ಅಂಬೇಡ್ಕರ್ ಓಣಿಯ ಮನೆ ಕಳ್ಳತನ: ಆರೋಪಿ ಬಂಧನ, 2.44 ಲಕ್ಷ ರೂ. ಚಿನ್ನಾಭರಣ ವಶ!
Ambedkar Oni's house burglary: Accused arrested, Rs 2.44 lakh worth of gold jewellery seized!
ಮುಂಡಗೋಡ 31: ಹೊರಬೀಡು ದಿನದಂದು ಮುಂಡಗೋಡ ಪಟ್ಟಣದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಭೇದಿಸಿ, ಅಂತರ ಜಿಲ್ಲಾ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದ ಹೊನ್ನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ ಬಸವಂತಪ್ಪ ನಾಯಕ (34) ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜನವರಿ 27 ರಂದು ಮಂಗಳವಾರ, ಹೊರಬೀಡು ದಿನದಂದು ಮುಂಡಗೋಡ ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿ ವಾಸವಿರುವ ಬಸವರಾಜ ಮಲ್ಲಪ್ಪ ಚಲವಾದಿ ಎಂಬುವವರ ಮನೆಯ ಮುಂದಿನ ಬಾಗಿಲನ್ನು ಗಟ್ಟಿಯಾದ ವಸ್ತುವಿನಿಂದ ಒಡೆದು ಆರೋಪಿ ಒಳನುಗ್ಗಿದ್ದ. ಬಳಿಕ ಮನೆಯ ರೂಮಿನಲ್ಲಿ ಇರಿಸಿದ್ದ ಟ್ರಜರಿಯ ಬಾಗಿಲನ್ನು ಮುರಿದು ಅದರಲ್ಲಿ ಇಡಲಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದನು. ಪೊಲೀಸರು ಆರೋಪಿಯಿಂದ 96,000 ಮೌಲ್ಯದ 6 ಗ್ರಾಂ ಬಂಗಾರದ ಗುಂಡಿನ ಸರ,
64,000 ಮೌಲ್ಯದ 4 ಗ್ರಾಂ ಬಂಗಾರದ ಎರ್ ರಿಂಗ್, 16,000 ಮೌಲ್ಯದ 1 ಗ್ರಾಂ ತೂಕದ ಮೂರು ಗುಂಡುಗಳಿರುವ ಲಕ್ಷ್ಮೀ ಲಾಕೆಟ್, 48,000 ಮೌಲ್ಯದ 3 ಗ್ರಾಂ ಬಂಗಾರದ ಉಂಗುರ, 16,000 ಮೌಲ್ಯದ 1 ಗ್ರಾಂ ಬಂಗಾರದ ಸೈಡ್ ರಿಂಗ್ ಮತ್ತು 4,000 ಮೌಲ್ಯದ ಬೆಳ್ಳಿಯ ಚೈನ್ ಸೇರಿದಂತೆ ಒಟ್ಟಾರೆ 2,44,000 ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೋಲಿಸ್ ಅಧೀಕ್ಷಕರು ದೀಪನ್ ಎಮ್.ಎನ್ ಐ.ಪಿ.ಎಸ್ , ಕೃಷ್ಣಮೂರ್ತಿ ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ, ಶಿರಸಿ ಡಿವೈಎಸ್ಪಿ, ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ ಚಿಂಚಲಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಮತ್ತು ಕಲ್ಲಪ್ಪ ಹೊನ್ನಿಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 