ಬಳ್ಳಾರಿ ಪತ್ರಕರ್ತರ ಗಿರಿ ಯಾದವ್ ಅವರಿಗೆ ಗೋವಾದಲ್ಲಿ ಉಮೆನ್ಸ್ ಎಕ್ಸಲೆನ್ಸಿ ಅವಾರ್ಡ್
Bellary journalist Giri Yadav receives Women's Excellence Award in Goa
ಬಳ್ಳಾರಿ 10: ಆಂಧ್ರ ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದ ಪತ್ರಿಕಾರಂಗದಲ್ಲಿ ಜನ ಮತ್ತು ಸರ್ಕಾರಿ ವಲಯಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾ ಸಾರ್ವಜನಿಕರ ಒಳಿತಿಗಾಗಿ ಸಮಸ್ಯೆಗಳನ್ನು ಬಗೆಹರಿಸಲು ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡಿದ ಸಾಕ್ಷಿ ರಾಷ್ಟ್ರೀಯ ತೆಲುಗು ದಿನಪತ್ರಿಕೆಯ ಗಿರಿ ಯಾದವ್ ಅವರಿಗೆ ಪ್ರಶಸ್ತಿ ದೊರಕಿದೆ. ಇವರು ಕಳೆದ 20 ವರ್ಷಗಳಿಂದ ಮಾಧ್ಯಮದಲ್ಲಿ ಕೆಲಸ ಮಾಡಿದ್ದಾರೆ . ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಗಿರಿ ಯಾದವ್ ಜನ ಚೈತನ್ಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಯಾದವ್ ಸಮುದಾಯದ ಬಳ್ಳಾರಿ ಜಿಲ್ಲಾ ನಿರ್ದೇಶಕರಾಗಿ ಹಾಗೂ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘ ಬಳ್ಳಾರಿ ಜಿಲ್ಲಾ ಮಾಜಿ ಅಧ್ಯಕ್ಷರಾಗಿ ಗಿರಿ ಯಾದವ್ ಸೇವೆ ಸಲ್ಲಿಸಿದ್ದಾರೆ. ಗೋವಾದಲ್ಲಿ ನಡೆದಿರುವ ವೇ ಫೌಂಡೇಶನ್ ಕಾರ್ಯಕ್ರಮದಲ್ಲಿ ಉಮೆನ್ಸ್ ಎಕ್ಸಲೆನ್ಸಿ ಅವಾರ್ಡ್ ನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ವೇ ಫೌಂಡೇಶನ್ ವೆಂಕಯ್ಯ, ಬಿಸಿ ಚೈತನ್ಯ ಸಮಿತಿ ರಾಷ್ಟ್ರೀಯ ಅಧ್ಯಕ್ಷರು ಬಿ ಸಿ ರಮಣ, ಯಮದೇನೂರು ಡಾಕ್ಟರ್ ಚಂದ್ರಶೇಖರ್, ವುಮೆನ್ ರೈಟ್ಸ್ ಗೋಪಾಲ್, ಪತ್ರಕರ್ತರು ಅಸ್ಲಾಂ ಭಾಷಾ, ಶಾನ್ ಬಾಬು ಇನ್ನ ಇತರರು ಭಾಗವಹಿಸಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 