ಸೆ.12ರಿಂದ ಬೆಟಗೇರಿಯಲ್ಲಿ 42ನೇ ಸತ್ಸಂಗ ಸಮ್ಮೇಳನ

  ಸೆ.12ರಿಂದ ಬೆಟಗೇರಿಯಲ್ಲಿ 42ನೇ ಸತ್ಸಂಗ ಸಮ್ಮೇಳನ 42nd Satsang Conference in Betageri from September 12

ಲೋಕದರ್ಶನ ವರದಿ 

 ವರದಿ: ಅಡಿವೇಶ ಮುಧೋಳ. 

               ಬೆಟಗೇರಿ  10: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 42ನೇ ಸತ್ಸಂಗ ಸಮ್ಮೇಳನ ಇದೇ ಸೆ.12ರಿಂದ ಸೆ.16ರತನಕ ನಡೆಯಲಿದ್ದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರೆ​‍್ನ ಜರುಗಲಿದೆ.  

          ಸೆ.12 ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ಸಾಯಂಕಾಲ 7:30ಗಂಟೆಗೆ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ, ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, 

            ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿಯವರಿಂದ  ಆನೆ ಕುದುರೆ ಭಂಡಾರವಿರ್ದಡೇನೋ? ಎಂಬ ವಿಷಯದ ಮೇಲೆ ಪ್ರವಚನ,   ಸೆ.13ರಂದು ಸಂಜೆ 7:30 ಗಂಟೆಗೆ ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ(ಅಸುಂಡಿ), ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಗದಗದ ಶರಣೆ ಮೈತ್ರಾ ತಾಯಿ, ಹಿಪ್ಪರಗಿ ಸಿದ್ಧಾರೂಢ ಶರಣರಿಂದ ಅನಿಮಿತ್ಯವರಿಗಳೆನಿಪ ಕಾಮಾದಿಗಳಿಗೆ ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ.  

            ಸೆ.14ರಂದು ಸಾಯಂಕಾಲ 7:30ಗಂಟೆಗೆ  ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ(ಅಸುಂಡಿ), ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಹಿಪ್ಪರಗಿ ಸಿದ್ಧಾರೂಢ ಶರಣರು, ಗದಗದ ಶರಣೆ ಮೈತ್ರಾ ತಾಯಿಯವರಿಂದ ಕಾಯವಿಡಿದಾತ್ಮರಾಶಿಗೆ ಪರತರಮುಕ್ತಿಗುಪಾಯವಿದು ನಿಜ ಶಿವಮಂತ್ರವಣ್ಣ ಎಂಬ ವಿಷಯದ ಮೇಲೆ ಪ್ರವಚನ ನಡೆಯಲಿದೆ.