ಆರ್‌.ಎಸ್‌.ಎಸ್ ನಡೆ ಖಂಡಿಸಿ ಮನವಿ

ಆರ್‌.ಎಸ್‌.ಎಸ್ ನಡೆ ಖಂಡಿಸಿ ಮನವಿ Appeal condemning RSS's move

            ವಿಜಯನಗರ 25: ಆರ್‌.ಎಸ್‌.ಎಸ್‌. ಕಾನೂನ ಬಾಹಿರ ನಡೆಯನ್ನು ವಿರೋಧಿಸಿ ಸರಕಾರ ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ “ಪ್ರಜಾಪ್ರಭುತ್ವ ಸಂವಿಧಾನದ ಅನುಷ್ಟಾನಕರಾದ ಪ್ರಿಯಾಂಕ ಖರ್ಗೆ ಅವರನ್ನು ಬೆಂಬಲಿಸಿ ಅವರಿಗೆ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನಿಡಬೇಕೆಂದು ಒತ್ತಾಯಿಸಿ ದಿ. 25ರಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. 

            ಕೇಂದ್ರದಲ್ಲಿ ಮನುವಾದಿಗಳು ಅಧಿಕಾರಕ್ಕೆ ಬಂದ ತರುವಾಯದಲ್ಲಿ ದಿನೇದಿನೇ ದಲಿತ ಸಮುದಾಯದ ಮೇಲಿನ ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರಗಳು ಉಲ್ಬಣಿಸುತ್ತಿವೆ. ದಲಿತ ಸಮುದಾಯವನ್ನು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ವ್ಯವಸ್ಥಿತವಾಗಿ ಸದೆಬಡೆಯಲಾಗುತ್ತಿದೆ. ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಸಿ.ಜೆ.ಐ. ಬಿ.ಆರ್‌. ಗವಾಯಿ ಅವರ ಮೇಲೆ ಮನುವಾದಿ, ಜಾತಿವಾದಿ ಮಂತಾಂಧ ವಕೀಲನೊಬ್ಬ ಶೂ ಎಸೆಯುವ ಮೂಲಕ ದೇಶದ್ರೋಹಿ ಕೃತ್ಯ ಎಸೆಗಿದ್ದಾನೆ. ಇದು ಒಂದು ರೀತಿಯಲ್ಲಿ ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನೇರ ದಾಳಿಯಾಗಿದೆ. ದಲಿತರು ಉನ್ನತ ಹುದ್ದೆಯಲ್ಲಿರುವುದನ್ನು ಮನುವಾದಿಗಳು ಸಹಿಸುವುದಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ. ಕೋಮುವಾದಿ ಮನಸ್ಥಿತಿಯ ವಕೀಲನೊಬ್ಬ ಸಾರ್ವಜನಿಕವಾಗಿ ಡಾ. ಬಾಬಾಸಾಹೇಬರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತ, ಅವರು ಸಂವಿಧಾನವನ್ನೇ ಬರೆದಿಲ್ಲ ಎಂದು ರಾಷ್ಟ್ರ ವಿರೋಧ ಮಾತುಗಳನ್ನಾಡಿದ್ದಾನೆ. 

             ಭಾರತ ಸಂವಿಧಾನವನ್ನು ಗೌರವಿಸದ, ಐವತ್ತೈದು ವರ್ಷಗಳ ಕಾಲ ತನ್ನ ಕಛೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದ, ಸ್ವತಂತ್ರ ಹೋರಾಟದಲ್ಲಿ ಭಾಗವಹಿಸದ, ಇದುವರೆಗೂ ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದಿರುವ, ಅನಧಿಕೃತ ಆದಾಯದ ಮೂಲಗಳನ್ನು ಹೊಂದಿದ್ದು, ಇದುವರೆಗೂ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸದ, ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆರ್‌.ಎಸ್‌.ಎಸ್‌. ಸಂಘಟನೆಯನ್ನು ಕುರಿತು, ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ವರ್ತಿಸಬೇಕು. ಇಲ್ಲವಾದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಹೇಳಿದ ಕಾರಣಕ್ಕಾಗಿ, ಕೆಲವು ಕೋಮುವಾದಿ ದುಷ್ಟಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ, ಅವರ ಕುಟುಂಬ ಸದಸ್ಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತ, ಜೀವಬೆದರಿಕೆ ಹಾಕಲಾಗುತ್ತಿದೆ. ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಏಳಗೆಯನ್ನು ಸಹಿಸದ ಮನುವಾದಿಗಳು ಅವರು ದಲಿತ ಸಮುದಯಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲಾಗುತ್ತಿದೆ. ಇದು ಖಂಡನಾರ್ಹ, ಮನುವಾದಿಗಳ ಧೋರಣೆಯು ದಲಿತ ಸಮುದಾಯ ವಿರೋಧಿ ಯಾಗಿರುವುದರಿಂದ, ದಲಿತ ಸಮುದಾಯವು ಸಂಘಟನಾತ್ಮಕವಾಗಿ ಕೋಮುವಾದಿ ಅರ್‌.ಆರ್‌.ಎಸ್‌.ಎಸ್‌. ಸಂಘಟನೆಯನ್ನು ಪ್ರತಿ ರೋಧಿಸಬೇಕಿದೆ. 

            ನಾಳೆ ತಲೆಮಾರಿನ ಉತ್ತಮ ಭವಿಷ್ಯಕ್ಕಾಗಿ ಭಾರತ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಮನುವಾದಿಗಳಿಂದ ಸಂರಕ್ಷಿಸುವುದು ಸಮಸ್ತ ಭಾರತೀಯರ ಆದ್ಯ ಕರ್ತವ್ಯವಾಗಿದೆ. ಈ ಕಾರಣಕ್ಕಾಗಿ ಮನುವಾದಿ ಆರ್‌.ಎಸ್‌.ಎಸ್‌. ಸಂಘಟನೆಯ ದಲಿತ ವಿರೋಧಿ ನಿಲುವನ್ನು ಖಂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟವನ್ನು ಹಮ್ಮಿಕೊಂಡಿದೆ. ಭಾರತ ಸಂವಿಧಾನ, ಪ್ರಜಾಪ್ರಭುತ್ವದ ಬಗೆಗೆ ನಂಬಿಕೆ ಇರುವ ನಾಗರೀಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಂಘರ್ಷ ಸಮಿತಿಯು ಹಮ್ಮಿಕೊಂಡಿರುವ ಈ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ, ಸಂವಿಧಾನ ಬದಲಾಗಿ ಮನುಧರ್ಮ ಶಾಸ್ತ್ರವನ್ನು ಜಾರಿಗೊಳಿಸಲು ಹೊಂಚು ಹಾಕುತ್ತಿರುವ ಮನುವಾದವನ್ನು ಖಂಡಿಸಬೇಕಿದೆ. 

             ಭಾರತದ ರಾಷ್ಟ್ರ ಗೀತೆಯನ್ನು ಬ್ರಿಟೀಷ್ ಅಧಿಕಾರಿಯನ್ನು ಸ್ವಾಗತಿಸಲು ಬರೆಯಲಾಗಿತ್ತು ಎಂಬ ಬಿ.ಜೆ.ಪಿ. ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ಅಸಂಬದ್ಧ. ಇದು ರಾಷ್ಟ್ರ ವಿರೋಧಿ ಹೇಳಿಕೆಯಾಗಿದೆ. ಇವರನ್ನು ಕೂಡಲೇ ಬಂಧಿಸಿ, ಜೈಲಿಗೆ ಹಾಕಬೇಕೆಂದು ಸರ್ಕಾರಕ್ಕೆ ಸಮಿತಿಯು ಒತ್ತಾಯಿಸುತ್ತಾ ಆರ್‌.ಎಸ್‌.ಎಸ್‌.ನ ಕಾನೂನು ಬಾಹಿರ ನಡೆಯನ್ನು ವಿರೋಧಿಸಿ ಮತ್ತು ಪ್ರಜಾಪ್ರಭುತ್ವ-ಸಂವಿಧಾನದ ಅನುಷ್ಠಾನಕರಾದ ಪ್ರಿಯಾಂಕ್ ಖರ್ಗೆಯವರನ್ನು ಬೆಂಬಲಿಸಿ ಈ ದಿವಸ ವಿಜಯನಗರ ಜಿಲ್ಲೆಯಲ್ಲಿ ಪ್ರತಿಭಟನಾ ಧರಣಿಯನ್ನು ಮಾಡುವುದರ ಮುಖಾಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುತ್ತಿದ್ದೇವೆ.  ಈ ಸಂದರ್ಭದಲ್ಲಿ ಮರಿಸ್ವಾಮಿ, ಸೋಮಶೇಖರ್‌.ಹೆಚ್, ನಾಗಪ್ಪ.ಹೆಚ್, ಹುಲುಗಪ್ಪ, ಕೊಡಾಲ್ ಶೇಖರ್, ಸಂತೋಶ್ ಕುಮಾರ್, ಹಾರುವನಹಳ್ಳಿ ಲಕ್ಷ್ಮಣ, ಜಗನ್ನಾಥ, ಉದಯ ಕುಮಾರ್‌.ಹೆಚ್‌.ಆರ್, ಇನ್ನು ಮುಂತಾದವರು ಉಪಸ್ಥಿತರಿದ್ದರು.