ಸಚಿವ ಖರ್ಗೆ ರಾಜೀನಾಮೆಗೆ ಬಿಜೆಪಿ ಅರಭಾವಿ ಮಂಡಲದ ಕಾರ್ಯಕರ್ತರಂದ ಪ್ರತಿಭಟನೆ
BJP Arabi Mandal workers protest against minister Khar's resignation
ಸಚಿವ ಖರ್ಗೆ ರಾಜೀನಾಮೆಗೆ ಬಿಜೆಪಿ ಅರಭಾವಿ ಮಂಡಲದ ಕಾರ್ಯಕರ್ತರಂದ ಪ್ರತಿಭಟನೆ
ಮೂಡಲಗಿ 03 : ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿ ಶುಕ್ರವಾರದಂದು ಪಟ್ಟಣದ ಕಲೇಶ್ವರ ವೃತ್ತದಲ್ಲಿ ಬಿಜೆಪಿ ಅರಭಾವಿ ಮಂಡಲದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಯಶವಂತ ಉದ್ದಪ್ಪಣ್ಣವರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಸಚಿನ್ ಅವರ ಡೆತ್‌ನೋಟ್‌ನಲ್ಲಿದೆ. ಅವರ ಆಪ್ತನೇ ಈ ಘಟನೆಗೆ ಕಾರಣ. ಎಐಸಿಸಿ ಅಧ್ಯಕ್ಷರ ಮಗ ಎಂಬ ಕಾರಣಕ್ಕೆ ಸಿಂಎ ರಾಜೀನಾಮೆ ಪಡೆಯಲು ಗಡಗಡ ನಡಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಮಾತನಾಡಿದರು.
ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿದ ವೇಳೆ ವಾಹನ ಅವರು ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಯಿತು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಕುಡಚಿ, ಅರಬಾವಿ ಮಂಡಲ ಅಧ್ಯಕ್ಷ ಮಹದೇವ ಶೆಕ್ಕಿ, ಪಾಂಡುರಂಗ ಮಹೇಂದ್ರಕರ, ಗುರು ಹಿರೇಮಠ, ರಾಮಣ್ಣ ಹಂದಿಗುಂದ, ಅನ್ವರ ನಾಧಪ್, ಆನಂದ್ ಟಪಾಲದಾರ, ಗಫಾರ ಡಾಂಗೆ, ರಘು ಪತ್ತಾರ, ಸಿದ್ದು ಗಡ್ಡೆಕರ, ಪ್ರಮೋದ ನುಗಾನಟ್ಟಿ, ನಾಗರಾಜ ಕುದರಿ, ಶಿವಾನಂದ ದಗೋನಿ, ಶ್ರಿಧರ ಸಲಬನ್ನರ, ಮಲ್ಲು ಯಾದವಾಡ, ಪರ್ಪ ಹಡಪದ, ಮಹಾದೇವ ದಾನನ್ನವರ, ಓಪ್ರಕಾಶ ಕುಳ್ಳೂರ,ಮಲ್ಲಿಕಾರ್ಜುನ ಬೆಳ್ಳಸಿ, ಮಡಿವಾಳ ನೆಮಗೌಡರ, ಆನಂದ ಹಿರೇಮಠ, ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 