ಕೇಂದ್ರ ಕಾರಾಗೃಹ ಬೆಳಗಾವಿ ’ರಕ್ಷಾ ಬಂಧನ’ ಆಚರಣೆ
Central Jail Belgaum celebrates 'Raksha Bandhan'
ಕೇಂದ್ರ ಕಾರಾಗೃಹ ಬೆಳಗಾವಿ ’ರಕ್ಷಾ ಬಂಧನ’ ಆಚರಣೆ
ಬೆಳಗಾವಿ 10: ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ’ರಕ್ಷಾ ಬಂಧನ’ ಕಾರ್ಯಕ್ರಮ ಆಯೋಜಿಸಲಾಗಿತ್ತು, ಸದರಿ ಕಾರ್ಯಕ್ರಮವು ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆ ಬೆಳಗಾವಿ ಶಾಖೆ ರವರು ಹಾಗೂ ಕೇಂದ್ರ ಕಾರಾಗೃಹ, ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ, ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆಂಜನೇಯ, ಅಂಜುಮನ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಐ ತಿಮ್ಮಾಪೂರ ಹಾಗೂ ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಸದಾನಂದ ಪಾಟೀಲ್ ಆಗಮಿಸಿದ್ದರು. ಅದ್ಯಕ್ಷತೆಯನ್ನು ಕಾರಾಗೃಹ ಸಹಾಯಕ ಅಧೀಕ್ಷಕರಾದ ಮಲ್ಲಿಕಾರ್ಜುನ ಕೊಣ್ಣೂರ ವಹಿಸಿದ್ದರು.
ದೀಪ ಬೆಳಗಿಸುವದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಕೊಣ್ಣೂರ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಂಡ ಮಹಾನ್ ದೇಶ ಭಾರತ ವಿವಿಧ ಧರ್ಮದ ಜನರು ತಮ್ಮ ಧರ್ಮದ ಹಬ್ಬಗಳನ್ನು ಆಚರಿಸಲಾಗುತ್ತಿದ್ದು, ಅದೇ ರೀತಿ ಈ ಕಾರಾಗೃಹದಲ್ಲಿ ಎಲ್ಲಾ ಧರ್ಮದ ನಿವಾಸಿಗಳಿದ್ದು, ಎಲ್ಲ ಧರ್ಮದ ಹಬ್ಬಗಳನ್ನು ಆಚರಿಸಲಾಗುತ್ತಿದೆ. ರಕ್ಷಾ ಬಂದನವು ಕೇವಲ ಒಂದು ಹಬ್ಬವಲ್ಲ ಇದು ಸಹೋದರ ಸಹೋದರಿಯರ ನಡುವಿನ ಬಾಂದವ್ಯವನ್ನು ಬಲಪಡಿಸುವ ಒಂದು ಪವಿತ್ರವಾದ ಭಾವನಾತ್ಮಕ ಆಚರಣೆಯಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಅತ್ಯಂತ ಪೂಜ್ಯ ಸ್ಥಾನವಿದ್ದು, ಕಾರಣ ಕೇವಲ ಒಡಹುಟ್ಟಿದವರಲ್ಲದೇ ಇತರ ಸ್ತ್ರೀಯರನ್ನು ಸಹೋದರಿಯರಂತೆ ಗೌರವಿಸಬೇಕು. ಇದರಿಂದ ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ಧತೆ ಬೆಳೆಯುತ್ತದೆ. ಈ ದಿನ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಿದ ಮಾನವ ಹಕ್ಕುಗಳ ಸಂಸ್ಥೆಯ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆಂಜನೇಯ ಮಾತನಾಡಿ 102 ವರ್ಷಗಳ ಇತಿಹಾಸವುಳ್ಳ ಬೆಳಗಾವಿ ಕೇಂದ್ರ ಕಾರಾಗೃಹವು ರಾಜ್ಯದ ಅತಿ ದೊಡ್ಡ ಕಾರಾಗೃಹಗಳಲ್ಲಿ ಒಂದಾಗಿದೆ. ಅನೇಕ ಸ್ವಾಂತತ್ರ್ಯ ಹೋರಾಟಗಾರರು, ಲೇಖಕರು ಕವಿಗಳು ಇಲ್ಲಿ ಇದ್ದರು. ಜೈಲು ಎಂದರೆ ಕೇವಲ ಶಿಕ್ಷೆ ಅನುಭವಿಸುವ ಸ್ಥಳವಲ್ಲ ಇದು ಪರಿರ್ವತಣಾ ಮಂದಿರ, ಆಶ್ರಮ ವಿದ್ದಂತೆ ಎಂದು ಹೇಳಿದರು. ಕಾರಣ ತಾವೆಲ್ಲ ಇಲ್ಲಿಯ ಸಮಯವನ್ನು ಉತ್ತಮ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಬೇಗನೆ ಬಿಡುಗಡೆಯಾಗಿ ಎಂದು ಶುಭ ಹಾರೈಸಿದರು.
ಡಾ. ಹೆಚ್.ಐ ತಿಮ್ಮಾಪೂರ ಮಾತನಾಡಿ, ಜೀವನದಲ್ಲಿ ನಡೆದ ಆಕಸ್ಮಿಕ ಘಟನೆಯಿಂದಾಗಿ ತಾವು ಇಲ್ಲಿಗೆ ಬಂದಿರಬವುದು ಅದಕ್ಕೆ ಪಶ್ಚಾತಾಫ ಪಟ್ಟಿದ್ದೀರಿ ಕಾರಾಣ ಭುತಕಾಲದ ಬಗ್ಗೆ ಚಿಂತಿಸದೇ, ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡದೇ ಉತ್ತಮ ಪ್ರಜೆಗಳಾಗಿ ಬಾಳಿರಿ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿಗಳಾದ ಸದಾನಂದ ಪಾಟೀಲ್ ಮಾತನಾಡಿ ಕಾರಾಗೃಹದ ನಿವಾಸಿಗಳ ಶ್ರೇಯೋಭಿವೃದ್ಧಿಗಾಗಿ ಮಾನವ ಹಕ್ಕುಗಳ ಸಂಸ್ಥೆಯು ಸದಾಕಾಲ ಬದ್ದವಾಗಿರುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸರ್ವ ಬಂದಿಗಳಿಗೆ ರಾಖಿಯನ್ನು ಕಟ್ಟಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಮೇಘಾ ಕುಂದರಗಿ, ಜೈಲರಗಳಾದ ರಾಜೇಶ ಧರ್ಮಟ್ಟಿ, ರಮೇಶ ಕಾಂಬಳೆ ಹಾಗೂ ಶಿಕ್ಷಕರಾದ ಶಶಿಕಾಂತ ಉಪಸ್ಥಿತರಿಂದರು, ಶ್ರೀ ಎಸ್.ಎಸ್ ಯಾದಗುಂಡೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 