ಅಹಂಕಾರ ಯಾವ ವ್ಯಕ್ತಿಯ ಮನಸಿನಲ್ಲಿ ಇರುತ್ತದೆ ಆತನು ಸಾಧನೆಯನ್ನು ಮಾಡಲು ಸಾಧ್ಯವಿಲ್ಲ: ಓಲೇಮಠದ ಆನಂದ

ಅಹಂಕಾರ ಯಾವ ವ್ಯಕ್ತಿಯ ಮನಸಿನಲ್ಲಿ ಇರುತ್ತದೆ ಆತನು ಸಾಧನೆಯನ್ನು ಮಾಡಲು ಸಾಧ್ಯವಿಲ್ಲ: ಓಲೇಮಠದ ಆನಂದ  A person who has ego in his mind cannot achieve success: Ole Matha's Ananda

ಅಹಂಕಾರ ಯಾವ ವ್ಯಕ್ತಿಯ ಮನಸಿನಲ್ಲಿ ಇರುತ್ತದೆ ಆತನು ಸಾಧನೆಯನ್ನು ಮಾಡಲು ಸಾಧ್ಯವಿಲ್ಲ: ಓಲೇಮಠದ ಆನಂದ  

ಜಮಖಂಡಿ 29; ನಾನು ಎಂಬ ಅಹಂಕಾರ ಯಾವ ವ್ಯಕ್ತಿಯ ಮನಸಿನಲ್ಲಿ ಇರುತ್ತದೆ ಆತನು ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಎಂದು ಓಲೇಮಠದ ಆನಂದ ದೇವರು ಹೇಳಿದರು. ನಗರದ ಚೌಡಯ್ಯ ನಗರದಲ್ಲಿ ನಡೆದ ಓಲೇಮಠದ ಶ್ರಾವಣ ಮಾಸದ ಪ್ರತಿ ಓಣಿಗೊಂದು ದಿನ ಪ್ರವಚನ ಕಾರ್ಯಕ್ರಮ ಹಾಗೂ ನಾಗಪ್ಪ ದೇವಸ್ಥಾನ ಜಾತ್ರ ಮಹೋತ್ಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು. ಯಾವುದೇ ವ್ಯಕ್ತಿಯು ದಾಸೋಹ, ದಾನ, ಧರ್ಮಗಳನ್ನು ಮಾಡುವ ಸಮಯದಲ್ಲಿ ನಿಸ್ವಾರ್ಥಕತೆಯಿಂದ ಸೇವೆಯನ್ನು ಸಲಿಸಿದ್ದರೆ ಮಾತ್ರ ದೇವರ ಕೃಪೆಗೆ ಪಾತ್ರನಾಗಲು ಸಾಧ್ಯ. ಅಹಂಕಾರದಿಂದ ನಾನು ಮಾಡಿದೆ ಎಂಬ ಮನೋಭಾವ ಮನಸಿನಲ್ಲಿ ಮುಡುತ್ತದೆಯೊ ಆತನು ದಾನ, ಧರ್ಮ, ದಾಸೋಹಗಳನ್ನು ಮಾಡಿದರು ಅದು ಪ್ರಯೀಜನವಾಗದು. ದಾಸೋಹಗಳನ್ನು ಮಾಡಿದಾಗ ದೇವರಲ್ಲಿ ನಿನ್ನ ಕೃಪೆ ನೀಡು ಎಂದು ದೇವರನ್ನು ಬೇಡಿಕೊಳ್ಳಬೇಕು. ಅಹಂಕಾರವನ್ನು ಮನಸಿನಿಂದ ತೆಗೆದುಹಾಕಬೇಕು ಎಂದರು. ಇಂದಿನ ಯುವಕರು ಒಳ್ಳೆಯ ಮಾರ್ಗದಲ್ಲಿ ನಡೆದುಕೊಳ್ಳಬೇಕು. ಹೆತ್ತ ತಂದೆ, ತಾಯಿಗಳು ಕಷ್ಟ ಪಟ್ಟು ಬೆಳಸುತ್ತಾರೆ. ಅವರ ಮನಸಿಗೆ ನೋವು ಉಂಟು ಮಾಡದ ಹಾಗೆ ನಡೆದುಕೊಂಡು ಸಾಧನೆ ಮಾಡುವ ಗುರಿಯನ್ನು ಹಾಗೂ ಹುಟ್ಟಿದ ಊರಿಗೆ ಮತ್ತು ರಾಜ್ಯಕ್ಕೆ ಕೀರ್ತಿ ತರುವಂತೆ ನಡೆದುಕೊಂಡರೆ ಮಾತ್ರ ಭಗವಂತ ಒಲಿಯುತ್ತಾನೆ. ಉಸಿರು ನಿಂತರು ಹೆಸರು ಉಳಿಯುವ ಹಾಗೆ ಹೆಸರು ಮಾಡಬೇಕು. ಹಾಗೆ ಒಳ್ಳೆಯ ಕೆಲಸಗಳನ್ನು ಮಾಡಬೇಕು. ನಾನು ಎಂಬ ಅಹಂಕಾರ ಮನಸಿನಲ್ಲಿ ಇರಬಾರದು. ದಾನ ಮಾಡುವಾಗ ನಿಸ್ವಾರ್ಥಕತೆಯಿಂದ ಸೇವೆಯನ್ನು ಮಾಡಬೇಕು. ಪೂಜೆ ಪುನಸ್ಕಾರಗಳನ್ನು ಮಾಡಿದರು ಸಹ ಅಲ್ಲಿ ಅಹಂಕಾರ ಇರಬಾರದು. ದೇವರ ಸೇವಕನಾಗಿ ಸೇವೆಯನ್ನು ಮಾಡಬೇಕು. ಮನೆಯಗೋಷ್ಕರ ಸೇವೆ ಮಾಡುತ್ತಾರೆ ಅವರ ಹೆಸರು ಇರುವುದಿಲ್ಲ. ಸಮಾಜಕ್ಕಾಗಿ ಯಾರು ಸೇವೆ ಮಾಡುತ್ತಾರೆ ಅವರ ಹೆಸರು ಅಜರಾಮರವಾಗಿ ಉಳಿಯುತ್ತದೆ. ಯಾರು ಕಾಯಕ ಮಾಡುತ್ತಾರೆ ಅವರು ಕೈಲಾಸ ಕಾಣುತ್ತಾರೆ. ದಾಸೋಹ ನೀಡುವ ಪ್ರಜ್ಞೆ ಮನಸಿನಲ್ಲಿ ಎಲ್ಲರಲ್ಲಿ ಮೂಡಬೇಕು ಎಂದು ಆಶೀರ್ವಚನ ನೀಡಿದರು. ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಆಶೀರ್ವಚನ ನೀಡಿದರು. ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಇದ್ದರು. ವೇದಿಕೆಯಲ್ಲಿ ಶಾಂಯವ್ವ ತುಂಗಳ, ಸಿಪಿಐ, ಮಲ್ಲಪ್ಪ ಮಡ್ಡಿ, ಅಪಾಸಾಬ ಮನಗೂಳಿ, ಮಲ್ಲಪ ಉಳ್ಳಾಗಡ್ಡಿ, ವೀರಭದ್ರ ಶಾಸ್ತಿ, ಮಲ್ಲಪ್ಪ ಗಾಡಿವಡ್ಡರ, ಮಂಜು ಭೂವಿ ಸೇರಿದಂತೆ ಅನೇಕರು ಉಪಸ್ಥಿತರಿದರು. ಡಾ.ಶಾರದಾ ಮುಳ್ಳೂರ ಅಕ್ಕಮಾದೇವಿ ವಚನವನ್ನು ಹೇಳಿದರು. ಸರಸ್ವತಿ ಸಬರದ ಹಾಗೂ ಸಂಗಡಿಗರು ಸಂಗೀತವನ್ನು ಹಾಡಿದರು. ಪ್ರದೀಪ ಶೇಗುಣಸಿ ಸ್ವಾಗತಿಸಿದರು, ಬಸವರಾಜ ಬಳಗಾರ ನಿರೂಪಿಸಿದರು.