ಶಾಂತಿಯ ದೂತ ದಲಾಯಿ ಲಾಮಾರ ಭೇಟಿ! ಟಿಬೆಟಿಯನ್ನರು ಭಾರತೀಯರು ಒಂದೇ ತಾಯಿ ಮಕ್ಕಳಂತೆ : ಮಧು ಬಂಗಾರ್ಪ
Ambassador of Peace Dalai Lama's visit! Tibetans and Indians are like children of the same mother:
ಮುಂಡಗೋಡ 28 : ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹಾಗೂ ಟಿಬೆಟಿಯನ್ ಸಮುದಾಯದ ಆರಾಧ್ಯ ದೈವ ಪೂಜ್ಯ ದಲಾಯಿ ಲಾಮಾರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರ್ಪ ಅವರು, “ಟಿಬೆಟಿಯನ್ನರು ಹಾಗೂ ಭಾರತೀಯರು ಒಂದೇ ತಾಯಿ ಮಕ್ಕಳಂತೆ ಸೌಹಾರ್ದತೆಯಿಂದ ಜೀವಿಸುತ್ತಿದ್ದೇವೆ” ಎಂದು ಹೇಳಿದರು. ಶನಿವಾರ ಮುಂಡಗೋಡ ತಾಲೂಕಿನ ಟಿಬೆಟ್ ಕ್ಯಾಂಪ್ಗೆ ಆಗಮಿಸಿದ ಸಚಿವರು ದಲಾಯಿ ಲಾಮಾರನ್ನು ಭೇಟಿ ಮಾಡಿ ಸನ್ಮಾನಿಸಿ ಗೌರವ ಸಲ್ಲಿಸಿದರು. ಟಿಬೆಟಿಯನ್ ಸಮುದಾಯದ ಶಾಲೆಗಳ ಕೆಲವು ಸಮಸ್ಯೆಗಳನ್ನು ಈ ಹಿಂದೆ ಸರಿಪಡಿಸಿದ್ದಾಗಿ ತಿಳಿಸಿದ ಅವರು, ಇದೀಗ ಮತ್ತೊಂದು ಶಾಲೆಯ ಸಮಸ್ಯೆಯ ಕುರಿತು ಚರ್ಚಿಸಲು ಬಂದಿರುವುದಾಗಿ ಹೇಳಿದರು.
ಅನಾರೋಗ್ಯದ ನಡುವೆಯೂ ದಲಾಯಿ ಲಾಮಾ ಅವರು ಆತ್ಮೀಯವಾಗಿ ಮಾತನಾಡಿದ್ದು ಸಂತೋಷ ತಂದಿದೆ. ನಾನು ಶಿಕ್ಷಣ ಸಚಿವನಾಗಿ ಸಮುದಾಯಕ್ಕಾಗಿ ಮಾಡಿರುವ ಕಾರ್ಯಗಳಿಗೆ ದಲಾಯಿ ಲಾಮಾ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದರು. ಅಕ್ಷಯಪಾತ್ರೆ ಯೋಜನೆಯನ್ನು ಸರ್ಕಾರಿ ಶಾಲೆಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದ ಸಚಿವರು, ಆರ್ಟಿಇ ಕಾಯ್ದೆಯನ್ನು 10ನೇ ತರಗತಿವರೆಗೆ ವಿಸ್ತರಿಸುವ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಮ್.ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ವಾಯ್ ಬಿ ಭುಜಂಗಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಶಾರದಾ ರಾಠೋಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಲ್ಮಾ ಶೇರಖಾನೆ, ಮೊಹ್ಮದಗೌಸ ಮಕಾನದಾರ, ರಜಾಖಾನ್ ಪಠಾಣ್, ಧರ್ಮರಾಜ ನಡಿಗೇರ, ಕೆಂಜೋಡಿ ಗಲಿಬಿ, ಹಜರತಲಿ ಅತ್ತಿವೇರಿ ಹಾಗೂ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 