ಅಜ್ಜನ ಜಾತ್ರೆಗೆ ಬಾ ಇಲ್ಲಿ ಗೀತೆ ಅಭಿನವ ಶ್ರೀಗಳಿಂದ ಬಿಡುಗಡೆ
Come to Grandfather's Fair, here is the song released by Abhinava Shri
ಕೊಪ್ಪಳ: ತಾಲೂಕಿನ ಬಿಸರಹಳ್ಳಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು,ಜಾಗೃತಿ ಗೀತೆಗಳ ರಚನೆಕಾರ ಹಾಗೂ ಸಾಹಿತಿ ಹನುಮಂತಪ್ಪ ಕುರಿ ಅವರು ಜ.5,6, ಹಾಗೂ 7 ರಂದು ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯಾಗಿರುವ ಗವಿಮಠದ ಜಾತ್ರೆಯ ಕುರಿತಾದ, “ಕೊಪ್ಪಳ ಜಾತ್ರೆಗೆ ಬಾ ಇಲ್ಲಿ,ಅಜ್ಜನ ತೇರ ನೊಡಲ್ಲಿ” ಎಂಬ ಶಿರ್ಷಿಕೆಯ ಗೀತೆಯನ್ನು ಗವಿಮಠದ ಅಭಿನವಶ್ರೀಗಳು ಬಿಡುಗಡೆ ಮಾಡಿದರು. ಈ ಗೀತೆಯನ್ನು ಎ.ಐ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಿದ್ದು,ಸಂಪೂರ್ಣ ಗವಿಸಿದ್ದೇಶ್ವರ ಮಾಹಾಸ್ವಾಮಿಗಳ ಮಹಿಮೆ,ಜಾತ್ರೆ ಹಾಗೂ ಜಾಗೃತಿ ಕುರಿತಾದ ವಿಷಯಗಳನ್ನು ಒಳಗೊಂಡಿದೆ.
ಹನುಮಂತಪ್ಪ ಕುರಿ ಅವರು ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಒಂದೊಂದು ಗೀತೆಯನ್ನು ರಚನೆ ಮಾಡುತ್ತಿದ್ದು,ಈ ವರ್ಷದ ಗೀತೆ ಇದಾಗಿದೆ. ಗೀತೆಯ ಸಂಪೂರ್ಣವಾದ ವಿಡಿಯೋವನ್ನ ವಿಕ್ಷಿಸಿದ ಶ್ರೀಗಳು ಇವರ ಕಾರ್ಯವನ್ನು ಹಾಗೂ ಗೀತೆಯು ಕೂಡಾ ಉತ್ತಮವಾಗಿ ಮೂಡಿ ಬಂದಿದೆ ಎಂದು ಹಾರೈಸಿದರು. ಈ ಸಮಯಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರ್ಪ ಅಂಡಗಿ,ಸರಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿಗಳಾದ ಶರಣಪ್ಪ ರಡ್ಡೇರ,ಯುವ ಮುಖಂಡರಾದ ಸೋಮನಗೌಡ ಹಾಜರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 