ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 57ನೇ ವಾರ್ಷಿಕ ಸರ್ವಸಾಧಾರಣ ಸಭೆ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 57ನೇ ವಾರ್ಷಿಕ ಸರ್ವಸಾಧಾರಣ ಸಭೆ  57th Annual General Meeting of the Hukkeri Rural Electric Cooperative Society

ಲೋಕದರ್ಶನ ವರದಿ 

ಹುಕ್ಕೇರಿ ಸೆ.24: ಸಹಕಾರಿ ತತ್ವದಡಿ ದಿವಂಗತ ಸಹಕಾರಿ ಮಹರ್ಷಿ ಅಪ್ಪಣಗೌಡ ಪಾಟೀಲ ಹಾಗೂ ಸಹಕಾರದ ಭೀಷ್ಮ ಬಸಗೌಡ ಅ. ಪಾಟೀಲ ಅವರ ಸತತ ಪ್ರಯತ್ನದಿಂದ ಸ್ಥಾಪನೆಯಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 57ನೇ ವಾರ್ಷಿಕ ಸರ್ವಸಾಧಾರಣ ಸಭೆ ಸಂಘದ ಆವರಣದಲ್ಲಿ ನಡೆಯಿತು.  

ಸಂಘದ ಅಧ್ಯಕ್ಷ ಮಹಾವೀರ ವಿ. ನಿಲಜಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ಹಾಗೂ ಅನುಪಾಲನಾ ವರದಿ, 2026-27ನೇ ಸಾಲಿನ ಕಾರ್ಯಯೋಜನೆ, ಬಜೆಟ್, ಸದಸ್ಯರ ಸೇರೆ​‍್ಡ ಮತ್ತು ಸದಸ್ಯತ್ವ ರದ್ದತಿ ಸೇರಿದಂತೆ ವಿವಿಧ ವಿಷಯಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.  

ಕಬ್ಬು ಬೆಳೆಯುವ ರೈತರಿಗೆ ಸಮರ​‍್ಕ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಉತ್ಪಾದನೆಯ ಕೊರತೆಯಿಂದ ಉಂಟಾಗಿರುವ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ, ಸಹಕಾರ ಇಲಾಖೆ, ಶಾಸಕರು, ಗ್ರಾಮೀಣ ವಿದ್ಯುತ್ ನಿಗಮ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಸುವಂತೆ ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಮನವಿ ಮಾಡಿದರು.  

ಸಭೆಯಲ್ಲಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ್ ಮುನ್ನೋಳಿ, ನಿರ್ದೇಶಕರಾದ ಗಜಾನನ ನಿಂಗಪ್ಪ ಕ್ವಳ್ಳಿ, ವಿನಯಗೌಡ ಅಪ್ಪಯ್ಯಗೌಡ ಪಾಟೀಲ, ಮಹಾದೇವ ಕ್ಷೀರಸಾಗರ, ನಂದು ಮುಡಶಿ, ಸುಭಾಷ ಕಾಸರಕರ, ಸುನೀಲ್ ಅಣ್ಣಾಸಾಹೇಬ ಪರ್ವತರಾವ್, ಅಣ್ಣಾಸಾಹೇಬ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.  ಸ್ಥಳೀಯ ಅಭಿಯಂತರ ಎನ್‌.ಜೆ. ಖೇಮಲಾಪುರೆ ನಿರೂಪಿಸಿ, ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌. ಪೂಜಾರಿ ವಂದಿಸಿದರು.