‘ಆರೋಗ್ಯವನ್ನು ಕಾಪಾಡಲು ಯುವಜನಾಂಗ ಕಾರ್ಯಗತವಾಗಬೇಕು’

‘ಆರೋಗ್ಯವನ್ನು ಕಾಪಾಡಲು ಯುವಜನಾಂಗ ಕಾರ್ಯಗತವಾಗಬೇಕು’ 'Young people must take action to protect their health'


ಬೆಳಗಾವಿ 06: ಆರೋಗ್ಯ ವಂಚಿತ ಪ್ರದೇಶದ ಜನರಿಗೆ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಿಗೆ ಶಿಕ್ಷಣ, ತರಬೇತಿ, ಕೌಶಲ್ಯಾಭಿವೃದ್ದಿಯೊಂದಿಗೆ ಅವರ ಆರೋಗ್ಯವನ್ನು ಸುಧಾರಿಸಲು ಪ್ರಾಧ್ಯಾಣ್ಯತೆ ನೀಡಬೇಕು. ಮಹಿಳೆಯರಲ್ಲಿ ಕಂಡು ಬರುವ ರೋಗಗಳನ್ನು ತಡೆಗಟ್ಟಲು ಸಕಾರಾತ್ಮಕವಾದ ಕ್ರಮಗಳನ್ನು ಅನುಸರಿಸುವಲ್ಲಿ ಯುವಜನರು ಪ್ರಮುಖ ಪಾತ್ರವಹಿಸಬೇಕೆಂದು ರಾಯಲ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ರಾನೀ ಠಕರ ಅವರು ಹೇಳಿದರು.    

ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ಏರಿ​‍್ಡಸಿದ್ದ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯದಲ್ಲಿ ಸಾಕಷ್ಟು ನಾವಿನ್ಯತೆ ಬರುತ್ತಿದ್ದು, ಅದನ್ನು ಅಳವಡಿಸಿಕೊಂಡು ತಾಯಿ ಮಕ್ಕಳ ಅನಾರೋಗ್ಯವನ್ನು ತಡೆಗಟ್ಟುವದರ ಜೊತೆಗೆ ಆರೋಗ್ಯವನ್ನು ಕಾಪಾಡಲು ಯುವಜನಾಂಗ ಕಾರ್ಯಗತವಾಗಬೇಕು ಎಂದು ತಿಳಿಸಿದರು.  

ಪೆಲ್ವಿಕ್ ಮತ್ತು ಮಗುವಿನ ಜನನ, ಜನನಾಂಗದ ಗಾಯಗಳ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ನಿರ್ವಹಣೆ ಕುರಿತು ನಾವಿನ್ಯತೆ, ಜನನಾಂಗದ ಹಿಗ್ಗುವಿಕೆ ರೋಗನಿರ್ಣಯ, ನಿರ್ವಹಣೆ ಮತ್ತು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಹೊಸ ಓಷಧಿಗಳೊಂದಿಗೆ ಎಂಡೊಮೆಟ್ರಿಯೊಸಿಸ್ ಮತ್ತು ಫೈಬ್ರಾಯ್ಡ್ಗಳ ವೈದ್ಯಕೀಯ ನಿರ್ವಹಣೆ (ಗರ್ಭಕಂಠ)ಯ ಕುರಿತಾಗಿ ಶಿಕ್ಷಣ ಕಾರ್ಯಾಗಾರವನ್ನು ಏರಿ​‍್ಡಸಲಾಗಿತ್ತು.   

 ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ ಅವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ದಾಪುಗಾಲು ಇಟ್ಟಿದ್ದು, ಅದರಿಂದಲೇ ತಡೆಗಟ್ಟುವಿಕೆ, ರೋಗನಿರ್ಣಯ, ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲವೂ ನಡೆಯುತ್ತಿದೆ. ತಂತ್ರಜ್ಞಾನ ಬದಲಾದಂತೆ ಕೆಎಲ್‌ಇ ಸಂಸ್ತೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಮುಂದುವರೆದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಹಿರಿಯ ತಜ್ಞವೈದ್ಯರಾದ ಡಾ. ಅಬ್ದುಲ್ ಸುಲ್ತಾನ್, ಡಾ. ವೀರೇಂದ್ರಕುಮಾರ್ ಮಾತನಾಡಿದರು.   

ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಮುಖ್ಯಸ್ಥರಾದ ಡಾ. ಯಶಿತಾ ಪೂಜಾರ ಅವರು ಸ್ವಾಗತಿಸಿ, ಪರಿಚಯಿಸಿದರು.  ಬೆಳಗಾವಿ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಎಂ.ಬಿ. ಬೆಲ್ಲದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಕೆಎಂಸಿ ವೀಕ್ಷಕರಾಗಿ ಡಾ. ಎಂ ಸಿ ಮೆಟಗುಡ್ ಅವರು ಉಪಸ್ಥಿತರಿದ್ದರು. ಡಾ. ಶ್ರುತಿ ಆಂದೋಲಾ ಅವರು ವಂದಿಸಿದರು.    

ಸಮಾರಂಭದಲ್ಲಿ ಡಾ. ಕಮಲ್ ಪಾಟೀಲ್, ಡಾ. ಅನಿತಾ ದಲಾಲ್, ಡಾ. ವನಿತಾ ಮೆಟ್ಗುಡ್ ಡಾ. ರಾಜೇಶ್ವರಿ ಕಪೂರ್,  ಡಾ. ವಸಂತ್ ಕಬ್ಬೂರ, ಡಾ. ರುಮಾನಾ ಮಾಲ್ದಾರ್ ಡಾ. ರಮಾದೇವಿ ವಾಣಿ, ಡಾ. ಸ್ವಾತಿ ವೈದ್ಯ ಡಾ. ಮಹಾದೇವಿ ಸವಣೂರ್ ಡಾ. ಫರ್ಜಾನಾ  ಸೇರಿದಂತೆ ಮುಂತಾದವರು ಉಪಸ್ಥಿರಿದ್ದರು. ಕಾರ್ಯಾಗಾರದಲ್ಲಿ ಸುಮಾರು 120ಕ್ಕೂ ಅಧಿಕ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞವೈದ್ಯರು ಪಾಲ್ಗೊಂಡಿದ್ದರು.