ಮಕ್ಕಳ ದಿನಾಚರಣೆ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆ”


ಮಕ್ಕಳ ದಿನಾಚರಣೆ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆ” 



ಗಂಗಾವತಿ 15: ತಾಲ್ಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಸೂರಿಬಾಬು ನೆಕ್ಕಂಟಿ ಅವರು ಪಂಡಿತ್ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಮಾಲಾರೆ​‍್ಣಯನ್ನು ಮಾಡುವ ಮೂಲಕ ಪೂಜೆಯನ್ನು ನೆರವೇರಿಸಿ, ಮಕ್ಕಳ ದಿನಾಚರಣೆಯ ಪ್ರಯುಕ್ತ ತರಗತಿವಾರು ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. 

  

   ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಬಾಲ್ಯದಿಂದಲೇ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ನಾಡು, ನುಡಿ ಹಾಗು ರಾಷ್ಟ್ರಕ್ಕೆ ಗೌರವವನ್ನು ತರುವ ನಿಟ್ಟಿನಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು ಹಾಗು ತಂದೆ-ತಾಯಿಗಳಿಗೆ, ಗುರು-ಹಿರಿಯರಿಗೆ ಗೌರವವನ್ನು ನೀಡುವುದರ ಮೂಲಕ ಅವರ ಹಿತನುಡಿಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ತಿಳಿಸಿದರು, ಜೊತೆಗೆ ಮಕ್ಕಳೆಲ್ಲರೂ ದೇವರ ಪ್ರತಿರೂಪದಂತೆ  ಅವರಿಗೆ ಎಲ್ಲವನ್ನೂ ಸಾಧಿಸುವ ಸಾಮರ್ಥ್ಯವಿರುತ್ತದೆ.  ನಮ್ಮ ಮಕ್ಕಳು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ಶ್ರೇಷ್ಠ ಕೊಡುಗೆ ನೀಡುವಂತಾಗಬೇಕು ಎಂದು ಕರೆ ನೀಡಿದರು. 



    ತದನಂತರ ಶಾಲೆಯ ಆಂಗ್ಲ ವಿಷಯದ ಶಿಕ್ಷಕ ಎನ್, ನಿಖಿಲ್‌ದಾಸ್ ಹಾಗೂ ಕನ್ನಡ ಶಿಕ್ಷಕರಾದ ನಾಗರಾಜ್  ಅವರು ಪಂಡಿತ ಜವಾಹರಲಾಲ್ ನೆಹರು ಅವರ ಬಾಲ್ಯಜೀವನ, ಶಿಕ್ಷಣ, ಹಾಗೂ ಭಾರತದ ಪ್ರಧಾನಿಯಾಗಿ ಅವರು ಸಲ್ಲಿಸಿದ ಸೇವೆಯ ಕುರಿತು ಭಾಷಣ ಮಾಡಿದರು. 


    ತದನಂತರ ನಮ್ಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿವಿಧ ರೀತಿಯ ಹಾಡು, ನೃತ್ಯ-ರೂಪಕಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. 


ಈ ಸಂದರ್ಭದಲ್ಲಿ ಶಾಲೆಯ ಉಪಾಧ್ಯಕ್ಷರಾದ ನೆಕ್ಕಂಟಿ ಆದರ್ಶ, ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಕೃಷ್ಣವೇಣಿ ಎಸ್, ಶಾಲೆಯ ಪಿ.ಆರ್‌.ಎಮ್ ನಿಂಗಪ್ಪ, ಪ್ರಾಂಶುಪಾಲರಾದ ಸುಭದ್ರಾ ದೇವಿ , ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ, ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.