ರೈತರ ಜೀವನಕ್ಕೆ ಕೃಷಿ ಪತ್ತಿನ ಸಂಘಗಳು ಸಹಕಾರಿ -ಶ್ರೀಕಾಂತ
ಶಿಗ್ಗಾವಿ 16 : ಕೃಷಿ ಪತ್ತಿನ ಸಂಘಗಳು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನ ನೀಡುವುದರ ಜೊತೆಗೆ ಉತ್ತಮ ಗುಣಮಟ್ಟದ ಬೀಜಗಳು, ರಾಸಾಯನಿಕಗಳು ಮತ್ತು ರೋಗ ನಿರೋಧಕ ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ನೀಡಬೇಕು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲ್ಲೂಕಿನ ಹೀರೆಬೆಂಡಿಗೇರಿ ಗ್ರಾಮದಲ್ಲಿ ನಡೆದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಗಮೇಶ ಕಂಬಾಳಿಮಠ ಉಪಾಧ್ಯಕ್ಷರಾಗಿ ಈಶ್ವರ ಹರಕುಣಿ ಇವರಿಗೆ ಸನ್ಮಾನಿಸಿ ಮಾತನಾಡಿದ ಅವರು ರೈತರಿಗೆ ಕೃಷಿ ಉಪಕರಣಗಳನ್ನು ಕಂತುಗಳ ರೂಪದಲ್ಲಿ ಹಣ ಪಾವತಿಸಲು ಅವಕಾಶಗಳನ್ನು ಮಾಡಿಕೊಟ್ಟು ಮತ್ತು ಪಡಿತರಿಗೆ ದಿನನಿತ್ಯದ ದಿನಸಿಗಳನ್ನು ದಿನ ಬಳಕೆ ವಸ್ತುಗಳನ್ನು ನೀಡಿ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಸಹಾಯಕಾರಿಯಾಗಿ ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸಬೇಕು ಎಂದರು. ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ಹಿರೇಮಠ,ಮಾಜಿ ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ರಾಘವೇಂದ್ರ ದೇಶಪಾಂಡೆ, ಬಸವರಾಜ ಮಿರ್ಜಿಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷ ರಮೇಶ ಸಾತಣ್ಣವರವೀರನಗೌಡ ಪಾಟೀಲಶ್ರೀಕಾಂತ ಸಾತಣ್ಣವರ,,ನೀಲಕಂಠಗೌಡ್ರ ನಡುವಿನಮನಿನಾಗರಾಜ ನಡಗೇರಿ ಹಾಗೂ ಗ್ರಾಮದ ಹಿರಿಯರು ಯುವಕರು ಉಪಸ್ಥಿದರಿದ್ದರು.