ಜನ್ಮ ದಿನಗಳ ಆಚರಣೆ ಮಕ್ಕಳ ಶಿಕ್ಷಣಕ್ಕೆ ಅನುಕೂಲಕರವಾಗುವಂತೆ ಇರಲಿ :ಪರಶುರಾಮ ಹರ್ಲಾಪುರ
Birthday celebrations should be conducive to children's education: Parashuram Harlapura
ಹಾವೇರಿ 26 :ಜನ್ಮ ದಿನಗಳ ಆಚರಣೆ ಮಕ್ಕಳ ಶಿಕ್ಷಣಕ್ಕೆ ಅನುಕೂಲಕರವಾಗುವಂತೆ ಇರಲಿ ಎಂದು ಸಮಾಜ ಸೇವಕರಾದ ಪರಶುರಾಮ ಹರ್ಲಾಪುರ ಹೇಳಿದರು. ಇಲ್ಲಿನ ಉದಯ ನಗರದಲ್ಲಿರುವ ಶಕ್ತಿ ಮಕ್ಕಳ ತೆರದ ತಂಗುದಾಣದಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ,ಕ್ರಿಸ್ತ ಜನ್ಮದಿನ,ಮಾಜಿಮುಖ್ಯಮಂತ್ರಿ ದಿಽಽ ಎನ್ ಧರ್ಮಸಿಂಗ್ ಹಾಗೂ ತಮ್ಮ ಜನ್ಮದಿನದ ನಿಮಿತ್ತವಾಗಿ ಮಕ್ಕಳಿಗೆ ಕಲಿಕಾ ಉಪಕರಣಗಳನ್ನು ವಿತರಣೆ ಮಾಡಿ ಮಾತನಾಡಿದರು.
ದೇಶಕ್ಕೆ ಹಾಗೂ ರಾಜ್ಯಕ್ಕೆ ಕೊಡುಗೆ ನೀಡಿದ ನಾಯಕರ ಜನ್ಮದಿನವನ್ನು ಆಚರಣೆ ಮಾಡುವಾಗ ಅನಾವಶ್ಯಕವಾಗಿ ದುಂದು ವೆಚ್ಚ ಮಾಡದೇ ಬಡವರಿಗೆ ಉಪಯೋಗಕರವಾಗುವಂತೆ ಮಾಡಲು ಸಾಧ್ಯವಾಗಬೇಕಿದೆ. ಮಾಜಿ ಪ್ರಧಾನಮಂತ್ರಿಗಳಾದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ, ಮಾಜಿಮುಖ್ಯಮಂತ್ರಿ ದಿಽಽಎನ್ ಧರ್ಮಸಿಂಗ್ ಉತ್ತಮವಾಗಿ ಆಡಳಿತದೊಂದಿಗೆ ಜನರ ಧ್ವನಿಯಾಗಿ ಕೆಲಸ ಮಾಡಿದವರು.ಇವತ್ತು ಕ್ರಿಸ್‌ಮಸ್ ದಿನವೂ ಆಗಿದ್ದು,ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಣೆ ಮಾಡುತ್ತಾ ಬರುತ್ತಿದ್ದೇವೆ. ಸಮಾಜ ಸೇವೆ ಮಾಡುವ ಗುರಿಯೊಂದಿಗೆ ನನ್ನಿಂದ ಕೈಲಾದಷ್ಟು ಸಹಾಯ ಮಾಡುವ ಕೆಲಸ ಮುಂದುವರಿಸುತ್ತೇನೆ ಎಂದರು.
ಪಾದರ ನಥಾನಿಯಲ್ ಮಾತನಾಡಿ ಇವತ್ತು ಕ್ರಿಸ್‌ಮಸ್ ದಿನವಾಗಿದ್ದು,ಯೇಸು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬರುತ್ತಿರುವ ರಾಜ್ಯ ಕೃಷಿರತ್ನ ಪ್ರಶಸ್ತಿ ಪುರಸ್ಕೃತರಾದ ಪರಶುರಾಮ ಹರ್ಲಾಪುರ ಅವರು ಬಡವರ ಪರವಾಗಿ ಹಾಗೂ ಎಲ್ಲರ ಧ್ವನಿ ಕೆಲಸ ಮಾಡುತ್ತಿದ್ದು,ಅವರಿಗೆ ದೇವರು ಆಯುಷ್ಯ,ಆರೋಗ್ಯ ಹಾಗೂ ಉನ್ನತ ಸ್ಥಾನಮಾನ ಸಿಗಲಿ ಎಂದು ಶುಭ ಹಾರೈಸಿದರು.ಮಕ್ಕಳೊಂದಿಗೆ ಕೇಕ್ ಕತ್ತರಿಸಿ,ಸಿಹಿ ಹಂಚಿ,ಕಲಿಕಾ ಸಾಮಗ್ರಿಗಳನ್ನು ಪರಶುರಾಮ ಹರ್ಲಾಪುರ ಅಭಿಮಾನಿಗಳ ಬಳಗದ ವತಿಯಿಂದ ವಿತರಣೆ ಮಾಡಲಾಯಿತು.ಆಲದಕಟ್ಟಿ ಗ್ರಾಪಂ ಸದಸ್ಯರಿಂದ ಪರಶುರಾಮ ಹರ್ಲಾಪುರ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಲ್ಲಣ್ಣ ಬೀದಿಮನಿ,ಕೊಡೆಪ್ಪ ವಾರ್ತೆ,ಕೊಡೆಪ್ಪ ಹಂಸಭಾವಿ,ನಜೀರಅಹ್ಮದ ದೇವಗಿರಿ,ಮಂಜಣ್ಣ ಗಾಜಿಗೌಡ್ರ,ಫಕ್ಕಿರ್ಪ ಮರಡೂರ,ಕಿಶೋರ ಖಂಡೆವಾಲ,ಪ್ರಕಾಶ ಗೌಡ್ರ,ಮಲ್ಲಿಕಾರ್ಜುನ ದೊಡ್ಡಮನಿ,ತಂಗುದಾಣದ ಮೇಲ್ವಿಚಾರಕರಾದ ಪುಟ್ಟಪ್ಪ ಹರವಿ,ಅಭಿಮಾನಿ ಬಳಗದವರು,ತಂಗುದಾಣದ ಸಿಬ್ಬಂದಿಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 