ಭರತ ಹುಣ್ಣಿಮೆ ನಿಮಿತ್ಯ ಬನಶಂಕರಿ ದೇವಿಯ ಪಲ್ಲಕ್ಕಿ ಮೇರವಣಿಗೆ
ಯಮಕನಮರಡಿ, 12 :ಆನಂದಪೂರ ಗ್ರಾಮದಲ್ಲಿ ದೇವಾಂಗ ಸಮಾಜದ ಕುಲದೇವತೆ ಶ್ರೀ ಬನಶಂಕರಿದೇವಿ ಜಾತ್ರೆಯು ಭಾರತ ಹುಣ್ಣಿಮೆ ಪ್ರಯುಕ್ತ ಜರುಗಿತು ಈ ಸಂದರ್ಭದಲ್ಲಿ ಸಮಸ್ತ ಕಲಭಾಂಧವರು ಹಾಗೂ ಗ್ರಾಮದ ಸಕಲ ಭಕ್ತಾದಿಗಳು ಪಾಲ್ಗೊಂಡು ಶ್ರೀ ಬನಶಂಕರಿ ದೇವಿ ಪಾಲಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಿ ಉಡಿ ತುಂಬುವ ಕಾರ್ಯಕ್ರಮ ಮುತ್ತೈದೆಯರು ಉಡಿ ತುಂಬುವ ಕಾರ್ಯಕ್ರಮ ನಡೆಯಿತು ನಂತರ ಮಹಾಪ್ರಸಾದ ಜರುಗಿತು ಸಕಲ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು