‘ಕನ್ನಡ ಸಾಹಿತ್ಯಕ್ಕೆ ವೀರಪ್ಪ ನಾಗಶೆಟ್ಟಿ ಅವರ ಕೊಡುಗೆ’

‘ಕನ್ನಡ ಸಾಹಿತ್ಯಕ್ಕೆ ವೀರಪ್ಪ ನಾಗಶೆಟ್ಟಿ ಅವರ ಕೊಡುಗೆ’ 'Veerappa Nagashetty's Contribution to Kannada Literature'

ಧಾರವಾಡ  08 : ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಲಿಂ. ವೀರ​‍್ಪ ವೀರಭದ್ರ​‍್ಪ ನಾಗಶೆಟ್ಟಿ ಅವರು 126 ವರ್ಷಗಳ ಹಿಂದೆಓರ್ವ ಸೃಜನಶೀಲ ಬರಹಗಾರರಾಗಿದ್ದರು ಮಾತ್ರವಲ್ಲ, ಆದರ್ಶ ಶಿಕ್ಷಕರೂ ಆಗಿದ್ದರುಎಂದು ಹುಬ್ಬಳ್ಳಿ ಉಣಕಲ್‌ನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್‌. ಬಿ. ಹಿರೇಮಠ ಹೇಳಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ವೀರ​‍್ಪ ವೀರಭದ್ರ​‍್ಪ ನಾಗಶೆಟ್ಟಿದತ್ತಿಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯಕ್ಕೆ ವೀರ​‍್ಪ ನಾಗಶೆಟ್ಟಿಅವರ ಕೊಡುಗೆ’ ಕುರಿತು ಮಾತನಾಡುತ್ತಿದ್ದರು. 

ದಿ. ವೀರ​‍್ಪ ನಾಗಶೆಟ್ಟಿತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಕೃಷಿ ಮಾಡಿದ್ದು, ಅವರಲ್ಲಿದ್ದಕಾವ್ಯ ಶಕ್ತಿ ದೊಡ್ಡದು.ಅವರು ಎಂದಿಗೂ ಪ್ರಚಾರಕ್ಕಾಗಿತಮ್ಮ ಸಾಹಿತ್ಯ ಕೃಷಿ ಮಾಡದೇತಾವು ರಚಿಸಿದ ಸಾಹಿತ್ಯಜನೋಪಯೋಗಿ ಆಗಿರಬೇಕು ಎಂಬುದಾಗಿತ್ತು. ಶಂಕರಾಚಾರ್ಯರು ವಿರಚಿತ ‘ಶ್ರೀ ಶಿವಾನಂದ ಲಹರಿ’ ಎಂಬ ಸಂಸ್ಕೃತ ಕಾವ್ಯವನ್ನು ಮೂಲ ಕೃತಿ ಗೆಚ್ಯುತಿಯಾಗದಂತೆ ಕನ್ನಡಕ್ಕೆ ಅನುವಾದಿಸಿ, ಜನಸಾಮಾನ್ಯರು ಓದಿ ಅರ್ಥ ಮಾಡಿಕೊಳ್ಳುವಂತೆ ಬರೆದರು. ‘ವಜ್ರದುಂಗುರ’ ‘ಗುರುರಾಜಚರಿತ್ರೆ’ ‘ಶಿವಸ್ತೋತ್ರ’ ಎಂಬ ಮೌಲಿಕ ಕೃತಿಗಳನ್ನು ರಚಿಸಿ, ಓದುಗರಲ್ಲಿ ಆಸಕ್ತಿ ಬೆಳೆಸಿದರು.ಈ ಎಲ್ಲಾ ಕೃತಿಗಳು ಮನುಷ್ಯರ ಸಾರ್ಥಕ ಬದುಕಿಗೆಕೈಗನ್ನಡಿಯಾಗಿವೆ. ಅವರು ಬರೆದ ಅನೇಕ ಕೃತಿಗಳು ಇನ್ನೂ ಪ್ರಕಟಣೆಆಗಿಲ್ಲ. ಅವರ ಈ ಸಾಹಿತ್ಯ ಸೇವೆ ಪ್ರಚಾರಕ್ಕಾಗದೆಆಚಾರಕ್ಕಾಗಿ ಮಾಡಿದ್ದರುಎಂದು ಹೇಳಿದರು. 

ಹುಬ್ಬಳ್ಳಿಯ  ಬಸವ ಕೇಂದ್ರದಅಧ್ಯಕ್ಷ ಪ್ರೊ. ಜಿ. ಬಿ. ಹಳ್ಯಾಳ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಾಹಿತ್ಯ, ಸಮಾಜಸೇವೆ ಹಾಗೂ ದೇಶ ಸೇವೆ ಮಾಡಿದ ಪ್ರಾತಃ ಸ್ಮರಣೀಯರ ಸ್ಮರಣೆಗಾಗಿ ಇಂತಹ ದತ್ತಿ ಸ್ಥಾಪನೆ ಮಾಡಲಾಗುತ್ತದೆ. ದಿ. ವೀರಪ್ಪ ನಾಗಶೆಟ್ಟಿ ಅವರನ್ನು ಅವರ ಬಂಧುಗಳು ದತ್ತಿ ಮೂಲಕ ಸ್ಮರಣೆ ಮಾಡುತ್ತಿರುವುದು ಅಭಿನಂದನೀಯ.ಈ ಪ್ರಶಸ್ತಿ ನನಗೆ ಇನ್ನೂ ಹೆಚ್ಚು ಬಸವ ಸೇವೆ ಮಾಡಲು ಸ್ಪೂರ್ತಿ ನೀಡಿದೆಎಂದರು.  

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ.ಸಂಘದಉಪಾಧ್ಯಕ್ಷಡಾ.ಸಂಜೀವಕುಲಕರ್ಣಿ ಮಾತನಾಡಿ, ದಿ.ವೀರ​‍್ಪ ನಾಗಶೆಟ್ಟಿಅವರುತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯಅಭಿರುಚಿ ಜೀವಂತವಾಗಿರಿಸಿದ್ದಾರೆ.ಶಂಕರಾಚಾರ್ಯರ ಸಂಸ್ಕೃತದ ‘ ಶಿವಾನಂದಲಹರಿ’ ಕೃತಿಕನ್ನಡಕ್ಕೆ ಅನುವಾದಿಸುವುದು ಸುಲಭದಕಾರ್ಯವಲ್ಲ. ನಾಲ್ಕನೇ ತಲೆಮಾರಿನವರು ವೀರ​‍್ಪ ನಾಗಶೆಟ್ಟಿಯವರನ್ನು ಸ್ಮರಿಸುವ ಪುಣ್ಯದಕಾರ್ಯ ಮಾಡಿದ್ದಾರೆಎಂದರು. 

ಧಾರವಾಡಜಿನ ಸಂಕೀರ್ತನತಂಡದ ಸದಸ್ಯರಾದಕವಿತಾತುಮ್ಮಿನಕೊಪ್ಪ, ಅನಿತಾ ಗಾಳಿ, ಮೈನಾ ದೇಸಾಯಿ ಪ್ರಾರ್ಥಿಸಿದರು. ವೇದಿಕೆಯಲ್ಲಿದತ್ತಿದಾನಿ ಅಕ್ಕಮಹಾದೇವಿ ನಾಗಶೆಟ್ಟಿ, ಎಸ್‌.ಎಸ್‌. ನಾಗಶೆಟ್ಟಿಇದ್ದರು.2024-25 ನೇ ಸಾಲಿನಲ್ಲಿಕಿತ್ತೂರಿನಎಸ್‌.ಜಿ. ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಕು.ಆದರ್ಶ ಬಾಳೇಕುಂದರಗಿ ಅವರನ್ನುದತ್ತಿ ಪರವಾಗಿ ಸನ್ಮಾನಿಸಲಾಯಿತು. 

ಪ್ರಾರಂಭದಲ್ಲಿ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ಮತ್ತು ಪ್ರಿ. ಶಶಿಧರ ತೋಡಕರ ಸನ್ಮಾನಿತರನ್ನು ಪರಿಚಯಿಸಿದರು. ಡಾ ಮಹೇಶ ಹೊರಕೇರಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು. 

ಕಾರ್ಯಕ್ರಮದಲ್ಲಿ ಸತೀಶತುರಮರಿ, ಸಿ.ಎಸ್‌. ಪಾಟೀಲ, ಅಕ್ಕಮ್ಮ, ಪ್ರಭಾವತಿ, ರೇಣುಕಾ, ಚಂದ್ರಶೇಖರ ನಾಗಶೆಟ್ಟಿ, ರಾಜಶೇಖರ ನಾಗಶೆಟ್ಟಿ, ಬಿ.ಡಿ. ಪಾಟೀಲ, ಎಸ್‌. ಎಸ್‌. ಲಕ್ಷ್ಮೇಶ್ವರ, ದಳವಾಯಿ, ಬಿ.ಎಸ್‌. ಸಂಗಟಿ, ಶಿವಾನಂದ ಕೊಟ್ಟೂರಶೆಟ್ಟಿ, ಸುರೇಶ ಹೊರಕೇರಿ, ರಾಜಶೇಖರತುರಮರಿ, ಮರಿಗೌಡರ, ಡಾ.ಚಿದಾನಂದ ಮಾಸನಕಟ್ಟಿ, ಪ್ರಕಾಶಜಕಾತಿ, ಮಹಾಂತೇಶ ನರೇಗಲ್ಲ ಸೇರಿದಂತೆ ನಾಗಶೆಟ್ಟಿ ಪರಿವಾರದವರುಇದ್ದರು.