ಮಳ್ಳಿಕೇರಿ ಶಾಲೆಯನ್ನು ಹ್ಯಾಟಿ ಕೆಪಿಎಸ್ ಮಾಗ್ನೆಟ್ ಶಾಲೆಗೆ ಸೇರಿಸುವುದನ್ನು ವಿರೋಧಿಸಿ ಎಐಡಿಎಸ್‌ಓ ಪ್ರತಿಭಟನೆ

ಮಳ್ಳಿಕೇರಿ ಶಾಲೆಯನ್ನು ಹ್ಯಾಟಿ ಕೆಪಿಎಸ್ ಮಾಗ್ನೆಟ್ ಶಾಲೆಗೆ ಸೇರಿಸುವುದನ್ನು ವಿರೋಧಿಸಿ ಎಐಡಿಎಸ್‌ಓ ಪ್ರತಿಭಟನೆ AIDSSO protests against Mallikeri school's inclusion in Hattie KPS Magnet School

ಕೊಪ್ಪಳ 26:  ಮಳ್ಳಿಕೇರಿ ಗ್ರಾಮದ ಶಾಲೆಯನ್ನು ಹ್ಯಾಟಿ ಕೆಪಿಎಸ್ ಮಾಗ್ನೆಟ್ ಶಾಲೆಗೆ ಸೇರಿಸುವುದನ್ನು ವಿರೋಧಿಸಿ ಗ್ರಾಮದ ಪೋಷಕರ ಆಕ್ರೋಶ.""ಜನಾಭಿಪ್ರಾಯವಿಲ್ಲದೆ ಹ್ಯಾಟಿ, ಗಿಣಿಗೇರ ಕೆಪಿಎಸ್ ಮಾಗ್ನೆಟ್ ಶಾಲೆಗಳ ಕಾಮಗಾರಿ ಆರಂಭಿಸುತ್ತಿರುವ ಕೊಪ್ಪಳದ ಶಾಸಕರ ನಡೆ ಖಂಡಿಸಿ,ಸುತ್ತಲಿನ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮಾಗ್ನೆಟ್ ಯೋಜನೆಗೆ ವಿರೋಧ.""ಒಂದೇ ಒಂದು ಮಗು ನಮ್ಮೂರಿನಲ್ಲಿ ಓದಿದ್ರೂ ನಮಗೆ ನಮ್ಮೂರ ಸರ್ಕಾರಿ ಶಾಲೆಯಲ್ಲಿಯೇ ಕಲಿಸಬೇಕು, ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಜನತೆಯ ಪಟ್ಟು."ಕೊಪ್ಪಳ ತಾಲ್ಲೂಕಿನ ಮಳ್ಳಿಕೇರಿ ಗ್ರಾಮದ ಸರ್ಕಾರಿ ಶಾಲೆಯನ್ನು ಹ್ಯಾಟಿ ಕೆಪಿಎಸ್ ಶಾಲೆಗೆ ಮುಚ್ಚುವುದನ್ನು ವಿರೋಧಿಸಿ ಗ್ರಾಮದ ಶಾಲೆಯ ಎದುರು ಎಐಡಿಎಸ್‌ಓ ನೇತೃತ್ವದಲ್ಲಿ ಪೋಷಕರು ಪ್ರತಿಭಟನೆ ನಡೆಸಿದರು.   

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ರಾಜ್ಯ ಮುಖಂಡರಾದ ಸಿಂಧು ಕೌದಿ ಮಾತನಾಡಿ ನಮ್ಮ ಕೊಪ್ಪಳದ ಅನೇಕ ಹಳ್ಳಿಗಳಲ್ಲಿ ಇರುವುದು ಎಲ್ಲಾ ದುಡಿದು ಬದುಕುವ ಬಡವರು, ಕಾರ್ಮಿಕರು ಮತ್ತು ರೈತರು ಹಾಗೂ ಮಧ್ಯಮ ವರ್ಗದ ಜನರು ಈ ಭಾಗದ ಮಕ್ಕಳಿಗೆ ಶಿಕ್ಷಣ ಕೊಡುಸುವುದೇ ಕಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಶಾಲಾ,ಕಾಲೇಜು ಮತ್ತು ವಸತಿ ಶಾಲೆಗಳಲ್ಲಿ ಓದುವ ನಮ್ಮ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂಗಿರುವಾಗ ಪಕ್ಕದ 05 ಕಿಲೋಮೀಟರ್ ದೂರದಲ್ಲಿರುವ ಹ್ಯಾಟಿ ಶಾಲೆಗೆ ಮಳ್ಳಿಕೇರಿ ಶಾಲೆಯ ಮಕ್ಕಳನ್ನು ಹೇಗೆ ಸಾಧ್ಯ.

ಸರ್ಕಾರಿ ಶಾಲೆ ಮುಚ್ಚಿದರೆ, ನಮ್ಮ ಮಕ್ಕಳು ಕಲಿಯೋಕೆ ಆಗೋದಿಲ್ಲ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5 ವರ್ಷದ ಮಕ್ಕಳು 6-7 ಕಿಲೋ ಮೀಟರ್ ದೂರ ಹೇಗೆ ಹೋಗಬೇಕು? ಬಡವರ ಮಕ್ಕಳೆ ಹೆಚ್ಚು ಸಂಖ್ಯೆಯಲ್ಲಿ ದಾಖಲಾತಿ ಇರುವ ಮಳ್ಳಿಕೇರಿ ಸರ್ಕಾರಿ ಶಾಲೆ ಮುಚ್ಚುವುದು ಎಷ್ಟು ಸರಿ? ಈಗಾಗಲೇ ಮಾನ್ಯ ಕೊಪ್ಪಳದ ಶಾಸಕರು ಹ್ಯಾಟಿ, ಗಿಣಿಗೇರ ಕೆಪಿಎಸ್ ಶಾಲೆಗಳ ಕಾಮಗಾರಿಗೆ ಅಧಿಕೃತವಾಗಿ ಬಹಳ ವೇಗವಾಗಿ ಚಾಲನೆ ನೀಡುತ್ತಿದ್ದಾರೆ. ಆ ಕೆಪಿಎಸ್ ಶಾಲೆಗಳಿಗೆ ಸುತ್ತಲಿನ 5 ರಿಂದ 15 ಕಿಲೋಮೀಟರ್ ವ್ಯಾಪ್ತಿಯ ಶಾಲೆಗಳನ್ನು ಮುಚ್ಚುವತ್ತ ಸಾಗುತ್ತಿದ್ದಾರೆ.  

ಕೊಪ್ಪಳದ ಜನತೆ ಇಂತಹ ಬಡವರ ವಿರೋಧಿ, ಜನ ವಿರೋಧಿ ಯೋಜನೆಯನ್ನು ಪ್ರಶ್ನಿಸಿ ಬೃಹತ್ ಪ್ರತಿರೋಧ ಚಳುವಳಿ ಬೆಳೆಸುವ ಮೂಲಕ ಶಾಲೆಗಳನ್ನು ರಕ್ಷಿಸಲು ಮುಂದಾಗಬೇಕು ಎಂದರು.ಊರಿನ ಮಹಿಳೆಯರು ಮಾತನಾಡಿ ನಮ್ಮ ಊರಿನಲ್ಲಿ ಒಂದೇ ಒಂದು ಮಗು ಶಾಲೆಗೆ ಬಂದ್ರು ನಮ್ಮ ಮಕ್ಕಳನ್ನ ನಮ್ಮೂರಿನ ಶಾಲೆಯಲ್ಲಿಯೇ ಶಿಕ್ಷಣ ಕೊಡಬೇಕು. ಬೇರೆಕಡೆ ನಮ್ಮ ಮಕ್ಕಳನ್ನು ಕಳುಹಿಸಿ ನಾವು ಓದಿಸೋಕೆ ಆಗಲ್ಲ ಹಾಗಾಗಿ ನಮ್ಮೂರ ಶಾಲೆ ಮುಚ್ಚೋಕೆ ನಾವು ಬಿಡುವುದಿಲ್ಲ, ಹೋರಾಡುತ್ತೇವೆ ಎಂದರು.

ಹಾಗೇ ಊರಿನ ಹಿರಿಯರು,ಯುವಕರು ಮತ್ತು ಪೋಷಕರು ಮಾತನಾಡಿದರು. ಪ್ರತಿಭಟನೆಯಲ್ಲಿ ಎಐಡಿಎಸ್‌ಓ ಜಿಲ್ಲಾ ಸಂಘಟನಾಕಾರರಾದ ಪ್ರದೀಪ್, ಸಾರ್ವಜನಿಕ ಶಿಕ್ಷಣ ಉಳಿಸುವ ಸ್ವಯಂ ಸೇವಕರರಾದ ಶಾರದಾ ಗಡ್ಡಿ, ಊರಿನ ಪೋಷಕರಾದ ಮುತ್ತನಗೌಡ, ಶಿವನಗೌಡ, ಹನುಮರೆಡ್ಡಿ, ಮೈಲಾರ​‍್ಪ, ನಿಂಗಪ್ಪ, ನಾಗರಾಜ, ಚಿನ್ನಪ್ಪ, ಮಂಜುನಾಥ್, ಕೋಟೇಶ್, ವಸಂತ ಸೇರಿದಂತೆ ಊರಿನ ಮಹಿಳೆಯರು ಭಾಗವಹಿಸಿದ್ದರು.