ಜಿಲ್ಲಾಧಿಕಾರಿ ಗೇಟ್ ತಳ್ಳಿ, ಪೊಲೀಸರನ್ನು ನೂಕಿದ ಬಿಜೆಪಿ ಕಾರ್ಯಕರ್ತರು : ಸರ್ಕಾರದ ವಿರುದ್ಧ ಪ್ರತಿಭಟನೆ

ಜಿಲ್ಲಾಧಿಕಾರಿ ಗೇಟ್ ತಳ್ಳಿ, ಪೊಲೀಸರನ್ನು ನೂಕಿದ  ಬಿಜೆಪಿ ಕಾರ್ಯಕರ್ತರು : ಸರ್ಕಾರದ ವಿರುದ್ಧ ಪ್ರತಿಭಟನೆ BJP workers push aside the Deputy Commissioner's gate and shove police personnel: Protest against t

ಕಾರವಾರ 31 : ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಕಾರವಾರದಲ್ಲಿ  ಬಿಜೆಪಿಯಿಂದ ನಡೆಸಲಾದ ಪ್ರತಿಭಟನೆ ಮುಕ್ತಾಯ ಹಂತದಲ್ಲಿ ವಿಭಿನ್ನ ‌ರೂಪ ಪಡೆದು ಕೊಂಡಿತು.‌  ಜಿಲ್ಲಾಧಿಕಾರಿ ಕಚೇರಿಯ ಬಳಿ ಸಮಾವೇಶ ಗೊಂಡಿದ್ದ ಬಿಜೆಪಿ ಮುಖಂಡರು ಹಾಗೂ ಕೆಲ ಪದಾಧಿಕಾರಿಗಳು ಜಿಲ್ಲಾಧಿಕಾರಿ ಖುದ್ದಾಗಿ ಬಂದು ಮನವಿ ಪಡೆಯಬೇಕೆಂದು ನಿರೀಕ್ಷೆ ಮಾಡಿದರು‌.‌ ಆಗಾಗ ಮಳೆ ಬೀಳುತ್ತಿದ್ದ ಕಾರಣ ಬಿಜೆಪಿಗರು ಸಂಕಷ್ಟ ಅನುಭವಿಸಿದ್ದರು. ಜಿಲ್ಲಾಧಿಕಾರಿ  ಕಚೇರಿಯಲ್ಲಿ ಮೀಟಿಂಗ್ ನಲ್ಲಿದ್ದುದು ಹೊರಗೆ ಪ್ರತಿಭಟನೆಗಳು ‌ಮಾಡುವವರಿಗೆ ಗೊತ್ತಿರಲಿಲ್ಲ.

ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಗೇಟ್ ಬಳಿ ಪೊಲೀಸರು ಕಾವಲಿದ್ದರು. ಹಾಗಾಗಿ ಪ್ರತಿಭಟನಕಾರರು  ಗೇಟ್ ತಳ್ಳಿ  ಜಿಲ್ಲಾಧಿಕಾರಿ ಒಳ ಆವರಣಕ್ಕೆ ನುಗ್ಗಿದ ಘಟನೆ ಶುಕ್ರವಾರ ನಡೆಯಿತು.‌  ಪ್ರತಿಭಟನೆ ವೇಳೆ ಆದದ್ದೇನು:  ಜಿಲ್ಲಾಧಿಕಾರಿ  ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಲಿಲ್ಲ ಎಂದು  ಕಲ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು,  ಕಚೇರಿ ಆವರಣದಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ನಗರದ ಮಿತ್ರ ಸಮಾಜ ಮೈದಾನದಿಂದ ಹೊರಟ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರ  ಮೆರವಣಿಗೆಯು ಕಾರವಾರ  ಜಿಲ್ಲಾಧಿಕಾರಿ ಕಚೇರಿಯ ಹೊರಭಾಗದ ಗೇಟ್ ತಲುಪುತ್ತಿದ್ದಂತೆ, ಡಿಸಿ ಅವರೇ ಖುದ್ದಾಗಿ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಆದರೆ, ಜಿಲ್ಲಾಧಿಕಾರಿಗಳು ಮೀಟಿಂಗ್ ಕಾರಣ  ಸ್ಥಳಕ್ಕೆ ಬರದಿದ್ದಾಗ,  ತಾಳ್ಮೆಗೆಟ್ಟ ಪ್ರತಿಭಟನಾಕಾರರು ಗೇಟ್ ತಳ್ಳಿ ಕಚೇರಿಯ ಮುಖ್ಯ ದ್ವಾರದತ್ತ ನುಗ್ಗಿದರು.  ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ತಳ್ಳಾಟ-ನುಕಾಟ ನಡೆಯಿತು. ಪೊಲೀಸರ ತಡೆಯನ್ನೂ ಲೆಕ್ಕಿಸದೆ ಕಚೇರಿಯ ಪ್ರಮುಖ ದ್ವಾರದ ಬಳಿ ತಲುಪಿದ ಕಾರ್ಯಕರ್ತರು, ಜಿಲ್ಲಾಧಿಕಾರಿ  ಆವರಣದಲ್ಲೇ ಕುಳಿತು ಅಹೋರಾತ್ರಿ ಧರಣಿಯ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಸಾರ್ವಜನಿಕರ ಹತ್ತಾರು ಜ್ವಲಂತ ಸಮಸ್ಯೆಗಳನ್ನು ಹೊತ್ತು ತಂದಿರುವ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಬಳಿ ಬಂದು ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳಿಗೆ ಸಮಯವಿಲ್ಲವೇ   ಕನಿಷ್ಠ ಸೌಜನ್ಯವೂ ಇಲ್ಲದಂತೆ ನಡೆದುಕೊಳ್ಳುತ್ತಿರುವ ಜಿಲ್ಲಾಡಳಿತ ಸಂಪೂರ್ಣವಾಗಿ ಮರುಗಟ್ಟಿದೆ, ಎಂದು ಟೀಕಿಸಿದರು.  ಸುಮಾರು 2 ಗಂಟೆಗಳ ಕಾಲ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾಧಿಕಾರಿಗಳ ವಿರುದ್ಧ ಕಾರ್ಯಕರ್ತರು ಸತತವಾಗಿ ಧಿಕ್ಕಾರದ ಘೋಷಣೆಗಳನ್ನು ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಅಂತಿಮವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ   ಸಾಜೀದ್ ಮುಲ್ಲಾ ಅವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ತದನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.