ಕುಷ್ಟಗಿ ರಸ್ತೆಯಲ್ಲಿ ಕಟ್ಟಡ ಕಾರ್ಮಿಕರ ಶಾಲಾ ಜಾಗೆ ಅತಿಕ್ರಮಣ ನಗರಸಭೆ ಪೌರಾಯುಕ್ತರಿಗೆ ಮನವಿ

ಕುಷ್ಟಗಿ ರಸ್ತೆಯಲ್ಲಿ ಕಟ್ಟಡ ಕಾರ್ಮಿಕರ ಶಾಲಾ ಜಾಗೆ ಅತಿಕ್ರಮಣ ನಗರಸಭೆ ಪೌರಾಯುಕ್ತರಿಗೆ ಮನವಿ Appeal to the Municipal Commissioner regarding encroachment of construction workers' school land on

ಕುಷ್ಟಗಿ ರಸ್ತೆಯಲ್ಲಿ ಕಟ್ಟಡ ಕಾರ್ಮಿಕರ ಶಾಲಾ ಜಾಗೆ ಅತಿಕ್ರಮಣ ನಗರಸಭೆ ಪೌರಾಯುಕ್ತರಿಗೆ ಮನವಿ 

ಕೊಪ್ಪಳ 16 : ನಗರದ ಕುಷ್ಟಗಿ ರಸ್ತೆಯಲ್ಲಿರುವ ಬೇಲ್ದಾರ್ ಕಾಲೋನಿಯ ಸರ್ವೆ ನಂ. 91/3, 91/4 ರಲ್ಲಿ ಶಾಲೆಗಾಗಿ ಮೀಸಲಿಟ್ಟ ಜಾಗೆಯನ್ನು ಅತಿಕ್ರಮಣ ಮಾಡಿದ್ದು ತಕ್ಷಣ ತಡೆದು ಸದರಿ ಜಾಗೆಯನ್ನು ಶಾಲೆಗೆ ಮೀಸಲಿಟ್ಟ ಜಾಗೆ ಎಂದು ಘೋಷಿಸುವಂತೆ ನಗರ ಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ ಅವರಿಗೆ ಕೊಪ್ಪಳ ತಾಲೂಕ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ(ರಿ) ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.    ನಮ್ಮ ಸಂಘದಿಂದ ಸದಸ್ಯರಿಗೆ ಸೂರು ಕಟ್ಟಿಕೊಳ್ಳಲು ಜಮೀನು ಖರೀದಿಸಿ ನಿವೇಶನಗಳನ್ನು ರಚಿಸಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಂಚಲಾಗಿದ್ದು ನಿಯಮದಂತೆ ಸದರಿ ಜಮೀನಿನಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕೆಲವೊಂದು ನಿವೇಶನಗಳನ್ನು ಮೀಸಲಾಗಿರಿಸಲಾಗಿದೆ. ಸರ್ವೆ ನಂಬರ್ 91/3. 91/4 ರಲ್ಲಿನ ಮೂಲೆಯಲ್ಲಿ ತ್ರಿಕೋನಾಕಾರದಲ್ಲಿರುವ ಜಾಗೆಯನ್ನು ಶಾಲೆಗೆ ಮೀಸಲು ಇಡಲಾಗಿದೆ. ಈ ಜಾಗೆಯು ಪೂರ್ವಕ್ಕೆ ಸರ್ವೆ ನಂಬರ್ 90. ಪಶ್ಚಿಮಕ್ಕೆ ಕುಷ್ಟಗಿ ರಸ್ತೆ. ಉತ್ತರಕ್ಕೆ ರಸ್ತೆ. ದಕ್ಷಿಣಕ್ಕೆ ಪ್ಲಾಟ್ ನಂಬರ್ 19 ಮತ್ತು 21 ಸದರಿ ಚೆಕ್ಕಬಂದಿ ಹೊಂದಿದೆ.ಸದರಿ ಚೆಕ್ಕಬಂದಿ ಮಧ್ಯದಲ್ಲಿ ಶಾಲೆಗಾಗಿ ಮೀಸಲಿಟ್ಟ ಜಾಗೆಯನ್ನು ಕೆಲವರು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕಾರಣ ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಶಾಲೆಯು ಬೇಕಾಗಿದೆ. ಕಾರಣ ಸದರಿ ಮಾಡಿರುವ ಅತಿಕ್ರಣವನ್ನು ತೆರವುಗೊಳಿಸಿ, ಸದರಿ ಜಾಗೆಯನ್ನು ಶಾಲೆಗೆ ಮೀಸಲಿಟ್ಟ ಜಾಗೆ ಎಂದು ಘೋಷಿಸಬೇಕೆಂದು ಮತ್ತು ಅಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.ಬಳಿಕ ನಗರ ಪೊಲೀಸ್ ಠಾಣೆಗೆ ಹೋಗಿ ಪೊಲೀಸ್ ಇನ್ಸಪೆಕ್ಟರ್ ಜಯಪ್ರಕಾಶ್ ಅವರಿಗೂ ಮನವಿ ಕೊಟ್ಟು ಮುಂದೆ ಯಾವುದೇ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಕೊಪ್ಪಳ ತಾಲೂಕ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ(ರಿ)ದ ಅಧ್ಯಕ್ಷ ಶಾಬುದ್ದೀನ್ ಸಾಬ್ ಜವಳಗೇರಿ. ಉಪಾಧ್ಯಕ್ಷ ರಾಮಣ್ಣ ಬಾಣಕಾರ್‌. ಮಾಜಿ ಅಧ್ಯಕ್ಷ ಸಿದ್ದು ಮ್ಯಾಗೇರಿ. ಸಂಚಾಲಕ ಜಾಫರ್ ಕುರಿ ಮೇಸ್ತ್ರಿ. ಕಾರ್ಯದರ್ಶಿ ಹಜರತ್ ಅಲಿ ಮುಜಾವರ್‌. ಖಜಾಂಚಿ ಸಿದ್ಲಿಂಗಪ್ಪ ಕಮಲಾಪುರ. ಸದಸ್ಯರಾದ ದೇವೇಂದ್ರ​‍್ಪ ಚಿಗರಿ. ನಿಂಗಪ್ಪ ಸುಣಗಾರ. ತಿಪ್ಪಣ್ಣ ಕವಲೂರ. ಇಸ್ಮಾಯಿಲ್ ಸಾಬ್ ಕೋಲಕಾರ.ಲಕ್ಷ್ಮಣ ಎಮ್ಮಿ. ಬಸವರಾಜ್ ವಾಲಿಕಾರ್ ಮುಂತಾದವರು ಮನವಿ ಸಲ್ಲಿಸಿ ಒತ್ತಾಯಿಸಿದರು.