ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಲಾಗಿದ್ದು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ

ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಲಾಗಿದ್ದು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ Ambigara Chowdary's statue was vandalized and appropriate action will be taken against the miscrean

ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಲಾಗಿದ್ದು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ 

ಶಿಗ್ಗಾವಿ 15 : ಚಿತ್ತಾಪುರ ತಾಲೂಕು ಮುತ್ತಗಿ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಲಾಗಿದ್ದು ಕಿಡಿಗೇಡಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಜರಗಿಸದಿರುವುದನ್ನು ಹಾವೇರಿ ಜಿಲ್ಲಾ ಅಂಬಿಗ (ಬೆಸ್ತ) ಸಮಾಜ ಖಂಡಿಸುತ್ತದೆ ಎಂದು ಹಾವೇರಿ ಜಿಲ್ಲಾ ಬೆಸ್ತ ಸಮಾಜದ ಅಧ್ಯಕ್ಷ ಪರಸುರಾಮ ಸೊನ್ನದ ಹೇಳಿದರು. ಹಾವೇರಿಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ​‍್ಿಸಿ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಾತನಾಡಿ, ಬಸವಣ್ಣನವರ ಸಮಕಾಲೀನರಾದ  ನಿಜ ಶರಣ ಅಂಬಿಗ ಚೌಡಯ್ಯನವರು ತಮ್ಮ ವಚನಗಳ ಮೂಲಕ ಈಡಿ ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತ 12ನೇ ಶತರಮಾನದಲ್ಲಿ ಶರಣರಿಂದ ನಿಜಶರಣ ಎಂಬ ಬಿರುದನ್ನು ಪಡೆದವರಾಗಿದ್ದು, ನಮ್ಮ ಸಮಾಜ ಬಾಂಧವರೆ ಹೆಚ್ಚಿರುವ ಚಿತ್ತಾಪುರ ತಾಲೂಕಿನಲ್ಲಿ ಮಹಾನ ದಾರ್ಶನಿಕನ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವುದು ಹೇಯ ಕೃತ್ಯವಾಗಿದೆ. ಇಂತ ಕಿಡಗೇಡಿಗಳ ವಿರುದ್ದ ಅಲ್ಲಿನ ಜಿಲ್ಲಾಡಳಿತ ಇಲ್ಲಿಯವರೆಗೂ ಯಾವುದೇ ಸೂಕ್ತ ಕ್ರಮ ಜರಗಿಸದಿರುವುದು ವರದಿಯಾಗದ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸಮಾಜಬಾಂಧವರು ಪ್ರತಿಭಟನೆ ಮಾಡುವ ಮೂಲಕ, ಜಿಲ್ಲಾಧಿಕರಾಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ​‍್ಿಸುವ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಭೋವಿ, ಕೊಟ್ರೇಶ ಕುದರಿಹಾಳ, ಶಂಕರ ಸುತಾರ, ಮಲ್ಲಪ್ಪ ನಿಂಬಕ್ಕನವರ, ಹೊನ್ನಪ್ಪ ತಿಮ್ಮನಹಳ್ಳಿ, ಕರಬಸಪ್ಪ ಹಳಬೂರ, ಶೇಖಪ್ಪ ಬಾರಕೇರ, ಮಾಲತೇಶ ಚಿಕ್ಕಣ್ಣನವರ, ಕೊಟ್ರೇಶ ಕೋಣತಂಬಗಿ, ರಮೇಶ ತಿಮ್ಮನಹಳ್ಳಿ, ಮಂಜು ಹುಬ್ಬಳ್ಳಿ, ಕರಬಸಪ್ಪ ನಿಟ್ಟೂರ, ಕೊಟ್ರೇಶ ಹಡಪದ, ಪರಶುರಾಮ ಕೆಂಗಾಪೂರ ಇತರರಿದ್ದರು.