ಪಾಂಡುರಂಗ ವಿಠ್ಠಲ ಪ್ರವಚನ ಸಮಾರೋಪ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
Conclusion of Panduranga Vitthala discourse series; achievers from various fields felicitated
ತಾಳಿಕೋಟೆ 27: ಪಟ್ಟಣದ ಪಾಂಡುರಂಗ ವಿಠ್ಠಲ ಮಂದಿರ ಟ್ರಸ್ಟ್ ವತಿಯಿಂದ ಆಶಾಢ ಏಕಾದಶಿ ಅಂಗವಾಗಿ ಆಯೋಜಿಸಿದ್ದ ಐದು ದಿನಗಳ ‘ಪಾಂಡುರಂಗ ವಿಠ್ಠಲ’ ಪ್ರವಚನ ಕಾರ್ಯಕ್ರಮ ಶನಿವಾರ ಸಮಾರೋಪಗೊಂಡಿತು.
ರನ್ನಬೆಳಗಲಿಯ ಸಿದ್ದರಾಮ ಶಿವಯೋಗಿಗಳು ಪ್ರವಚನ ನೀಡುತ್ತಾ, ಭಕ್ತಿ ಎಂದರೆ ನಿರ್ಮಲ ಮನಸ್ಸು, ನಂಬಿಕೆ ಹಾಗೂ ಭಗವಂತನ ಮೇಲಿನ ಅಚಲ ವಿಶ್ವಾಸ ಎಂದು ಹೇಳಿದರು. ಸಕ್ಕುಬಾಯಿ ಅವರ ಭಕ್ತಿಯನ್ನು ಉದಾಹರಿಸಿ, ನಿಷ್ಕಾಮ ಭಕ್ತಿಯಿಂದ ದೇವರ ಕೃಪೆ ಲಭಿಸುತ್ತದೆ ಎಂದು ತಿಳಿಸಿದರು.
ಕುಟುಂಬದಲ್ಲಿ ಅತ್ತೆ-ಸೊಸೆ ವೈಮನಸ್ಸು ಬಿಟ್ಟು ಪರಸ್ಪರ ಪ್ರೀತಿ, ಗೌರವ ಮತ್ತು ಸಹಬಾಳ್ವೆಯಿಂದ ಬದುಕಬೇಕು. ಅತ್ತೆ ತಾಯಿಯಂತೆ, ಸೊಸೆ ಮಗಳಂತೆ ನಡೆದುಕೊಂಡಾಗ ಮಾತ್ರ ಮನೆಯಲ್ಲಿ ನೆಮ್ಮದಿ ಮತ್ತು ದೈವಿಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಸರಟ್ಟಿ ಸೋಮಲಿಂಗ ಶಿವಯೋಗಿಗಳು, ಪ್ರವಚನಗಳು ಮನಸ್ಸಿನ ಶುದ್ಧೀಕರಣಕ್ಕೆ ಸಹಕಾರಿಯಾಗುತ್ತವೆ. ಮಕ್ಕಳಿಗೆ ಧರ್ಮ, ಸಂಸ್ಕೃತಿ, ಆಚರಣೆ ಹಾಗೂ ಜೀವನ ಮೌಲ್ಯಗಳನ್ನು ಪರಿಚಯಿಸುವಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ವೇದಮೂರ್ತಿ ವಸಂತ ಜೋಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪಾಂಡುರಂಗ ವಿಠ್ಠಲ ಮಂದಿರ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ದೇವಾಲಯದ ಅರ್ಚಕರು ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಐದು ದಿನಗಳ ಕಾಲ ಪ್ರತಿದಿನ ವಿಶೇಷ ಪ್ರಸಾದ ವಿತರಿಸಲಾಗಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಸಂಗಮೇಶ ಪಾಲಕಿ ಸ್ವಾಗತಿಸಿದರು. ದಿನಕರ ಜೋಶಿ ಕಾರ್ಯಕ್ರಮ ನಿರೂಪಿಸಿದರೆ, ಸಂಭಾಜಿ ವಾಡಕರ ವಂದಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಧರ್ಮ ಜಾಗೃತಿ ಕ್ಷೇತ್ರದಲ್ಲಿ ಕೇಸರಟ್ಟಿ ಸೋಮಲಿಂಗ ಶಿವಯೋಗಿಗಳು, ಶಿಕ್ಷಣ ಕ್ಷೇತ್ರದಲ್ಲಿ ಶರಣಬಸಪ್ಪ ಗಡೆದ (ಮುಖ್ಯ ಶಿಕ್ಷಕರು), ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಹರಿರಾಮು ಪಳನಿಸ್ವಾಮಿ, ಶಿಕ್ಷಣ ಸಾಧನೆಯಲ್ಲಿ ಇಂದಿರಾ ಭವಾನಿಸಿಂಗ್ ಹಾಗೂ ಸಮಾಜ ಸೇವೆಯಲ್ಲಿ ಸಂಜೀವ ಕದಂ ಅವರನ್ನು ಗೌರವಿಸಲಾಯಿತು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 