ಉರ್ದು ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ: ಪೋಷಕ, ಶಿಕ್ಷಕರ ಸಭೆ
Children's Day celebration at Urdu High School: Parents, teachers meeting
ರಾಣೇಬೆನ್ನೂರು 17 : ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಭಾವದಿಂದ ನಾವೆಲ್ಲರೂ ಭಾರತೀಯರಾಗಿ ಭಾವೈಕ್ಯತೆಯೊಂದಿಗೆ ಬಾಳಬೇಕಾದ ಅಗತ್ಯವಿದೆ ಎಂದು ಎಸ್ ಡಿ.ಎಂ.ಸಿ ಅಧ್ಯಕ್ಷ ಮುಜಮ್ಮಿಲ್ ಖತೀಬ ಕರೆ ನೀಡಿದರು. ಅವರು ತಾಲೂಕಿನ ಹಲಗೇರಿ ಗ್ರಾಮದ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಮತ್ತು ಪೋಷ,- ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ನೈತಿಕತೆ ಬೆಳೆಯಬೇಕಾದರೆ, ಶಿಕ್ಷಕರಾದವರು ಶಿಕ್ಷಣದ ಜೊತೆ ಜೊತೆಗೆ ಸಂಸ್ಕೃತಿ ಆಚಾರ ವಿಚಾರ ಮತ್ತು ನೈತಿಕತೆ ಕುರಿತಂತೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್. ಡಿ.ಎಂ.ಸಿ.ಸದಸ್ಯರಾದ ರಫೀಕ್ ಖಾನ್ ಇಟಗಿ, ಐ.ಎ. ಖಾಜಿ, ಜಿಯಾವುಲ್ಲ ಚೂಡಿಗಾರ, ಮಹಮ್ಮದ್ ಯುಸುಫ ಹತ್ತಾರ, ಶಬೀರ್ ಅಹ್ಮದ್ ತಿಮ್ಮೇನಹಳ್ಳಿ, ರಭಿಯಾ ಕುಪ್ಪೇಲೂರ, ಯಾಸ್ಮಿನ್ ಭಾನು ಐರಣಿ, ಇರ್ಸಾದ್ ಅಹಮದ್ ಖಾಜಿ, ಮಮತಾ ಕೆ, ಮಿರ್ಜಾ, ರಿಯಾಜ್ ಬಿಕ್ಪಾ, ಕೆ.ಬಿ. ಸುಮಯ್ಯ ಕಾಟೇನಹಳ್ಳಿ, ದುರ್ಗದ, ಅಕ್ಕಮ್ಮ ಅಬ್ಬಿಗೇರಿ, ಸಲೀಂ ಪಿರಜಾದೆ, ಜೋಯ ಮುಜಾವರ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಾಧನೆ ನಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಮಹಮ್ಮದ್ ರಜಾ ಬಂಕಾಪುರ, ಕುರಾನ್ಖಾನ್, ಸಂಗಡಿಗರು ಕುರಾನ್ ಪ್ರಾರ್ಥಿಸಿದರು. ಶಾಲೆಯ ಮಕ್ಕಳು ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆ ನಡೆಸಿದರು. ಶಿಕ್ಷಕ ಐ.ಎ. ಖಾಜಿ, ಶಿಕ್ಷಕ ಜಗದೀಶ್ ಮಳೀಮಠ ಸ್ವಾಗತಿಸಿ, ಮ ಮುಖ್ಯೋಪಾಧ್ಯಾಯನಿ ಚಿತ್ರಾವತಿ ಬೆನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ಚಟುವಟಿಕೆಗಳನ್ನು ಐ.ಕೆ. ಮಿರ್ಜಾ ಪರಿಚಯಿಸಿದರು.ಕೆ ಮಮತಾ ನಿರೂಪಿಸಿ, ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 