ಉಪ ಚುನಾವಣೆ ಕಾಂಗ್ರೆಸ್ ಗೆಲ್ಲಲು ಕೊಪ್ಪಳದಲ್ಲಿ ಆನ್ಸಾರಿ ಹೇಳಿಕೆ ಎಫೆಕ್ಟ್‌

Ansari's statement effect in Koppal to win Congress by-election

ಉಪ ಚುನಾವಣೆ ಕಾಂಗ್ರೆಸ್ ಗೆಲ್ಲಲು ಕೊಪ್ಪಳದಲ್ಲಿ ಆನ್ಸಾರಿ ಹೇಳಿಕೆ ಎಫೆಕ್ಟ್‌

ಕೊಪ್ಪಳ 05: ರಾಜ್ಯದ ಪಕ್ಕದ ಬಳ್ಳಾರಿ ಜಿಲ್ಲೆಯ ಸಂಡೂರು, ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ದೂರದ ಮಂಡ್ಯ ಜಿಲ್ಲೆಯ ಚೆನ್ನಪಟ್ಟಣ ಈ ಮೂರು ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆ ಕಾಂಗ್ರೆಸ್ ಗೆಲ್ಲಲು ಕೊಪ್ಪಳದ ಕಾರ್ಯಕ್ರಮಯೊಂದರಲ್ಲಿ ಮಾಜಿ ಸಚಿವ  ಇಕ್ಬಾಲ್ ಅನ್ಸಾರಿ ಹೇಳಿಕೆಯ ಎಫೆಕ್ಟ್‌ನಿಂದ ಗೆಲುವಾಗಿದೆ ಎಂದು ಕೊಪ್ಪಳದ ಯುವ ನಾಯಕ ಉದ್ಯಮಿ ಇಬ್ರಾಹಿಮಪಟೇಲ್ ಹೇಳಿದ್ದಾರೆ. 

ಇತ್ತೀಚಿಗೆ ಜರುಗಿ ಮೂರೂ ಕ್ಷೇತ್ರದಲ್ಲಿ ಆಶ್ಚರ್ಯಕರ ಫಲಿತಾಂಶ ಪ್ರಕಟಗೊಂಡು ಮೂರು ಕಡೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ವಿಶೇಷ ಮತ್ತು ಗಮನಾಹ9ವಾಗಿದೆ, ಮಾಧ್ಯಮಗಳ ಸಮೀಕ್ಷೆ ಕೂಡ ಉಲ್ಟಾ ಗೊಂಡಿದೆ ಕೇವಲ ಸಂಡೂರು ಮಾತ್ರ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಲಾಗಿತ್ತು ಸಂಡೂರು ಹೊರತುಪಡಿಸಿದರೆ ಶಿಗ್ಗಾವಿ ಮತ್ತು ಚೆನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ವಿಶೇಷ ಎಂದು ಹೇಳಬಹುದು ಮುಸ್ಲಿಂ ಮತದಾರರು ಶೇಕಡ ನೂರಕ್ಕೆ ನೂರರಷ್ಟು ಒಗ್ಗಟ್ಟು ಪ್ರದರ್ಶನ ಮಾಡಿ ಈ ಬಾರಿ ಹೆಚ್ಚು ಮತ ಚಲಾವಣೆ ಮಾಡಿ ಕಾಂಗ್ರೆಸ್ ಗೆಲ್ಲಲು ಸಹಕರಿಸಿದ್ದಾರೆ.  

ಇತರ ಹಿಂದುಳಿದ ಒಟ್ಟಾರೆ ಅಹಿಂದ ವರ್ಗದ ಮತ ಕಾಂಗ್ರೆಸ್ ಗೆ ಹೆಚ್ಚು ಲಭಿಸಿದೆ, ಇತ್ತೀಚಿಗೆ ಕೊಪ್ಪಳದ ಖಾಸಗಿ ಕಾರ್ಯಕ್ರಮ ದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವರೆಗೆ ನಮ್ಮ ಸಮಾಜಕ್ಕೆ ಏನಾದರೂ ಕೆಲಸ ಮಾಡಿಕೊಳ್ಳಬೇಕು ನಂತರ ಬೇರೆಯವರಿಂದ ಅದು ಅಷ್ಟು ಸುಲಭ ವಲ್ಲ ಎಂದು ಹೇಳಿ ಸಿದ್ದರಾಮಯ್ಯನವರ ನಂತರ ಮುಸ್ಲಿಮರಿಗೆ ಚಂಬು ಎಂದು ಹೇಳಿದ್ದರು ಅದನ್ನು ಸಹ ಪರಿಗಣಿಸಿದ ಮುಸ್ಲಿಂ ಸಮಾಜ ಜಾಗೃತಗೊಂಡು ಮತದಾನಕ್ಕೆ ಗೈರ್ ಹಾಜರಾಗದೆ ಕಡ್ಡಾಯ ಮತದಾನ ಮಾಡಿ ಅತಿ ಹೆಚ್ಚು ಮತ ಚಲಾವಣೆ ಮಾಡಿ ಕಾಂಗ್ರೆಸ್ ಗೆಲ್ಲಲಿಕ್ಕೆ ಕಾರ್ಣಿಕರ್ತರಾಗಿದ್ದಾರೆ. ಹೇಗಾದರೂ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು ಯಾವುದೇ ಕಾರಣಕ್ಕೆ ಅವರು ಅಧಿಕಾರದಿಂದ ಕೆಳಗಿಳಿಯಬಾರದು ಅಧಿಕಾರದ ಅವಧಿ ಪೂರ್ಣಗೊಳಿಸಬೇಕು ಎಂದು ಮುಸ್ಲಿಮರು ಒಗ್ಗಟ್ಟು ಪ್ರದರ್ಶನ ಮಾಡಿ ಅತಿ ಹೆಚ್ಚು ಮತದಾನ ಮಾಡಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಕ್ಬಾಲ್ ಅನ್ಸಾರಿ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸ್ವಾಗಿತ್ತು ಅವರು ಹೇಳಿರುವುದು ನೂರಕ್ಕೆ ನೂರು ಸತ್ಯವಾಗಿಲ್ಲವಾದರೂ ಅಥವಾ ಹೇಳಿರುವ ವೇದಿಕೆ ಸಮಂಜಸವಾಗಿದ್ದಿಲ್ಲವಾದರೂ ಅವರು ಸತ್ಯಕ್ಕೆ ಸಮೀಪವಾಗಿ ಹೇಳಿಕೆ ನೀಡಿದ್ದಾರೆ ಅವರ ಹೇಳಿರೋದು ಅಷ್ಟು ಸುಲಭವಾಗಿ ನಿರಾಕರಿಸಲು ಸಾಧ್ಯವಿಲ್ಲ. ಅವರ ಹೇಳಿಕೆಯಲ್ಲಿ ಸತ್ಯದ ಪ್ರಮಾಣ ಹೆಚ್ಚಾಗಿದೆ ಇದರಿಂದ ಜಾಗೃತಗೊಂಡ ಮುಸ್ಲಿಮರು ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೋಮುವಾದಿ ಪಕ್ಷ ಮತ್ತು ಘಟಾನುಘಟಿಗಳ ಮಕ್ಕಳಿಗೆ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ ಇದು ಇತಿಹಾಸವೇ ಸರಿ ಎಂದು ಕೊಪ್ಪಳದ ಯುವ ನಾಯಕ ಉದ್ಯಮಿ ಇಬ್ರಾಹಿಮ ಪಟೇಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.