ವಿಬಿಜಿ ರಾಮ್‌ಜಿ ವಿರೋಧಿಸಿ ಎಐಕೆಕೆಎಂಎಸ್ ರೈತ ಸಂಘಟನೆ: ಜಿಲ್ಲಾಧಿಕಾರಿಗೆ ಮನವಿ

ವಿಬಿಜಿ ರಾಮ್‌ಜಿ ವಿರೋಧಿಸಿ ಎಐಕೆಕೆಎಂಎಸ್ ರೈತ ಸಂಘಟನೆ: ಜಿಲ್ಲಾಧಿಕಾರಿಗೆ ಮನವಿ AIKKMS farmers' organization opposes VBG Ramji: Appeal to the District Collector

ಬಳ್ಳಾರಿ 28: ನಗರದಲ್ಲಿ ’ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ- 2025 ಆರ್ ಎ ಎಮ್ ಜಿ) ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಎಐಕೆಕೆಎಂಎಸ್ ರೈತ ಸಂಘಟನೆ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿ,  

ಜಿಲ್ಲಾಧಿಕಾರಿಗಳ ಮೂಲಕ ಪ್ರಾಧಾನಿಯವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ  ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿ ಪಡಿಸುವ ಉದ್ದೇಶದಿಂದ ತಂದಿದ್ದ ಎಂಜಿ ನರೇಗಾ ಕಾಯ್ದೆಯ ಬದಲಿಗೆ ’ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ- 2025 ಅನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಹೀನ ಪ್ರಯತ್ನವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಗೋವಿಂದ, ರಾಜ ಹಾಗೂ ಸಂಘದ ಸದಸ್ಯರಾದ ಕಾಸಿಂ ಸಾಬ್, ಮಲ್ಲೇಶ್, ಹರೀಶ್, ಬಸವನ ಗೌಡ, ಹನುಮಂತ, ಸೇರಿದಂತೆ ಇತರರು ಉಪಸ್ಥಿತರಿದ್ದರು.