ಸಾಧನೆ ಯಾರೊಬ್ಬರ ಸ್ವತ್ತಲ್ಲ ಅದು ಸಾಧಕನ ಸ್ವತ್ತು ಮಾತ್ರ.- ಜಗದೀಶ್ ಮಳೆಮಠ
Achievement is not anyone's property, it is only the property of the achiever.- Jagadish Malemath
ರಾಣೇಬೆನ್ನೂರು 20: ಸಾಧನೆ ಯಾರೊಬ್ಬರ ಸ್ವತ್ತಲ್ಲ ಅದು ಸಾಧಕನ ಸ್ವತ್ತು ಮಾತ್ರ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವುದು ಇಂದಿನ ವಿದ್ಯಾರ್ಥಿಗಳಲ್ಲಿ ಹಬ್ಬದ ರೂಪದಲ್ಲಿ ಭಾವನೆಗಳು ಮೂಡಬೇಕು ಅದು ನಿಜವಾದ ಪರೀಕ್ಷೆ ಆಗುತ್ತದೆ ಎಂದು ಆಂಗ್ಲಭಾಷಾ ಶಿಕ್ಷಕ ಜಗದೀಶ್ ಮಳೆಮಠ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ಅವರು ಇಲ್ಲಿನ ಮುಂಬೈ ಕರ್ನಾಟಕ ವಿಜ್ಞಾನ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ, ಆರ್ಯಭಟ ಪ್ರತಿಭಾ ಪರೀಕ್ಷೆ - 2026 ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಹೊಸ ಹೊಸ ಆವಿಷ್ಕಾರಗಳು ಹೇರಳವಾಗಿ ದೊರೆಯುವುದರಿಂದ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗುತ್ತಲಿದೆ. ನಿತ್ಯ, ನಿರಂತರ ಜ್ಞಾನ ಸಂಪತ್ತು ಹೊಂದಬೇಕಾದರೆ ಇಂದಿನ ವಿದ್ಯಾರ್ಥಿಗಳು ಪರಸ್ಪರ ಚರ್ಚೆ ವಿಚರ್ಚೆ ಮತ್ತು ಸಮಾಲೋಚನೆ ಹಾಗೂ ವಿನಿಮಯ ಇವುಗಳು ಅಳವಡಿಸಿಕೊಂಡಾಗ ಮಾತ್ರ ಅದ್ಭುತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಎಂಕೆಇ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ. ಆರ್. ಎಸ್. ಎಲಿ ಅವರು ಮಾತನಾಡಿ, ಶಿಕ್ಷಣ ಸೇವೆ ಭಗವಂತನ ಸೇವೆ.
ಸೇವೆಯೇ ಪ್ರಧಾನವಾಗಿರಿಸಿಕೊಂಡು ಈ ಶಿಕ್ಷಣ ಸಂಸ್ಥೆಯನ್ನು, ಹಿರಿಯರ ಮಾರ್ಗದರ್ಶನದಲ್ಲಿ ಆರಂಭಿಸಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಗುರಿಯೊಂದಿಗೆ, ಸಾಧನೆಯ ಹಾದಿಯಲ್ಲಿ ಸಾಗಿದ್ದೇವೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ಆರ್ಯಭಟ ಪ್ರತಿಭಾ ಪರೀಕ್ಷೆ ನಡೆದು ಫಲಿತಾಂಶವನ್ನು ಘೋಷಿಸಿದ, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಜಿಲಾನಿ ಹೊಸಕಟ್ಟಿ ಅವರು ವಿದ್ಯಾರ್ಥಿಗಳ ಶುಭ ಹಾರೈಸಿದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಡಾ. ಸಂತೋಷ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಸುಮಾ ಉದಯ ನಿರೂಪಿಸಿ, ಡಾ. ಜಯಾ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 