ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರಗೆ ಬಿಜೆಪಿ ಪಂಥಾಹ್ವಾನ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಸಾಧನೆ ಅಲ್ಲ : ಲಕ್ಕಪ್ಪ ಪಾಟೀಲ
BJP's challenge to Congress leader Siddu Konnur is not an achievement, getting publicity on social
ರಬಕವಿ-ಬನಹಟ್ಟಿ 16: ತೇರದಾಳ ಮತಕ್ಷೇತ್ರದಲ್ಲಿ ಪುಕ್ಕಟ್ಟೆಯಾಗಿ ಪ್ರಚಾರ ಪಡೆಯುತ್ತಾ ಮಂತ್ರಿಗಳ ಜೊತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ನಾನೇ ಕೆಲಸ ಮಾಡಿಸಿದ್ದೇನೆಂದು ಹೇಳಿಕೊಂಡು ಕ್ಷೇತ್ರದಲ್ಲಿ ತಿರುಗಾಡುತ್ತಿರುವ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ವರ್ತನೆ ಖಂಡನೀಯ. ಶಾಸಕ ಸಿದ್ದು ಸವದಿಯವರ ಸಾಧನೆ ಪ್ರಶ್ನಿಸುವ ನೈತಿಕತೆ ಹಕ್ಕು ಕೊಣ್ಣೂರವರಿಗಿಲ್ಲ. ಸವದಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅನುಮಾನವಿದ್ದರೆ ದಾಖಲೆ ಸಮೇತ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಕೆ.ಎಂ.ಎಫ್. ನಿರ್ದೇಶಕ ಲಕ್ಕಪ್ಪ ಪಾಟೀಲ ಪಂಥಾಹ್ವಾನ ನೀಡಿದರು.
ರಬಕವಿಯ ಪ್ರವಾಸಿ ಮಂದಿರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸಿದ್ದು ಸವದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರಿಗೆ ಅರ್ಹತೆ ಇಲ್ಲ, ನಾಲ್ಕು ಬಾರಿ ಶಾಸಕರಾಗಿ ಜನರಿಂದ ಆಯ್ಕೆಯಾಗಿರುವುದು ಅವರ ಅಭಿವೃದ್ಧಿ ಕಾರ್ಯಗಳಿಂದ. ಕ್ಷೇತ್ರದಲ್ಲಿ ಗ್ರಾಮೀಣ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅದಕ್ಕಾಗಿಯೇ ಕ್ಷೇತ್ರದಲ್ಲಿ ಜನರು ರೈತ ಹಾಗೂ ನೇಕಾರರ ನಾಯಕ ಎಂದು ಗುರುತಿಸಿದ್ದಾರೆ. ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮಂತ್ರಿಗಳ ಜೊತೆಗೆ ತೆಗೆಸಿಕೊಂಡ ಫೋಟೋ ಹಾಕಿಕೊಂಡು ಅಭಿವೃದ್ಧಿ ಶ್ರೇಯಸ್ಸನ್ನು ತನ್ನದೇಯಂದು ಪುಕ್ಕಟೆ ಪ್ರಚಾರದಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ನಾವೂ ಯಾವಾಗ ಬೇಕಾದರು ಬಹಿರಂಗ ವೇದಿಕೆಯಲ್ಲಿ ದಾಖಲೆ ಸಮೇತ ಚರ್ಚೆಗೆ ಕರೆಯಲಿ. ಕ್ಷೇತ್ರದಲ್ಲಿನ ಯಾವ ದೇವಸ್ಥಾನದ ಕಟ್ಟೆ ಹತ್ತಲು ನಾವೂ ಸಿದ್ಧರಿದ್ದೇವೆ. ಕಾಂಗ್ರೆಸ್ ನಾಯಕರು ಕೂಡಾ ಇದಕ್ಕೆ ತಯಾರಾಗಬೇಕೆಂದು ಸವಾಲು ಹಾಕಿದರು.
ದ್ವೇಷ ರಾಜಕಾರಣ ಬದಿಗಿಟ್ಟು ಪಕ್ಷ ಭೇದ ಮರೆತು, ಕ್ಷೇತ್ರದ ಹಿತಕ್ಕಾಗಿ ಕೈ ಜೋಡಿಸುವ ಮೂಲಕ ನೇಕಾರ, ರೈತರ, ಬದುಕು ಹಸಿನಾಗಿಸುವ ಕಾರ್ಯಕ್ಕೆ ಮುಂದಾಗಬೇಕು. ಕ್ಷೇತ್ರದ ಜನರಿಗೆ ಯಾವ ನಾಯಕ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂಬುದು ಚೆನ್ನಾಗಿ ಗೊತ್ತಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಕೊಂಡು ಅಭಿವೃದ್ಧಿಯ ಶ್ರೇಯಸ್ಸು ಪಡೆಯಲು ಸಾಧ್ಯವಿಲ್ಲ. ಜನರ ಬದುಕಿನಲ್ಲಿ ಬದಲಾವಣೆ ತಂದ ಕಾರ್ಯಗಳೇ ನಿಜವಾದ ಅಭಿವೃದ್ಧಿ. ಶಾಸಕ ಸಿದ್ದು ಸವದಿ ಆಡಳಿತದಲ್ಲಿ ರೈತರಿಗೆ ನೀರಾವರಿ ಸೌಲಭ್ಯ, ನೇಕಾರರಿಗೆ ವಿದ್ಯುತ್ ಸಬ್ಸಿಡಿ, ನೇಕಾರ ಸಮ್ಮಾನ ಯೋಜನೆ, ರಸ್ತೆಗಳು, ಸೇರಿದಂತೆ ಇನ್ನಿತರ ಅಭಿವೃದ್ಧಿ ಜನಹಿತ ಕಾರ್ಯಗಳು ದಾಖಲೆಗಳಲ್ಲಿ ಲಭ್ಯವಿದೆ ಅದನ್ನು ಅರಿತು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಲಿ. ಇಷ್ಟೇಲ್ಲವನ್ನು ಮಾತನಾಡುವ ಕೊಣ್ಣೂರ ಅವರು ಕಳೆದ 12 ದಿನಗಳಿಂದ ಹಿಪ್ಪರಗಿ ಬ್ಯಾರೇಜ್ ಗೇಟ್ ನಂ 22 ಪ್ಲೇಟ್ ಮುರಿದು ಪರಿಣಾಮ ಜಲಾಶಯದಲ್ಲಿ ಸಂಗ್ರಹಿತವಾದ ನೀರು ಸಂಪೂರ್ಣ ಖಾಲಿ ಆಗುತ್ತಿದೆ. ಬ್ಯಾರೇಜ್ ಬಗ್ಗೆ ಪಕ್ಷಾತೀತವಾಗಿ ನಮ್ಮೊಂದಿಗೆ ಕೈ ಜೋಡಿಸಿ ಕಾಳಜಿ ವಹಿಸಬೇಕು. ಮುಂದೆ ಬೇಸಿಗೆಯಲ್ಲಿ ಆಗುವ ನೀರಿನ ಹಾಹಾಕಾರ ತಪ್ಪಿಸಲು ತಾವೂಗಳು ಕೂಡಾ ಸಹಕಾರ ನೀಡಬೇಕು ಅದು ಬಿಟ್ಟು ಆರೋಪ ಮಾಡಬಾರದೆಂದು ಮುಖಂಡ ಲಕ್ಕಪ್ಪ ಪಾಟೀಲ ಹೇಳಿದರು.
ಸೋಮವಾರ ದಿ. 19 ರಂದು ಹಿಪ್ಪರಗಿ ಬ್ಯಾರೇಜ್‌ನ ಜಮಖಂಡಿ-ಅಥಣಿ ರಸ್ತೆ ಬಂದ್ ಮಾಡಿ, ನಿರಶನ ಮಾಡಲಾಗುದು. ಸರಕಾರ ರೈತರ ಪರ ಕಾಳಜಿಯಿದ್ದರೆ ಗೇಟ್ ಮುರಿದು ಇಷ್ಟು ದಿವಸಗಳು ಕಳೆದರು ನಿರ್ಲಕ್ಷ್ಯ ಮಾಡಿ, ಮೋಜು ನೋಡುತ್ತಿದೆ. ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ರೈತರಿಗೆ ನೀರಿನ ಹಾಹಾಕಾರವನ್ನುಂಟು ಮಾಡುವುದಲ್ಲದೆ. ನೀರು ಪೋಲಾಗುತ್ತಿರುವುದರಿಂದ ಕೃಷ್ಣಾ ನದಿಯ ನೀರನ್ನು ನಂಬಿರುವ ಸುತ್ತಮುತ್ತಲಿನ ನಗರ ಪ್ರದೇಶ ಜನತೆಗೆ ಸಾಕಷ್ಟು ತೊಂದರೆನ್ನುಂಟು ಮಾಡುತ್ತದೆ. ಇದ್ಯಾವುದರ ಅರಿವಿಲ್ಲದೆ ಸುಖಾಸುಮ್ಮನೆ ಸಚಿವರ ಜೊತೆ ಫೋಟೊ ತೆಗೆದುಕೊಂಡು ಜನನಾಯಕನೆಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಸಾಧನೆಯಲ್ಲ, ಜನಪರವಾದ ಕೆಲಸಗಳನ್ನು ಮಾಡಿ ಕ್ಷೇತ್ರಕ್ಕೆ ಅಭಿವೃದ್ಧಿ ಕಾಮಗಾರಿಗಳನ್ನು ತರವುದಲ್ಲದೆ ಅವುಗಳನ್ನು ಅನುಷ್ಠಾನಗೊಳಿಸುವುದು ಸಾಧನೆ. ಸದ್ಯ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿದ್ದರು ಕ್ಷೇತ್ರಕ್ಕೆ ಯಾವುದೇ ವಿಶೇಷವಾದ ಅನುದಾನವನ್ನು ಸರಕಾರ ನೀಡಿಲ್ಲ. ಬಿಜೆಪಿ ಸರಕಾರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನತೆ ಇನ್ನೂ ಶ್ಲಾಘಿಸುತ್ತಿದ್ದಾರೆ ಎಂದು ನಾವಲಗಿ ಪಿಕೆಪಿಎಸ್ ನಿರ್ದೇಶಕ ಆನಂದ ಕಂಪು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯರಾದ ಬಾಬುಗೌಡ ಪಾಟೀಲ, ಪುಂಡಲೀಕ ಪಾಲಭಾಂವಿ, ರಬಕವಿ ಪಿಕೆಪಿಎಸ್ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಕೆ.ಎಂ.ಎಫ್. ನಿರ್ದೇಶಕ ಚಂದ್ರಶೇಖರ ಗಿ. ಆದಬಸಪ್ಪಗೋಳ, ಮಾಜಿ ನಗರಾಧ್ಯಕ್ಷ ಸಂಜಯ ತೆಗ್ಗಿ, ಹನಗಂಡಿ ಗ್ರಾ.ಪಂ. ಸದಸ್ಯ ಧರೇಪ್ಪ ಹುದ್ದಾರ, ಅನೀಲ ಗುಬಚೆ, ಹನಗಂಡಿ ಪಿಕೆಪಿಎಸ್ ನಿರ್ದೇಶಕ ಸಚೀನ ಮುರಗುಂಡಿ, ಪರಶುರಾಮ ಬಸವ್ವಗೋಳ, ಸಂಗಮೇಶ ಪಾಟೀಲ, ರಾಜು ಕದಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 