ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಚಂದ್ರಶೇಖರ ನುಗ್ಗಲಿ ಎರಡನೇ ಬಾರಿ ರಾಜ್ಯಾಧ್ಯಕ್ಷರಾಗಿ ಆಯ್ಕೆ
Chandrashekar Nuggali elected as state president of Primary School Teachers' Association for the se
ಆಲಮಟ್ಟಿ 22: ರಾಜ್ಯದ 42,000 ಸರ್ಕಾರಿ ಶಾಲೆಗಳ ಸುಮಾರು 1,58,000 ಶಿಕ್ಷಕರನ್ನು ಪ್ರತಿನಿಧಿಸುವ, 55 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ‘ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ಕ್ಕೆ ಐದು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಈ ಭಾಗದ ಕೃಷ್ಣಾ ತೀರದ ಹೋರಾಟಗಾರ, ಶಿಕ್ಷಕ ಸಮೂಹದ ಸ್ನೇಹಿ, ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಸ್ಪಂದಿಸುವ ನವ ಚೇತಕ ಆಲಮಟ್ಟಿಯ ಚಂದ್ರಶೇಖರ ನುಗ್ಗಲಿ ಅವರು ಸತತ ಎರಡನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿಕ್ಷಕ ವೃಂದದ ಕಣ್ಮನಿಯಾಗಿ ಮಿನುಗಿರುವ ಯುವ ನಾಯಕ ಚಂದ್ರಶೇಖರ ನುಗ್ಗಲಿ ಅವರು ಹೋರಾಟದ ಹಾದಿಯಲ್ಲೇ ಬೆಳೆದು ಬಂದಿದ್ದಾರೆ. ಅವರ ಅವಿರತ ಹೋರಾಟದ ಯಶೋಗಾಥೆ ನಿಜಕ್ಕೂ ವೀರೋಚಿತವಾಗಿದೆ. ಕೃಷ್ಣೆ ತಟದ ಈ ಜೀವಕ್ಕೆ ಪುನಃ ಇದೀಗ ರಾಜ್ಯಾಧ್ಯಕ್ಷರ ಪಟ್ಟದ ಗರಿಮೆ,ಗರಿಮೆ ಲಭಿಸಿದೆ.
ಶಿಕ್ಷಕರ ಸೇವೆಗಾಗಿಯೇ 24ಥ7 ಸದಾ ಮೀಸಲಾಗಿರುವ ಚಂದ್ರಶೇಖರ ನುಗ್ಗಲಿ ಅವರು ರಾಜ್ಯದ ಸಮಸ್ತ ಪ್ರಾಥಮಿಕ ಶಾಲಾ ಗುರುಭ್ಯೋ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗುರು ಬಳಗಕ್ಕಾಗಿಯೇ ಜೀವ ಸವೆದಿದ್ದಾರೆ. ಆ ಫಲದ ಪರಿಣಾಮ ಅವರು ಎರಡನೇ ಬಾರಿಗೆ ರಾಜ್ಯಾಧ್ಯಕ್ಷರ ಹುದ್ದೆ ಅಲಂಕರಿಸುವ ಸುಯೋಗ ಒದಗಿದೆ. ಅದು ಕೂಡಾ ಅವಿರೋಧವಾಗಿ ಆಯ್ಕೆಯಾಗಿದ್ದು ವಿಶೇಷ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆಗೊಂಡ ಹಿನ್ನೆಲೆಯಲ್ಲಿ ಆಲಮಟ್ಟಿ ಸೇರಿದಂತೆ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಮೂಹದಲ್ಲಿ ಹಾಗೂ ಅಪಾರ ಅಭಿಮಾನಿಗಳಲ್ಲಿ ಖುಷಿಯೋಲ್ಲಾಸದ ಸಂಭ್ರಮ ಕಳೆಗಟ್ಟಿದೆ. ಕೃಷ್ಣೆಯ ಸೆರಗಿನಲ್ಲೇ ಹುಟ್ಟಿ ಬೆಳೆದಿರುವ ಚಂದ್ರಶೇಖರ ನುಗ್ಗಲಿ ಶಿಕ್ಷಕರ ಸಂಘಟನೆ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾಯೋ9ನ್ಮುಖರಾಗಿ ಹೆಜ್ಜೆ ಇರಿಸಲ್ಲಿದ್ದಾರೆ. ಎಲ್ಲರ ಪ್ರೀತಿ, ವಿಶ್ವಾಸ, ಆದರದೊಂದಿಗೆ ಬೆರೆತು ನಡೆಯುವುದರಿಂದಲೇ ಇವರನ್ನು "ಚಂದ್ರು" ಅಂತ ಅಕ್ಕರೆಯಿಂದ ಶಿಕ್ಷಕ ಬಳಗ ಕರೆಯುವುದುಂಟು. ಚುನಾವಣಾ ಫೋಕಸ್ ; ಕಳೆದ ಎರಡು ತಿಂಗಳುಗಳಿಂದ ಎರಡು ಹಂತಗಳಲ್ಲಿ ಈ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿದೆ.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 