಜ್ಯ ಸಮಿತಿ ಪದಾಧಿಕಾರಿಗಳಾದ ಮಂಜುನಾಥದೊಡಮನಿ,ಅಜೀತ ಮಾದರ,ಬಸವರಾಜ ನಡುವಿನಮನಿ,ಗದಿಗೆಪ್ಪದೊಡಮನಿ,ಸುರೇಶ ಮಾದರ,ಪ್ರಕಾಶ ತಳವಾರ,ಧರ್ಮರಾಜ ದೊಡಮನಿ,ಸುಬ್ರಮಣಿ,ಹನಮಂತಪ್ಪ ಹಂಪನಾಳ,ಪ್ರಮೋದ ಕಾಲ್ಪಲ್,ಸಂತೋಷಕನ್ನಮ್ಮನವರ,ಅಜಯಕುಮಾರ ಚಲವಾದಿ,ಮರಿಸ್ವಾಮಿತೋರಿ,ಚಂದ್ರಶೇಖರ ನಾಟೇಕರ, ಹನಮಂತಪ್ಪಕಡೇಮನಿ,ಪ್ರಕಾಶರಾಜೂರ,ರಾಜು ಮಾದರ,ಮಲ್ಲೇಶಪ್ಪ ಹಿರೇಕ್ಕನವರ ಶ್ರೀಮತಿ ಸುಜಾತಾ ಸಿ,ಶ್ರೀಮತಿ ಸಂಜೋತಾ ದೊಡಮನಿ,ಶ್ರೀಮತಿ ವೈಶಾಲಿ ತಳವಾರ,ಶ್ರೀಮತಿ ರಾಜೇಶ್ವರಿ ಮತ್ತೂರ,ಶ್ರೀಮತಿ ಕಾಮಾಕ್ಷಿ ಬಾಜನವರಇನ್ನೂ ಅನೇಕ ಜಿಲ್ಲೆಯ ಪದಾಧಿಕಾರಿಗಳು ಮತ್ತುಜಿಲ್ಲೆಯಜಿಲ್ಲಾ ಸಮಿತಿ ಹಾಗೂ ಎಲ್ಲಾತಾಲೂಕಿನಅಧ್ಯಕ್ಷರುತಾಲೂಕಾ ಪದಾಧಿಕಾರಿಗಳು ಹಾಗೂ ಮಹಿಳಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.