ಅಂಬೇಡ್ಕರ್ ಚಿಂತನೆಗಳು ನಾಡಿಗೆ ಬೆಳಕು : ಕುಮಾರ ಸಮತಳ
Ambedkar's thoughts are a light for the nation: Kumar Samatala
ಲೋಕದರ್ಶನ ವರದಿ
ಕಂಪ್ಲಿ 07: ಸಮಾಜದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸರ್ಕಾರದ ಸೌಲಭ್ಯಗಳು ಅಗತ್ಯವಾಗಿವೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸಮತಳ ಹೇಳಿದರು. ಪಟ್ಟಣದ ಅತಿಥಿ ಗೃಹದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಕಂಪ್ಲಿ ತಾಲೂಕು ಮಟ್ಟದ ಕಾರ್ಯಾಗಾರ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿ, ನೊಂದ ಜನಕ್ಕೆ ನ್ಯಾಯ ಸಿಗಬೇಕು. ಅಸಮಾನತೆ ತೊಲಗಬೇಕು. ಸಮಾನತೆ ಪ್ರತಿಯೊಂದು ಹಂತದಲ್ಲಿ ದೊರಕಬೇಕು. ಸಾಮಾಜಿಕ ಬದಲಾವಣೆಯ ಆಶಯದೊಂದಿಗೆ ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆಯು ಯಾವುದೇ ಪ್ರಚಾರವಿಲ್ಲದೆ ಜನಪರ ಕೆಲಸ ಮಾಡುತ್ತಿದೆ.
ಆಧುನಿಕ ಸಂಧರ್ಭದಲ್ಲೂ ನಾವು ಮೌಢ್ಯ ಆಚರಣೆಗೆ ಬೆನ್ನು ಹತ್ತಿ ಅನೇಕ ಸಮಸ್ಯೆಗಳನ್ನು ಸಮಾಜ ಎದುರಿಸುತ್ತಿರುವವುದನ್ನ ಕಾಣಬಹುದು. ವೈಜ್ಞಾನಿಕ ಮತ್ತು ಅಂಬೇಡ್ಕರ್ ಚಿಂತನೆಗಳು ನಾಡಿಗೆ ಬೆಳಕಾಗಿವೆ ಎಂದರು. ನಂತರ ಮಾನವ ಬಂಧುತ್ವ ವೇದಿಕೆಯ ತಾಲೂಕು ಅಧ್ಯಕ್ಷ ಬಿ.ನಬೀ ಸಾಬ್ ಬೆಳಗೋಡ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವೀಯತೆಯೇ ನಮ್ಮ ಧರ್ಮ, ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂಬ ಉದ್ದೇಶದೊಂದಿಗೆ ಜನಜಾಗೃತಿ ಮೂಡಿಸುವ ಜೊತೆಗೆ ಜನಪರ ಕೆಲಸ ಮಾಡಲಾಗುತ್ತಿದೆ. ಮೌಢ್ಯಗಳನ್ನು ತೊಲಗಿಸುವ ಜೊತೆಗೆ ನೊಂದ ಮಾನವ ಜನಾಂಗಕ್ಕೆ ನ್ಯಾಯ ದೊರಕಬೇಕೆಂಬ ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಸ್ಥಾಪನೆಗೊಂಡಿದೆ.
ಯುವ ಜನತೆಯೂ ಇಂತಹ ವೇದಿಕೆಗೆ ಬೆಂಬಲ ನೀಡಬೇಕು. ವೇದಿಕೆಯ ಧ್ಯೇಯೋದ್ದೇಶಗಳೊಂದಿಗೆ ಜನರಿಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ವಿಭಾಗೀಯ ಸಂಚಾಲಕ ಇರ್ಫಾನ್, ಜಿಲ್ಲಾ ಸಂಚಾಲಕ ವಿಜಯಕುಮಾರ, ಮುಖಂಡರಾದ ಎಂ.ಸುಧೀರ್, ನಾಯಕರ ವೆಂಕೋಬ, ಲಕ್ಷ್ಮಣ, ಹೆಚ್.ಗುಂಡಪ್ಪ, ಹೆಚ್.ಮರಿಯಪ್ಪ, ವಸಂತರಾಜ ಕಹಳೆ, ಆರ್.ಪಿ.ಶಶಿಕುಮಾರ, ಹೆಚ್.ಕುಮಾರ, ಸಣಾಪುರ ಮರಿಸ್ವಾಮಿ, ಕೊಟ್ಟಾಲ್ ವಿರೇಶ, ವಾಸುಕುಮಾರ, ರಾಜಾಭಕ್ಷಿ, ಯಲ್ಲಪ್ಪ, ಅಕ್ಕಿ ಜಿಲಾನ್, ಎಸ್.ರಾಮಪ್ಪ, ರವಿ ಮಣ್ಣೂರು ಸೇರಿದಂತೆ ಸಂಘ-ಸಂಸ್ಥೆಯವರು, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 