ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳ ತಕ್ಷಣ ಬಂಧಿಸಿ : ಜಿತೆಂದ್ರ ಸುಣಗಾರ

ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳ ತಕ್ಷಣ ಬಂಧಿಸಿ : ಜಿತೆಂದ್ರ ಸುಣಗಾರ  Arrest the miscreants who vandalized Ambigara Chowdarya's statue immediately: Jitendra Sunagara

ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳ ತಕ್ಷಣ ಬಂಧಿಸಿ : ಜಿತೆಂದ್ರ ಸುಣಗಾರ  

ಬ್ಯಾಡಗಿ 14 ;  ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಗುರುವಾರ ರಾತ್ರಿ ಕೋಲಿ, ಕಬ್ಬಲಿಗ ಸಮಾಜದ ಕುಲಗುರು ನಿಜಶರಣ  ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ತಾಲೂಕು ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ನೇತೃತ್ವದಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ  ಪ್ರತಿಭಟನೆ ನಡೆಸಿದ ಮುಖಂಡರು  ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ಹಿರಿಯ ಮುಖಂಡ  ಹಾಗೂ ಮಾಜಿ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಜಿತೇಂದ್ರ ಸುಣಗಾರ ಮಾತನಾಡಿ, ಮುತ್ತಗಾ ಗ್ರಾಮದಲ್ಲಿ ಸ್ಥಾಪಿಸಿದ್ದ ಕೋಲಿ, ಕಬ್ಬಲಿಗ ಸಮಾಜದ ಕುಲಗುರು ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕಿಡಿಗೇಡಿಗಳು ಅ. 9 ರಾತ್ರಿ ಭಗ್ನಗೊಳಿಸಿರುವ ದುಷ್ಕೃತ್ಯವನ್ನು ಬ್ಯಾಡಗಿ ತಾಲೂಕು ನಿಜಶರಣ ಅಂಬಿಗರ ಚೌಡಯ್ಯನವರ  ಸಮಾಜವು ಉಗ್ರವಾಗಿ ಖಂಡಿಸುತ್ತದೆ.  

ಬಸವಾದಿ ಶಿವಶರಣರಲ್ಲಿಯೆ ನಿಜಶರಣ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿರುವ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ ಹಾಗೂ ಅವಮಾನ ಘಟನೆಯು ಇಡೀ ಅಂಬಿಗರ  ಸಮಾಜದವರ ಸ್ವಾಭಿಮಾನಕ್ಕೆ ಅಪಮಾನ ಮತ್ತು ಸಮಾಜದ ಜನತೆಯ ಭಾವನೆಗಳಿಗೆ ತೀವ್ರ ಧಕ್ಕೆಯುಂಟಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಸಾರ್ವಜನಿಕ ಶಾಂತಿಗೆ, ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುವ ಷಡ್ಯಂತರ ರೂಪಿಸಿ ಅಶಾಂತಿಯ ಮತ್ತು ಕೋಮು ಸಾಮರಸ್ಯ ಕದಡಿದ್ದನ್ನು ಮತ್ತು ಅಂಬಿಗರ ಚೌಡಯ್ಯನವರ ಸಮಾಜದ ಜನತೆಯ ಭಾವನೆಗಳನ್ನು ಕೆರಳಿಸಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ನಿಜ ಶರಣ ಅಂಬಿಗರ ಚೌಡಯ್ಯನವರ ಬೆಸ್ತರ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಹೆಗ್ಗಣ್ಣನವರ್ ಹೇಳಿದರು.ಖಜಾಂಚಿ ಚಂದ್ರು ಮುಳುಗುಂದ ಮಾತನಾಡಿ, ಆರೋಪಿ ಯಾವುದೇ ಜಾತಿ ಜನಾಂಗಕ್ಕೆ ಸೇರಿರಲಿ ತಾರತಮ್ಯ ಮಾಡದೇ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಮತ್ತು ಅಂತಹ ಕುಕೃತ್ಯ ಎಸಗಲು ಪರೋಕ್ಷವಾಗಿ ಪ್ರಚೋದನೆ ನೀಡಿರುವ ಸಮಾಜ ವಿರೋಧಿ ಶಕ್ತಿಗಳನ್ನು ಗುರುತಿಸಿ ಮತ್ತು ಶೀಘ್ರ ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.  

ಒಂದು ವೇಳೆ ಆರೋಪಿಗಳ ಪತ್ತೆ ಮತ್ತು ಬಂಧನಕ್ಕೆ ವಿಳಂಬ ಮಾಡಿದರೆ ಇಡೀ ನಿಜ ಶರಣ ಅಂಬಿಗರ ಚೌಡಯ್ಯನವರ ಸಮಾಜವು ಉಗ್ರ ಸ್ವರೂಪದ ಹೋರಾಟ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಸಮಾಜದ ಉಪಾಧ್ಯಕ್ಷ ಗುಡ್ಡಪ್ಪ ಬಾರ್ಕಿ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ  ಸಣ್ಣಬಾರ್ಕಿ ಕಾರ್ಯಾಧ್ಯಕ್ಷ ಚಂದ್ರ​‍್ಪ ದೊಡ್ಡಮನಿ, ಜಯಪ್ಪ ಭೋವಿ. ಮಾಲತೇಶ್ ದೇವಗೇರಿ. ಮಂಜಪ್ಪ ಸುಣಗಾರ. ಅಶೋಕ್ ಉದಗಟ್ಟಿ. ಶಿವರಾಜ್ ಹಿರೇಮತ್ತೂರ್‌. ಮಹಾದೇವಪ್ಪ ಗೋಣಿ. ಜಯಪ್ಪ ಬೋವಿ. ಕುಮಾರ ಸುಣಗಾರ್‌. ಮಲ್ಲಪ್ಪ ಹಿರೇಮತ್ತೂರ. ಸುಮಂಗಲ ಬಾರ್ಕಿ. ಶ್ವೇತಾ ಸುಣುಗಾರ್ ಹಾಗೂ ಸಮಾಜದ  ಪ್ರಮುಖರು ಉಪಸ್ಥಿತರಿದ್ದರು.