ಬೈಕ್ ಕಳ್ಳತನ ಪ್ರಕರಣ ಭೇದನೆ: ಆರೋಪಿ ಬಂಧನ, 13 ಬೈಕ್ಗಳ ವಶ

ಬೈಕ್ ಕಳ್ಳತನ ಪ್ರಕರಣ ಭೇದನೆ: ಆರೋಪಿ ಬಂಧನ, 13 ಬೈಕ್ಗಳ ವಶ Bike theft case solved: Accused arrested, 13 bikes seized

ಬಳ್ಳಾರಿ 01 :  ನಗರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದು, ಒಟ್ಟು 13 ಮೋಟಾರ್ ಸೈಕಲ್ಗಳನ್ನು ವಶಕ್ಕೆ ಪಡೆದಿದ್ದಾರೆ.ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರೈಂ ನಂ. 34/2026 ಪ್ರಕರಣದ ತನಿಖೆಯನ್ನು ಡಿ.ಎಸ್‌.ಪಿ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ಪಿ.ಐ ರವಿಚಂದ್ರ ಡಿ.ಜಿ ಹಾಗೂ ಪಿ.ಎಸ್‌.ಐ ಕೆ. ವಿರುಪಾಕ್ಷಪ್ಪ ನೇತೃತ್ವದಲ್ಲಿ ಸಿಬ್ಬಂದಿ ತಂಡ ಕೈಗೊಂಡು ಕಾರ್ಯಾಚರಣೆ ನಡೆಸಿತು.ಈ ಕಾರ್ಯಾಚರಣೆಯಲ್ಲಿ ಬಿ. ಜಯರಾಮ, ನಾರಾಯಣ, ರಾಮದಾಸ, ಮಹಾಲಿಂಗಪ್ಪ, ಟಿ. ತಿಮ್ಮಪ್ಪ, ಕೋಸಿಗಿ ಕಾಳಿಂಗಪ್ಪ, ಮಂಜುನಾಥ, ವಿಜಯ್ ಭಾಸ್ಕರ್ ಹಾಗೂ ಶಾಹಿದ ಭಾನು ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.

ಏಪ್ರಿಲ್ 30 ರಂದು ವಲಸೆ ರಾಜ (37) ಎಂಬಾತನನ್ನು ಬಂಧಿಸಲಾಗಿದೆ. ಆತ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲ್ಲೂಕಿನ ಮಾಚನೂರು ಗ್ರಾಮದ ನಿವಾಸಿಯಾಗಿದ್ದು, ಹಮಾಲಿ ಹಾಗೂ ಟ್ರಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದನು.ತನಿಖೆಯಲ್ಲಿ ಆರೋಪಿ ಗಾಂಧಿನಗರ ಹಾಗೂ ಬ್ರೂಸ್ ಪೇಟೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.ಆರೋಪಿಯಿಂದ ಸುಮಾರು ?6.50 ಲಕ್ಷ ಮೌಲ್ಯದ 13 ಮೋಟಾರ್ ಸೈಕಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಪೊಲೀಸ್ ತಂಡದ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ.