ಕೇಂದ್ರ ಬಜೆಟ್ನಲ್ಲಿ ಕೇಂದ್ರದಿಂದ ಬೇಡಿಕೆಗಳನ್ನು ಈಡೇರಿಸಲು ಆಶಾ ಕಾರ್ಯಕರ್ತೆಯರ ಮನವಿ ಪತ್ರ

ಕೇಂದ್ರ ಬಜೆಟ್ನಲ್ಲಿ ಕೇಂದ್ರದಿಂದ ಬೇಡಿಕೆಗಳನ್ನು ಈಡೇರಿಸಲು ಆಶಾ ಕಾರ್ಯಕರ್ತೆಯರ ಮನವಿ ಪತ್ರ Asha workers' letter of appeal to the Centre to fulfill their demands in the Union Budget

ಹಾವೇರಿ 27 :  ಕೇಂದ್ರ ಬಜೆಟ್ನಲ್ಲಿ ಕೇಂದ್ರದಿಂದ ಬೇಡಿಕೆಗಳನ್ನು ಈಡೇರಿಸಲು ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಿತಿ ವತಿಯಿಂದ ಮಾನ್ಯ ಸಂಸದರಾದ ಬಸರಾಜ ಬೊಮ್ಮಾಯಿ ಯವರಿಗೆ ಜಿಲ್ಲಾ ಸಮಿತಿ ವತಿಯಿಂದ ಹುಕ್ಕೇರಿ ಮಠದಲ್ಲಿ ನಿಯೋಗದಲ್ಲಿ ತೆರಳಿ ಮನವಿ ಪತ್ರ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ, ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಗಂಗಾಧರ ಬಡಿಗೇರ, ಕಳೆದ 18 ವರ್ಷಗಳಿಂದ ಆರೋಗ್ಯ ಇಲಾಖೆ ಮತ್ತು ಜನಸಾಮಾನ್ಯರ ಕೊಂಡಿಯಾಗಿ ಅತ್ಯಂತ ನಿಷ್ಠೆಯಿಂದ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿರುವುದು ತಮಗೆಲ್ಲ ತಿಳಿದಿದೆ. ಇವರ ಸೇವೆಯಿಂದಾಗಿಯೇ ಆರೋಗ್ಯ ಸೂಚಿಮಾಪಕಗಳು ಹೆಚ್ಚಿರುವುದು ಆರೋಗ್ಯ ಇಲಾಖೆಯ ದಾಖಲೆಗಳು ದೃಢಪಡಿಸುತ್ತವೆ. ಈ ಮಹತ್ವದ ಕಾರ್ಯದಿಂದ ಜನತೆಗೆ ಸೇವೆ ಸಲ್ಲಿಸುತ್ತಿರುವ ಇವರಿಗೆ ಸರ್ಕಾರದಿಂದ ಮತ್ತಷ್ಟು ಪ್ರೋತ್ಸಾಹ ಅತ್ಯಗತ್ಯವಿದೆ.

ಇಂದಿನ ಬೆಲೆ ಏರಿಕೆ ದಿನಗಳಲ್ಲಿನ ಜೀವನ ಯೋಗ್ಯ ವೇತನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ವತಿಯಿಂದ ಆಶಾ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಗಳ ಈಡೇರಿಕೆಗಾಗಿ ಈ ಮುಂಬರುವ ಬಜೆಟ್ ಆದೇಶ ಮಾಡಬೇಕು. ಹಾಗೆಯೇ ಕಳೆದ ಜುಲೈ 9 ರಂದು ರಾಷ್ಟ್ರವ್ಯಾಪಿಯಾಗಿ ಎಲ್ಲಾ ಯೋಜನಾ ಕಾರ್ಮಿಕರು ಹೋರಾಟ ನಡೆಸಿದ ನಂತರ 2025, ಜುಲೈಯಲ್ಲಿ ಆಶಾ ಕಾರ್ಯಕರ್ತೆಯರಿಗೆ ರೂ.2500-3000 ಹೆಚ್ಚಳವನ್ನು ಮಾನ್ಯ ಕೇಂದ್ರ ಆರೋಗ್ಯ ಸಚಿವರಾದ ಶ್ರೀಯುತ ಜೆ.ಪಿ.ನಡ್ಡಾ ಘೋಷಣೆ ಮಾಡಿದ್ದರು. ಇಲ್ಲಿಯವರೆಗೂ ಹೆಚ್ಚಳವಾಗಿರುವ ಮೊತ್ತವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ. ಆದ್ದರಿಂದ ಈ ಬಜೆಟ್ನಲ್ಲಿ ಸಂಬಂಧ ಪಟ್ಟ ಆದೇಶ ಮತ್ತು ಹಣ ಬಿಡುಗಡೆ ಮಾಡಬೇಕು, ಎಂದರು.ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರು ಜಯಶೀಲಾ ಆಶಾ ಕಾರ್ಯಕರ್ತೆಯರನ್ನು ಐಎಲ್‌ಓ ಶಿಫಾರಸ್ಸಿನಂತೆ ಕಾರ್ಮಿಕರೆಂದು ಪರಿಗಣಿಸಿ, ರೂ.28,000 ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು.

ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಜುಲೈ 2025 ರಲ್ಲಿ ಹೆಚ್ಚಿಸಿರುವ ರೂ.1500 ಮತ್ತು ಇತರ ಕಾಂಪೋನೆಂಟ್ಗಳ ಹೆಚ್ಚಳವನ್ನು ಮತ್ತು ನಿವೃತ್ತಿ ಇಡಿಗಂಟನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಶಾ ಕಾರ್ಯಕರ್ತೆರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ, ಅಲ್ಲಿಯವರೆಗೆ ಐಎಲ್‌ಓ ಶಿಫಾರಸ್ಸಿನಂತೆ ಕಾರ್ಮಿಕರಿಗೆ ನೀಡುವ ಕನಿಷ್ಠ ವೇತನವನ್ನು ಜಾರಿಗೊಳಿಸಿ. ಆಶಾ ಕಾರ್ಯಕರ್ತೆಯರ ನಿವೃತ್ತಿ ಇಡಿಗಂಟನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಬೇಕು. ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಪಿಂಚಣಿಯನ್ನು ಘೋಷಿಸಬೇಕು, ಎಂದು ಸಂಸದರನ್ನು ಕೇಳಿಕೊಂಡರು. ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷ ಪುಷ್ಪ ಮಡ್ಲೂರ್ ಮಠ, ಜಿಲ್ಲಾ ಕಾರ್ಯದರ್ಶಿ ರತ್ನ ಗಿರಣಿ, ಹಾಗೂ ಸದಸ್ಯರಾದ ಸುಮಂಗಲ ಪಾಟೀಲ್, ಪ್ರಭಾವತಿ ಈಳಿಗೆರ, ಪುಷ್ಪ ಕರದುಂಡಿ, ಲಲಿತಾ ಸಂಕಪ್ಪನವರ್, ರತ್ನ ದೊಡ್ಡಮನಿ, ಲಕ್ಷ್ಮಿ ಜೆಲ್ಲಿ, ವಿದ್ಯಾ ಹುಳುಬುತ್ತಿ, ರೂಪ ಮಲ್ಲೂರ್ ಮುಂತಾದವರು ಇದ್ದರು.