ಮಾಸ್ಕೋ, ಏಪ್ರಿಲ್ 25 2020ರಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಸ್ಪಧರ್ಿಸುವುದಾಗಿ, ಅಮೆರಿಕಾದ ಮಾಜಿ ಉಪಾಧ್ಯಕ್ಷ ಜೋ ಬಿಡನ್ ಗುರುವಾರ ಪ್ರಕಟಿಸಿದ್ದಾರೆ. ಅಮೆರಿಕಾದ ಮೌಲ್ಯಗಳು, ವಿಶ್ವದಲ್ಲಿ ನಮ್ಮ ಸ್ಥಾನಮಾನ, ನಮ್ಮ ಪುರಾತನ ಪ್ರಜಾಪ್ರಭುತ್ವ ..ಪ್ರತಿಯೊಂದು ಅಂಶ ಅಮೆರಿಕಾವನ್ನು ರೂಪಿಸಿದೆ ಆದರೆ, ಈಗ ದೇಶದ ಪ್ರತಿಷ್ಠೆಗೆ ಭಂಗ ಬಂದಿದೆ. ಹಾಗಾಗಿ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಸುವುದಾಗಿ ಘೋಷಿಸುತ್ತಿದ್ದೇನೆ ಎಂದು ಬಿಡನ್ ಟ್ವೀಟ್ ಮಾಡಿದ್ದಾರೆ.