ವಿಶ್ವ ಪಿಜಿಯೋಥೆರಪಿ ದಿನ ಆಚರಣೆ

ವಿಶ್ವ ಪಿಜಿಯೋಥೆರಪಿ ದಿನ ಆಚರಣೆ Celebrating World Physiotherapy Day

ಘಟಪ್ರಭಾ 08: ವಿಶ್ವ ಪಿಜಿಯೋಥೆರಪಿ ದಿನಾಚರಣೆ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶಾಂತಲಿಂಗೇಶ್ವರ ಟ್ರಸ್ಟ್‌ ಮತ್ತು ನಾಯಿಕವಾಡಿ ಮೆಡಿಕಲ್ ಸೆಂಟರ್ ಶಿರಢಾಣ  ಇವರ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ, ಶ್ರೀ ರಾಮ ಪ್ರಭಾತ ಶಾಖೆ, ಜೈಂಟ್ಸ್‌ ಗ್ರೂಪ್ ಆಫ್ ಘಟಪ್ರಭಾ ಇವುಗಳ ಸಂಯುಕ್ತ ಆಶ್ರಯದಲ್ಲಿ  ಮಂಗಳವಾರ ದಿನಾಂಕ 08-09-2026 ರಂದು  ವಿಶ್ವ ಪಿಜಿಯೋಥೆರಪಿ ದಿನಾಚರಣೆಯನ್ನು  ಆಚರಣೆ ಮಾಡಲಾಯಿತು.     

ಡಾ ವಿಲಾಸ ಬಿ ನಾಯಿಕವಾಡಿ ಮಾತನಾಡಿ  ಹೃದಯಾಘಾತ, ಪಾರ್ಶ್ವವಾಯು, ಹೃದಯಸ್ಥಂಬನ ಬರದಂತೆ ಮಾಡಿ ಮುಂಜಾಗ್ರತಾ ಕ್ರಮಗಳನ್ನು  ಕೈಗೊಳ್ಳಲು ಕುರಿತು  ಹೇಳಿದರು.      ಜಿ ಏ ಪತ್ತಾರ ಗುರುಗಳು ತಮ್ಮ ಆರೋಗ್ಯದ  ಅನುಭವಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ  ಹಿರಿಯರಾದ ಪುಂಡಲೀಕ ನಾಯಿಕ, ಭೂಪಾಲ್ ಖೆಮಲಾಪುರೆ,  ಮಹಾದೇವ ದೇಶಪಾಂಡೆ, ಸುರೇಶ್ ಪಾಟೀಲ, ಸುಭಾಸ ದಡ್ಡೀಕರ,ಅರುಣ  ವಾಮನರಾವ ದೇಶಪಾಂಡೆ, ಹರೀಶ ಕಾಳೆ,  ಮಹೇಶ್ ದೇಶಪಾಂಡೆ,ಡಾ.ವಿಜಯ ಪಾಟೀಲ,ಹಣಮಂತ ಶಾಸ್ತ್ರೀ,  ಬಸವರಾಜ ಬೆಳ್ಳಣ್ಣವರ,  ಈಶ್ವರ ಚೌಗಲಾ,  ಸಾಳುಂಕೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖಂಡ ಶ್ರೀಕಾಂತ ಮಹಜನ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ವಂದಿಸಿದರು.