ಕಾಯಕ ಹಾಗೂ ದಾಸೋಹ ಎರಡೂ ಶಿವನೊಲುಮೆಗೆ ದಾರಿ : ಎಂ. ಆರ್. ವಾಲಿ
Both Kayaka and Dasoha are the path to Shiva's glory: M. R. Vali
ರಬಕವಿ-ಬನಹಟ್ಟಿ 28 : ಸತ್ಯಶುದ್ಧ ಕಾಯಕದಿಂದ ಬಂದ ಸಂಪತ್ತನ್ನು ಮಾತ್ರ ದಾಸೋಹಕ್ಕೆ ಬಳಸಬೇಕು ಮತ್ತು ಕಾಯಕ ಹಾಗೂ ದಾಸೋಹ ಎರಡೂ ಶಿವನೊಲುಮೆಗೆ ದಾರಿ. ದಾಸೋಹ ಸೇವೆ ಮಹತ್ವದ ಕಾರ್ಯವಾಗಿದೆ ಎಂದು ಶ್ರೀಮಾರುತೇಶ್ವರ ದೇವಸ್ಥಾನದ ಟ್ರಸ್ಟ್‌ನ ಎಂ. ಆರ್. ವಾಲಿ ಹೇಳಿದರು. ಅವರು ತಾಲೂಕಿನ ನಾವಲಗಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ದಾಸೋಹ ಸೇವಾನಿರತ ಭಕ್ತಾದಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅನ್ನದಾನಂ ಮಹಾದಾನಂ ಎಂಬ ಸಾರ್ಥಕತೆಯನ್ನು ಜೀವಂತವಾಗಿ ತೋರಿಸುತ್ತಿರುವ ದಾಸೋಹಿಗಳು ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಪ್ರತಿ ವಾರವೂ ಅನ್ನ ಪ್ರಸಾದದ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು, ನಿರಂತರವಾಗಿ ನಡೆಯುತ್ತಿರುವ ದಾಸೋಹ ಸೇವೆ ಕೇವಲ ವಿತರಣೆಯಲ್ಲ. ಅದು ದೇವರ ಸೇವೆ ಎಂಬ ಭಾವನೆಯೊಂದಿಗೆ ನಡೆಯುತ್ತಿದೆ. ಭಕ್ತರ ಹಸಿವನ್ನು ನಿಗಿಸುವುದರ ಜೊತೆಗೆ ಆತ್ಮಶುದ್ದಿಯ ಸಾಧನವಾಗಿದೆ. ಹಸಿದವರಿಗೆ ಅನ್ನ ನೀಡುವ ಮೂಲಕ ದೇವರನ್ನು ತೃಪ್ತಿಪಡಿಸುವ ಮಾರ್ಗವೆ ದಾಸೋಹವಾಗಿದೆ. ಭಕ್ತರ ದೈಹಿಕ ಹಸಿವಿನ ಜೊತೆಗೆ ಮಾನಸಿಕ ಶಾಂತಿಯನ್ನು ನೀಡುವ ಪುಣ್ಯದ ಕಾರ್ಯವಾಗಿದೆ. ಅನ್ನದಿಂದಲೆ ಜೀವ, ಜೀವದಿಂದಲೆ ಸೇವೆ, ಸೇವೆಯಿಂದಲೇ ಸಮಾಜದ ಏಕತೆಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 20 ಕ್ಕೂ ಅಧಿಕ ದಾಸೋಹ ಸೇವಾ ಭಕ್ತರನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯ ದಾನಪ್ಪ ಆಸಂಗಿ,ಚನ್ನಮಲ್ಲ ಕಂಪು, ಮಹೇಶ ಚಿಂಚಖಂಡಿ, ಬಸವರಾಜ ಗಣಿ, ಈರ್ಪ ಕಡಕಬಾವಿ, ಶಿವಲಿಂಗ ಅಂಗಡಿ, ಸಿದ್ದಪ್ಪ ಕಂಚು, ಹಣಮಂತ ಹೂಗಾರ, ಕುಮಾರ್ ಹೂಗಾರ, ವಿಠ್ಠಲ ದೇವದಾಸ, ಪಾಂಡು ಹೂಗಾರ, ಬಾಲಚಂದ್ರ ಪಟ್ಟಣಶೆಟ್ಟಿ ಸೇರಿದಂತೆ ನೂರಾರು ಭಕ್ತಾದಿಗಳು ಇದ್ದರು,
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 