ಟೀಸರ್‌ನಿಂದ ಭರವಸೆ ಮೂಡಿಸಿದ 'ವಿಕಲ್ಪ'
'Vikalpa' inspires hope with teaser
ಲೋಕದರ್ಶನ ವರದಿ
ಶಿರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ ಹೊಸ ಪ್ರತಿಭೆಗಳ 'ವಿಕಲ್ಪ' ಚಿತ್ರ ಈ ವರ್ಷದ ಉತ್ತಮ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗುವ ಭರವಸೆ ಮೂಡಿಸುತ್ತಿದೆ ಟೀಸರ್. ಹೌದು ವಾಸ್ತವ ಮತ್ತು ಕಲ್ಪನೆಯ ನಡುವಿನ ಕಥೆಯನ್ನು ಒಳಗೊಂಡ ಸೈಕಲಾಜಿಕಲ್ ಥ್ರಿಲ್ಲರ್ 'ವಿಕಲ್ಪ' ಚಿತ್ರದ ಟೀಸರ್ ರೀಲೀಸ್ ಆಗಿದ್ದು, ಕುತೂಹಲ ಮೂಡಿಸುತ್ತಿದೆ. ಕರಾವಳಿ ಭಾಗದ ಕಥೆ ಒಳಗೊಂಡ ಈ ಚಿತ್ರದ ನಾಯಕನಾಗಿ ಮೊದಲಬಾರಿ ಪೃಥ್ವಿರಾಜ್ ಪಾಟೀಲ್ ಅಭಿನಯದ ಜೊತೆಗೆ ಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ನ್ನು ಪತ್ರಕರ್ತ, ಸಾಹಿತಿ ಜೋಗಿ ಬಿಡುಗಡೆ ಮಾಡಿ, 'ವಿಕಲ್ಪ 2026ರಲ್ಲಿ ಬರುವ ಅತ್ಯುತ್ತಮ ಸಿನಿಮಾಗಳ ಲಿಸ್ಟ್‌ನಲ್ಲಿ ನಿಲ್ಲುವ ಸಿನಿಮಾ ಆಗುತ್ತದೆ ಎಂಬ ವಿಶ್ವಾಸ ಬಂದಿದೆ. ಯಾಕಂದ್ರೆ ನಾನು ಚಿತ್ರದ ಒಂದಿಷ್ಟು ದೃಶ್ಯಗಳನ್ನು ನೋಡಿದ್ದೇನೆ. ಹಾಗಾಗಿ ಈ ಮಾತು ಹೇಳುತ್ತಿದ್ದೆನೆ. ನಿರ್ದೇಶಕರಿಗೆ ಮೊದಲ ಚಿತ್ರವಾದರೂ ಅಚ್ಚು ಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಹಾಗಾಗಿ ತಂಡಕ್ಕೆ ಒಳ್ಳೆಯದಾಗಲಿ' ಎಂದರು.
ನಂತರ ಚಿತ್ರದ ನಾಯಕ ಕಮ್ ನಿರ್ದೇಶಕ ಪೃಥ್ವಿರಾಜ್ ಪಾಟೀಲ್ 'ತುಂಬಾ ಸಿರಿಯಸ್ ಕಥೆ ಇದು. ಸೈಕ್ರಿಯಾಟಿಸ್ಟ್ ಕನ್ಸಲೇಟ್ ತಗೊಂಡು ಸಿನಿಮಾ ಮಾಡಲಾಗಿದೆ. ಸತ್ಯ ಮತ್ತು ಕಲ್ಪನೆ ನಡುವೆ ಇರುವ ಅಂಶದ ಮೇಲೆ ಕಥೆ ಹೇಳಲಾಗುತ್ತದೆ. ಮೂರು ಟೈಮ್ ಲೈನ್‌ನಲ್ಲಿ ಸಿನಿಮಾ ಸಾಗುತ್ತದೆ. ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಒಂದು ಸಂಪೂರ್ಣ ಥ್ರಿಲ್ಲರ್ ಚಿತ್ರ ಎನ್ನುವುದು ವಿಶೇಷ. ಸೈಕಲಾಜಿಕಲ್ ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಇಡೀ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರಕ್ಕೆ ಚಿತ್ರದ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರಗಳೂ ಮಾತನಾಡುತ್ತವೆ. ಪ್ರತಿ ಪಾತ್ರಗಳೂ ನೋಡುಗರ ಮನಮುಟ್ಟುತ್ತವೆ' ಎಂದು ಹೇಳುವರು.
ಚಿತ್ರದಲ್ಲಿ ಸೈಕ್ರಿಯಾಟಿಸ್ಟ್ ಪಾತ್ರ ಮಾಡಿರುವ ಹರಿಣಿ ಶ್ರೀಕಾಂತ್ ಮಾತನಾಡಿ, 'ಒಂದು ಒಳ್ಳೆಯ ಕಥೆ ಇರುವ ಸಿನಿಮಾವಿದು. ನಿರ್ದೇಶಕರು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ನಾನಿಲ್ಲಿ ಇದೇ ಮೊದಲಬಾರಿ ಸೈಕಿಯಾಟ್ರಿಸ್ಟ್ ಪಾತ್ರ ಮಾಡಿದ್ದೇನೆ. ಅದ್ಭುತವಾಗಿ ಚಿತ್ರ ಬಂದಿದೆ. ಪ್ರತಿಯೊಬ್ಬರು ಪಾತ್ರವಾಗಿ ಈ ಸಿನಿಮಾ ನೋಡುತ್ತಿರಾ' ಎನ್ನುವರು. ಚಿತ್ರದ ನಾಯಕಿ ನಾಗಶ್ರೀ ಹೆಬ್ಬಾರ್ 'ಕಥೆಯಲ್ಲಿ ಕ್ಯಾರೆಕ್ಟರ್ ನೋಡಿ ಈ ಸಿನಿಮಾ ಮಾಡಲೇ ಬೇಕು ಅನಿಸಿತು. ಮೂಲತಃ ನಾನು ರಂಗಭೂಮಿ ಕಲಾವಿದೆ. ಸಿನಿಮಾ ಮೊದಲ ಅನುಭವ. ನನ್ನ ಪಾತ್ರದ ಹೆಸರು ಸಮುದ್ಯತಾ' ಎಂದು ಹೇಳಿದರು.
ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ 'ವಿಕಲ್ಪ' ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದಲ್ಯಾಂರ್ಡ್ ಸೇರಿದಂತೆ ವಿದೇಶಗಳಲ್ಲೂ 'ವಿಕಲ್ಪ'ದ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರವನ್ನು ಸುರೂಸ್ ಟಾಕೀಸ್ ಬ್ಯಾನರ್‌ನಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ನಿರ್ಮಾಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕರು ಸೇರಿದಂತೆ ನಟರಾದ ಗಣಪತಿ ವಡ್ಡಿನಗದ್ದೆ, ಗೀರೀಶ್, ಸ್ವರೂಪ್ ಬಚ್ಚ್, ಪೂಜಾ ಬಚ್ಚ್ ಸಂಗೀತ ನಿರ್ದೇಶಕ ಸಂವತ್ಸರ, ಸಂಕಲನಕಾರ ಸುರೇಶ್ ಆರುಮುಗಮ್ ತಮ್ಮ ಅನುಭವ ಹಂಚಿಕೊಂಡರು. ಅಂದಂಗೆ ಸಿನಿಮಾ ಇದೇ ಜನವರಿ 30ರಂದು ರಾಜ್ಯಾದ್ಯಂತ ರೀಲೀಸ್ ಆಗಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 