ಪರಿಶಿಷ್ಟ ಸಮುದಾಯದ ಸರ್ವತೋಮುಖ ಏಳಿಗೆಗೆ ಭಗವಾನ್ ಬೀರಸಾ ಕೊಡುಗೆ ಅಪಾರ

ಪರಿಶಿಷ್ಟ ಸಮುದಾಯದ ಸರ್ವತೋಮುಖ ಏಳಿಗೆಗೆ ಭಗವಾನ್ ಬೀರಸಾ ಕೊಡುಗೆ ಅಪಾರ  Bhagwan Beerasa's contribution to the all-round progress of the Scheduled Caste community is immens

          ರಾಣೇಬೆನ್ನೂರು 21:  ಪರಿಶಿಷ್ಟ ಸಮುದಾಯದ ಸರ್ವತೋಮುಖ ಏಳಿಗೆಗೆ ಭಗವಾನ್ ಬೀರಸಾ ಕೊಡುಗೆ ಅಪಾರವಾಗಿದೆ ಎಂದು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಘಟಕದ ಅಧ್ಯಕ್ಷ ಗಣೇಶ್ ನಂದಿಗಾವಿ ಹೇಳಿದರು.  

            ಅವರು ತಾಲೂಕಿನ ನಾಗೇನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮುದೇನೂರು ಗ್ರಾಮ ಪಂಚಾಯತ ಕಾರ್ಯಾಲಯ ಜಿಲ್ಲಾ ವಿಕಲ ಚೇತನರ ಹಾಗೂ ಹಾವೇರಿ  ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ,  ಭಗವಾನ್ ಬೀರಸಾ ಮುಂಡಾ ಜಯಂತಿ ಮತ್ತು ಜನ -ಜಾತಿ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  

    ಪರಿಶಿಷ್ಟ ವರ್ಗದ ಜನತೆಗೆ ಶಿಕ್ಷಣ ಮೂಲಭೂತ ಸೌಲಭ್ಯ ಸೇರಿದಂತೆ ಇತರ ಯೋಜನೆಗಳ ಲಾಭ ಪಡೆದು ಸಾಮಾಜಿಕವಾಗಿ ಆರ್ಥಿಕವಾಗಿ ಮುಂದಾಗಲು ಕೇಂದ್ರ ಮತ್ತು ರಾಜ್ಯ ಸರಕಾರವು ಅನೇಕ ರೀತಿಯ ಸಹಾಯ  ಸಹಕಾರ ನೀಡಿದೆ.ಪಂಚಾಯತಿ ವ್ಯಾಪ್ತಿಯ ವಿಶೇಷ ಚೇತನ ವಿದ್ಯಾರ್ಥಿಗಳು ಪ್ರೋತ್ಸಾಹ ಧನ ಶುಲ್ಕ ಮರುಪಾವತಿ ಯೋಜನೆಗಳ ಸದುಪಯೋಗ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಅಗತ್ಯ ವಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿಶೇಷ ಚೇತನ ಪುನರ್ವಸತಿ ಕಾರ್ಯಕರ್ತರ ಬಳಿ ಮಾಹಿತಿ ಪಡೆಯಬಹುದು ಎಂದರು.   

              ಸಭೆಯಲ್ಲಿ ಜಯಪ್ಪ ಕುಪ್ಪೆಲೂರ,ಆಂಜನೇಯ ಬಣಕಾರ, ಸೋಮಪ್ಪ ಓಲೇಕಾರ, ಸಿ. ಪಿ. ಬಿಲ್ಲಳ್ಳಿ, ರೇಣುಕಾ ತಳವಾರ, ಎಂ. ಕೆ. ಸಿರಿ ಮಲ್ಲಿಕಾರ್ಜುನ ಅಂಗಡಿ ಮಹಿಳಾ ಒಕ್ಕೂಟ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು