ಮಕ್ಕಳಿಂದ ‘ಭೀಮ ಕಥಾನಕ’ ನಾಟಕದ ಮೆಚ್ಚುಗೆ ಪಡೆದ ಪ್ರದರ್ಶನ
Children's performance of the play 'Bheem Kathanaka' was appreciated
ಲೋಕದರ್ಶನ ವರದಿ
ಹುಬ್ಬಳ್ಳಿ 12: ಮಕ್ಕಳಿಗೆ ರಂಗ ಭೂಮಿಯಲ್ಲಿ ಆಸಕ್ತಿ ಮೂಡಿಸಲು ತಿಂಗಳ ಕಾಲ ನಿನಾದ ಮಕ್ಕಳ ಬೇಸಿಗೆ ರಂಗ ಶಿಬಿರವನ್ನು ಫೌಂಡೇಶನ್ ವತಿಯಿಂದ ಆಯೋಜಿಸಲಾಗಿತ್ತು. ಮಕ್ಕಳಿಂದ ಭೀಮ ಕಥಾನಕ ಎಂಬ ನಾಟಕ ಪ್ರದರ್ಶನ ಹಾಗೂ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಧಾರವಾಡ ಘಟಕ ಅಧ್ಯಕ್ಷ , ಸಾಹಿತಿ ರೂಪಾ ಜೋಶಿ, ಯೋಗಗುರು ಮುತ್ತಪ್ಪ ನಲವಡಿ, ದಂತ ಶಸ್ತ್ರ ಚಿಕಿತ್ಸಕ ವೈದ್ಯ ಡಾ ಯಶೋದಾ ಜಿ. ದೇವರಪತಿ , ಅವರು ಅತಿಥಿ ಗಳಾಗಿ ಭಾಗವಹಿಸಿದ್ದರು. ಸುಜಯ್ ಸುರೇಶ್ ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ , ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅದಿತಿ ಶೇಷಶಾಯಿ, ಮಂಗಳಾ ಮಾರಣ್ಣ, ಪಾಲಕರು , ಮಕ್ಕಳು, ರಂಗಾಸಕ್ತರು, ಮುಂತಾದವರು ಇದ್ದರು. ಮಕ್ಕಳು ಭೀಮ ಕಥಾನಕ ಎಂಬ ನಾಟಕವನ್ನು ಉತ್ತಮ ರೀತಿಯಲ್ಲಿ ಪ್ರದರ್ಶನ ಮಾಡಿದರು. ನಾಟಕಕ್ಕೆ ನಿರ್ದೇಶನ ಹಾಗೂ ರಂಗ ವಿನ್ಯಾಸ ವನ್ನು ನಟ, ರಂಗ ನಿರ್ದೇಶಕ ಮಾರಣ್ಣ ಬಿ ಆರ್ ಅವರು ಮಾಡಿದರು. ರಂಗ ಸಜ್ಜಿಕೆ ಹಾಗೂ ರಂಗ ಪರಿಕರಗಳ ಜವಾಬ್ಧಾರಿ ಯನ್ನು ಚಿತ್ರ ಕಲಾ ಶಿಕ್ಷಕ ಎಂ ವೈ ಬಡಿಗೇರ್ ನಿರ್ವಹಿಸಿದರು. ಶಿಬಿರದ ಸಂಘಟಕ, ಫೌಂಡೇಶನ್ ನ ಶೇಷಶಾಯಿ ಬಿ. ಜಿ ಅವರು ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಸಂಗೀತ ಕಲಾವಿದ ವೆಂಕಟೇಶ್ ಭಂಡಾರಿ ಅವರು ನಿರೂಪಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 