ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮ

ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮ Awareness program on children's rights and child protection laws

             ಕೊಪ್ಪಳ 29;  ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರೈಲ್ವೆ ಸ್ಟೇಶನ್ ಕೊಪ್ಪಳ ಹಾಗೂ ಬೆಳಕು ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಕೊಪ್ಪಳ ಇವರುಗಳ ಸಹಯೋಗದೊಂದಿಗೆ ಆಯೋಜಿಸಿದ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಬಿ.ಎಚ್‌. ಚೆನ್ನಬಸಪ್ಪ ಸಬ್ ಇನ್ಸ್‌ಪೆಕ್ಟರ್ ಆರ್‌.ಪಿ.ಎಫ್‌. ರೈಲ್ವೆ ಸ್ಟೇಶನ್ ಕೊಪ್ಪಳ ಇವರುಗಳು ಚರ್ಚೆಸಿದಂತೆ ರೈಲ್ವೆ ಸ್ಟೇಶನ್ ನಲ್ಲಿ ಒಬ್ಬಂಟಿಯಾಗಿ ಓಡಾಡುವ ಮಕ್ಕಳನ್ನು ಕರ್ತವ್ಯದಲ್ಲಿ ಇರುವ ರೈಲ್ವೆ ಪೊಲೀಸರು ಮಕ್ಕಳನ್ನು ಗಮನಿಸಿ ಮಕ್ಕಳ ಸ್ನೇಹಿಯಾಗಿ ಅವರೊಂದಿಗೆ ಮಾತನಾಡಿ, ಸಮಸ್ಯೆಯನ್ನು ಅರಿತು ಮಗುವನ್ನು ರಕ್ಷಿಸಿ ಸ್ಥಳಿಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಥವಾ ಸರಕಾರಿ ಬಾಲಕರ ಬಾಲಮಂದಿರ ಮತ್ತು ಬಾಲಕಿಯರ ಬಾಲ ಮಂದಿರಕ್ಕೆ ಹಾಜರುಪಡಿಸಬೇಕು ಎಂದರು. ರೈಲ್ವೆ ನಿಲ್ದಾಣದಲ್ಲಿ ಓಡಿ ಬಂದ, ಕಾಣಿಯಾದ, ಭಿಕ್ಷೆಬೇಡುವ, ದೈಹಿಕ ಹಲ್ಲೆಗೆ ಒಳಗಾಗುವ, ಮಾದಕ ಪದಾರ್ಥಗಳನ್ನು ಸೇವಿಸಿ ಸುತ್ತಾಡುತ್ತಿರುವ ಮಕ್ಕಳು ಕಂಡುಬರುತ್ತಾರೆ. ಮಾದಕ ವ್ಯಸನಿಯಾಗಿರುವ ಮಕ್ಕಳ ದೇಹವನ್ನು ಹಾಳುಗೆಡುವುದಲ್ಲದೇ ನಮ್ಮ ಯುವಜನಾಂಗವನ್ನು ನಿಶ್ಯಕ್ತರನ್ನಾಗಿ ಮಾಡಿಬಿಡುತ್ತದೆ. ಇಂತಹ ಮಕ್ಕಳಿಗೆ ಆಪ್ತಸಮಾಲೋಚನೆ ಮಾಡಿ ಮಗು ಮತ್ತು  ಕುಟುಂಬದ ಬದಕನ್ನು ಉಳಿಸಬೇಕಾಗುತ್ತದೆ ಎಂದು ತಿಳಿಸಿದರು. 

     ಸಭೆಯಲ್ಲಿ ಭಾಗವಹಿಸಿದ ಶರಣಪ್ಪ ಸಿಂಗನಾಳ ಮಕ್ಕಳ ಸಹಾಯವಾಣಿ-1098/112 ಜಿಲ್ಲಾ ಸಂಯೋಜಕರು ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಕನ್ನಡ ಭಾಷೆಯಲ್ಲಿ ಎಲ್ಲರಿಗೂ ತಿಳಿಯುವಂತೆ ಹಾಗೂ ಕಾಣುವಂತೆ ಮಕ್ಕಳ ಸಹಾಯವಾಣಿಯ ಗೋಡೆ ಬರಹ ಬರೆಸಬೇಕು, ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಮಗುವಿನ ಪುನರ್ವಸತಿ ಕಲ್ಪಿಸಲು ಮಕ್ಕಳ ಸಹಾಯವಾಣಿ-1098/112 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ರೈಲ್ವೆ ನಿಲ್ದಾಣದಲ್ಲಿ ಅಲೆದಾಡಿದ ಮಗು ಯಾವುದೇ ರೀತಿಯಿಂದ ದೈಹಿಕಹಿಂಸೆ, ನಿರ್ಲಕ್ಷ್ಯ ಮತ್ತು ಶೋಷಣೆಗೆ ಒಳಗಾಗಿರುತ್ತಾರೆ. ಕಾರಣ ಇಂತಹ ಮಕ್ಕಳನ್ನು ಯಾವದೇ ಕಾರಣಕ್ಕೆ ನೇರವಾಗಿ ಪಾಲಕರಿಗೆ ಒಪ್ಪಿಸಬಾರದು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸುವ ಮೂಲಕ ಮಗುವಿಗೆ ಘನತೆ ಮತ್ತು ಗೌರವಿತವಾದ ಬದಕು ಕಟ್ಟಿಕೊಡಬೇಕು ಎಂದರು. 

     ಸಂಸ್ಥೆಯ ಅಧ್ಯಕ್ಷರಾದ ಕು.ನಿರ್ಮಲಾ ಬೆಲ್ಲದ್ ಮಾತನಾಡಿ, ರೈಲ್ವೆ ಸ್ಟೇಶನ್, ಬಸ್ಸ್‌ ನಿಲ್ದಾಣಗಳಲ್ಲಿ ಮಹಿಳೆ ಮತ್ತು ಮಕ್ಕಳ ಮಾರಾಟ, ಅಪಹರಣ, ಕಳ್ಳತನ ಲೈಂಗಿಕ ಹಲ್ಲೆ ಮತ್ತು ಶೋಷಣೆಯಂತಹ ಘಟನೆಗಳು ನಡೆಯುತ್ತವೆ. ಯಾವುದೇ ಬಂಡವಾಳವಿಲ್ಲದೆ ಮಹಿಳೆ ಮತ್ತ ಮಕ್ಕಳ ಮಾರಾಟ ಮಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಶ್ರೀಮಂತಿಕೆ ಬಯಸುವ ಹೇಡಿ ಕೃತ್ಯಗಳು ನಡೆಯುತ್ತದೆ. ಇದನ್ನು ರೈಲ್ವೆ ಪೊಲೀಸ್ ಹಾಗೂ ಒಡಾಡಳಿತ ಗಮನಿಸಬೇಕಿದೆ ಸಂಸ್ಥೆ ತಮ್ಮೊಂದಿಗೆ ಸಮಾಜ ಮುಖಿಯಾಗಿ ಕೆಲಸ ಮಾಡುವುದೆಂದು ತಿಳಿಸಿದರು.ಸಂದರ್ಭದಲ್ಲಿ ಸುರೇಶ್ ಬೆಲ್ಲದ್ ಉಪಾಧ್ಯಕ್ಷರು. ವಿ.ಜಿ. ಶಿವಕುಮಾರ ಎಚ್‌ಸಿ. ಅಬ್ದುಲ್‌ವಾಹಿದ್, ಎಚ್‌ಸಿ. ನಿಂಗಪ್ಪ ಎಮ್‌.ಎಚ್‌.ಸಿ. ಮಲ್ಲಿಕಾರ್ಜುನ್ ಸಿಟಿ. ನಿಂಗೊಂಡಪ್ಪ ಸಿಟಿ. ಜಯರಾಜ್ ಇ.ಎಸ್‌.ಎಮ್‌. ರಾಮಣ್ಣ ಇ.ಎಸ್‌.ಎಮ್ ಸಭೆಯಲ್ಲಿ ಉಪಸ್ಥಿತರಿದ್ದರು. 


   


  ‘