ಅಮ್ಮಿನಬಾವಿ ಬಾಲಕಿಯರ ಪ್ರಾಥಮಿಕ ಶಾಲೆ ಚಾಂಪಿಯನ್
Amminabavi Girls' Primary School is the champion
ಅಮ್ಮಿನಬಾವಿ ಬಾಲಕಿಯರ ಪ್ರಾಥಮಿಕ ಶಾಲೆ ಚಾಂಪಿಯನ್
ಧಾರವಾಡ, 08 : ಸಮೀಪದ ಚಂದನಮಟ್ಟಿ ಗ್ರಾಮದಲ್ಲಿ ಜರುಗಿದ ಅಮ್ಮಿನಬಾವಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ವಾರ್ಷಿಕ ಕ್ರೀಡಾಕೂಟದಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಹಿರಿಯ ಪ್ರಾಥಮಿಕ ಬಾಲಕಿಯರ ಕನ್ನಡ ಸರಕಾರಿ ಪಾಠಶಾಲೆ ಚಾಂಪಿಯನ್ ಆಗಿದ್ದು, ಇದೇ ಶಾಲೆಯ ಸೌಮ್ಯ ಹಡಪದಗೆ ಕೂಟದ ವೈಯಕ್ತಿಕ ವೀರಾಗ್ರಣಿ ಪಟ್ಟ ಲಭಿಸಿದೆ.
ಕನಕೂರ ಗ್ರಾ.ಪಂ. ಅಧ್ಯಕ್ಷ ರಾಜು ಹುಡೇದ, ಸದಸ್ಯ ಬೀರ್ಪ ಕೊಪ್ಪದ, ಎಸ್‌ಡಿಎಂಸಿ ಅಧ್ಯಕ್ಷ ಶರತ ಸಾಂಗ್ಲೀಕರ್, ಫಕ್ಕೀರ್ಪ ಬೆಂಡಿಗೇರಿ, ರಮೇಶ ತಪೋಜಿ, ಬಸವರಾಜ ಮಾದರ, ಎಲ್ಲಪ್ಪ ಲಗಮನ್ನವರ, ಮುಖ್ಯಾಧ್ಯಾಪಕಿ ವಿಜಯಲಕ್ಷ್ಮಿ ಸವದತ್ತಿ, ಅಮ್ಮಿನಬಾವಿ ಬಾಲಕಿಯರ ಶಾಲೆ ದೈಹಿಕ ಶಿಕ್ಷಕ ಕೃಷ್ಣಾ ಬೊಂಗಾಳೆ, ಅನುಪಮ ಹಳಕೊಪ್ಪ, ಕಲಾವತಿ ಪಾಗಾದ ಇದ್ದರು. ಅಮ್ಮಿನಬಾವಿ ಬಾಲಕಿಯರ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಅಂಗಡಿ, ಮುಖ್ಯಾಧ್ಯಾಪಕ ಗೂಡುಸಾಬ ನದಾಫ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಚಾಂಪಿಯನ್ ಆಗಿರುವ ಅಮ್ಮಿನಬಾವಿ ಬಾಲಕಿಯರ ಶಾಲೆ ಮಕ್ಕಳ ಫಲಿತಾಂಶಗಳು : 100 ಮೀ ಓಟ : ಸಹನಾ ಗುಡಿ (ಪ್ರಥಮ), ದೀಪಾ ಕವಲಗೇರಿ (ದ್ವಿತೀಯ), 200 ಮೀ ಓಟ : ಸಹನಾ ಗುಡಿ (ಪ್ರಥಮ), ದೀಪಾ ಕವಲಗೇರಿ(ದ್ವಿತೀಯ), 400 ಮೀ ಓಟ : ಸುಶ್ಮಿತಾ ವಕ್ಕುಂದ (ಪ್ರಥಮ), ಮಹೇಶ್ವರಿ ದೇವರಮನಿ (ತೃತೀಯ), 600ಮೀ ಓಟ : ಸೌಮ್ಯ ಹಡಪದ (ಪ್ರಥಮ), ಅಕ್ಷತಾ ಸುಳ್ಳದ (ದ್ವಿತೀಯ), 80 ಮೀ ಅಡತಡೆ ಓಟ : ಸೌಮ್ಯ ಹಡಪದ (ಪ್ರಥಮ), ಸುಶ್ಮಿತಾ ವಕ್ಕುಂದ (ದ್ವಿತೀಯ), ಉದ್ದ ಜಿಗಿತ : ದೀಪಾ ಕವಲಗೇರಿ (ಪ್ರಥಮ), ಸುಶ್ಮಿತಾ ವಕ್ಕುಂದ (ದ್ವಿತೀಯ), ಎತ್ತರ ಜಿಗಿತ : ಮಹೇಶ್ವರಿ ದೇವರಮನಿ(ದ್ವಿತೀಯ), ಸಹನಾ ಗುಡಿ (ತೃತೀಯ), ಗುಂಡು ಎಸೆತ : ನಾಜಿಯಾ ಚಂದನಮಟ್ಟಿ (ಪ್ರಥಮ), ಸುಕನ್ಯಾ ಮೊರಬದ (ದ್ವಿತೀಯ), ಚಕ್ರ ಎಸೆತ : ಸೌಮ್ಯ ಹಡಪದ (ಪ್ರಥಮ), ನಾಜಿಯಾ ಚಂದನಮಟ್ಟಿ (ದ್ವಿತೀಯ), 4ಥ100 ಮೀ ರಿಲೆ : ಸಹನಾ ಗುಡಿ ಗುಂಪು (ಪ್ರಥಮ), ಕಬಡ್ಡಿ: ಪ್ರಥಮ, ಥ್ರೋಬಾಲ್ : ಪ್ರಥಮ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 