ಮಕ್ಕಳ ದಿನಾಚರಣೆ: ಪೋಷಕರ-ಶಿಕ್ಷಕರ ಸಭೆ

ಮಕ್ಕಳ ದಿನಾಚರಣೆ: ಪೋಷಕರ-ಶಿಕ್ಷಕರ ಸಭೆ Children's Day: Parent-Teacher Meeting

             ಹಾವೇರಿ 14 : ಹಾವೇರಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಪೋಷಕರ-ಶಿಕ್ಷಕರ ಮಹಾಸಭೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಹಾವೇರಿ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಪೋಷಕರ ಹಾಗೂ ಸಮುದಾಯದ ಪಾತ್ರ ಬಹಳ ಮುಖ್ಯ  ಎಂದು ಹೇಳಿದರು.  ಉದ್ಘಾಟನೆ ನೆರವೇರಿಸಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ್ ದಂಡಿನ ಅವರು ಮಾತನಾಡಿ,  ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಪೋಷಕರ ಸಹಕಾರ ನೀಡಬೇಕು. ವಿದ್ಯಾ ವಿಕಾಸ ಯೋಜನೆಯಡಿ ಉಚಿತ ಪಠ್ಯಪುಸ್ತಕ ಸರಬರಾಜು, ಮಧ್ಯಾಹ್ನ ಬಿಸಿಯೂಟ ಯೋಜನೆ, ಗುಣಮಟ್ಟದ ಕಲಿಕೆಯ ಕುರಿತು  ಮಾಹಿತಿ ನೀಡಿದರು.  

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್ ಪಾಟೀಲ ಅವರು, ಕಲಿಕಾ ಉಪಕ್ರಮಗಳಾದ ಜ್ಞಾನ ಸೇತು, ಓದು ಕರ್ನಾಟಕ, ಕಲಿಕಾ ದೀಪ, ಪಾಠ ಆಧಾರಿತ ಮೌಲ್ಯಮಾಪನದ(ಐಃಂ) ಕುರಿತು ವಿವರಿಸಿದರ ಹಾಗೂ ಮಕ್ಕಳ ಕಲಿಕಾ ಪ್ರಗತಿ ಪೋಷಕರೊಂದಿಗೆ ಮಕ್ಕಳ ಪ್ರಗತಿ ಪತ್ರ ವಿತರಣೆ ಮತ್ತು ಪ್ರಗತಿಯ ಬಗ್ಗೆ ಚರ್ಚಿಸಿದರು. ಕೆ.ಪಿ.ಎಸ್, ಪಿ.ಎಂ.ಶ್ರೀ , ದ್ವಿಭಾಷಾ ಮಾಧ್ಯಮದ ತರಗತಿಗಳು ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು(ಇಅಅಇ), ಭೌತಿಕ ಸೌಲಭ್ಯಗಳು, ಶಾಲೆಯ ಅವಶ್ಯಕತೆಗಳು, ಸವಾಲುಗಳು ಮತ್ತು ಶಾಲಾ ಅಭಿವೃದ್ಧಿ ಯೋಜನೆ ಕುರಿತು ವಿವರಿಸಿದರು. ಶಾಲೆಯ ಅಭಿವೃದ್ಧಿಯಲ್ಲಿ ಭಾಗಿದಾರರ ಪಾತ್ರ ಮತ್ತು ಮಕ್ಕಳ ಪ್ರತಿಭೆ ಗುರುತಿಸುವಿಕೆ ಮತ್ತು ಪೋಷಕರ ಸಹಕಾರ ಪಡೆಯುವುದು ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸಗೆಣ್ಣಿ, ಶಾಲಾ ಶಿಕ್ಷಕರು ಇತರರು.