ಸಂಗೋಳ್ಳಿ ರಾಯಣ್ಣನ ಪ್ರತಿಮೆ ಅನಾವರಣಕ್ಕೆ ಸಚಿವ, ಶಾಸಕರು ಆಸಕ್ತಿ ತೋರುತ್ತಿಲ್ಲಕೇ..? ಮಲ್ಲಿಕಾರ್ಜುನ ಎ.ಕೆ.

Are the ministers and MLAs not interested in the unveiling of Sangolli Rayanna's statue? Mallikarj

ಸಂಗೋಳ್ಳಿ ರಾಯಣ್ಣನ ಪ್ರತಿಮೆ ಅನಾವರಣಕ್ಕೆ ಸಚಿವ, ಶಾಸಕರು ಆಸಕ್ತಿ ತೋರುತ್ತಿಲ್ಲಕೇ..?  ಮಲ್ಲಿಕಾರ್ಜುನ ಎ.ಕೆ.  

ಬಳ್ಳಾರಿ 15: ನಗರದ ರಂಗ ಮಂದಿರದ ಬಳಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣವಾಗಿ ಎರಡು ವರ್ಷಕಳೆದರು ಜನಪತ್ರಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಪ್ರತಿಷ್ಠೆಯಿಂದ ಅನಾವರಣಗೊಳ್ಳದೆ ಮುಂದಕ್ಕೆ ಹೋಗುತ್ತಿದೆ.ಪ್ರತಿಮೆ ನಿರ್ಮಾಣವಾದ ವೇಳೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ನಂತರ ವಿಧಾನಸಭಾ ಚುನಾವಣೆ ತದನಂತರ ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಗಳೇ ನಡೆದರೂಈವರೆಗೂ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಆಸಕ್ತಿ ಏಕೆತೋರುತ್ತಿಲ್ಲ ಎಂಬುದು ಜನರ ಮನಸ್ಸುಲ್ಲಿ ಪ್ರಶ್ನೆಯಾಗಿದೆ.  

ಇತ್ತೀಚೆಗೆ ಕನಕ ಜಯಂತಿ ದಿನದಂದು ಸಮುದಾಯದ ಕೆಲಮುಖಂಡರು ಏಕಾಏಕಿ ಪ್ರತಿಮೆ ಅನಾವರಣಗೊಳಿಸಿದ್ದರು. ಜಿಲ್ಲಾಡಳಿತದ ಅನುಮತಿಯಿಲ್ಲದೆ ಅನಾವರಣಗೊಳಿಸಿದ ಪ್ರತಿಮೆಗೆ ಸಂಸದ ತುಕಾರಾಂ, ಮಾಜಿ ಸಚಿವ ಶ್ರಿರಾಮುಲುಪ್ರತಿಮೆಗೆ ಮಾಲಾರೆ​‍್ಣ ಮಾಡಿ ವಿವಾದ ಸೃಷ್ಟಿಯಾಗಿ, ಶಾಸಕರೆ ಎದುರೇ ವಾಗ್ವಾದ ನಡೆದ ಪ್ರಸಂಗವು ನಡೆದವು.ಸಮುದಾಯದ ಜನರಲ್ಲಿ ಹೊತ್ತಿ ಉರಿಯುತ್ತಿದ್ದ ಕಿಚ್ಚನ್ನು ತಣ್ಣಗೆ ಗೊಳಿಸಲು, ಸಂಗೋಳ್ಳಿರಾಯಣ್ಣನ ಪ್ರತಿಮೆ ಅನಾವರಣ ಕಾರ್ಯಕ್ರಮ ಇಡೀ ಉತ್ತರ ಕರ್ನಾಟಕವನ್ನೇ ಗಮನ ಸೆಳೆಯುವಂತೆ ಮಾಡೊಣ ಎಂಬ ನಗರ ಶಾಸಕರು ಭರವಸೆ ಇವರೆಗೂ ನನಸಗಲಿಲ್ಲ. 

ಇವುಗಳಿಗೆಲ್ಲ ಪರಿಹಾರ ಸೂಚಿಸಬೇಕಾದ ಉಸ್ತುವಾರಿಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಳ್ಳಾರಿಗೂ ನನಗೂ ಸಂಭದವಿಲ್ಲ ಎಂಬಂತೆ ಇತ್ತ ಗಮನಹರಿಸುತ್ತಿಲ್ಲ. ಸರ್ಕಾರ ವಂತೂ ವಾಲ್ಮೀಕಿ ನಿಗಮದ ಹಗರಣ ಎದುರುಸಿತ್ತಿರುವ ಮಾಜಿ ಶಾಸಕ ನಾಗೇಂದ್ರರರಿಗಾದರೂ ಸಚಿವ ಪಟ್ಟಕಟ್ಟುತ್ತಿಲ್ಲ. ಇನ್ನೂ ಸಚಿವ ಸ್ಥಾನದ ಅಸೆಯೊತ್ತು ಮುಖ್ಯ ಮಂತ್ರಿಮನೆ ಸುತ್ತ ಸುತ್ತುತಿರುವ ಶಾಸಕರುಗಳೇ ನಾವಾಯತು ನಮ್ಮ ಕ್ಷೇತ್ರವಾಯಿತು ಕೇಂದ್ರ ಸ್ಥಾನದ ಗಲಾಟೆ ನಮಗೇಕಪ್ಪ ಎಂಬತಿರುವುದು ಜನಮರುಳೊ ಜಾತ್ರೆ ಮರುಳೊ ಎಂಬಂತಿದೆ.